ತಮ್ಮ ನೇಣು ಬಿಗಿದುಕೊಂಡಿದ್ದ ಸೀರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಕ್ಕಾ! - Mahanayaka
10:12 AM Thursday 12 - December 2024

ತಮ್ಮ ನೇಣು ಬಿಗಿದುಕೊಂಡಿದ್ದ ಸೀರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಕ್ಕಾ!

nagaraja bhagyalaxmi
27/11/2021

ಬ್ಯಾಡಗಿ: ಹಾವೇರಿ ವಿಧಾನಸಭಾ ಕ್ಷೇತ್ರ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳು ಒಬ್ಬರ ಹಿಂದೊಬ್ಬರಂತೆ ತಮ್ಮ ಜೀವನವನ್ನು ಕೊನೆಗಾಣಿಸಿದ ದುರಂತ ಘಟನೆ ಬ್ಯಾಟಗಿ ಪಟ್ಟಣದ ವಿನಾಯಕ ನಗರದಲ್ಲಿ ಶುಕ್ರವಾರ ನಡೆದಿದೆ.

16 ವರ್ಷ ವಯಸ್ಸಿನ ನಾಗರಾಜ ಚಂದ್ರ ಛಲವಾದಿ ಹಾಗೂ 18 ವರ್ಷ ವಯಸ್ಸಿನ ಭಾಗ್ಯಲಕ್ಷ್ಮಿ ಛಲವಾದಿ ಆತ್ಮಹತ್ಯೆಗೆ ಶರಣಾದವರಾಗಿದ್ದು, ತಂದೆಯ ಮಾತಿನಿಂದ ನೊಂದು ತಮ್ಮ ನಾಗರಾಜ ಆತ್ಮಹತ್ಯೆಗೆ ಶರಣಾಗಿದ್ದು, ತಮ್ಮನ ಸಾವನ್ನು ಅರಗಿಸಿಕೊಳ್ಳಲಾಗದೇ ಅಕ್ಕ ಭಾಗ್ಯಲಕ್ಷ್ಮಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ವರದಿಯಾಗಿದೆ.

10ನೇ ತರಗತಿಯಲ್ಲಿ ನಾಗರಾಜ ವ್ಯಾಸಂಗ ಮಾಡುತ್ತಿದ್ದು, ಹೀಗಾಗಿ, ಸರಿಯಾಗಿ ಶಾಲೆಗೆ ಹೋಗು ಅವರಿವರ ಜೊತೆಗೆ ಸುತ್ತಬೇಡ ಎಂದು ತಂದೆ ಮಗನಿಗೆ ಬುದ್ಧಿ ಹೇಳಿದ್ದಾರೆನ್ನಲಾಗಿದೆ. ತಂದೆಯ ಮಾತಿನಿಂದ ತೀವ್ರವಾಗಿ ನೊಂದಿದ್ದ ನಾಗರಾಜ್ ಬೆಳಗ್ಗಿನ ಜಾವ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಇತ್ತ ತಮ್ಮನ ಸಾವಿನ ಸುದ್ದಿ ಕೇಳಿ ಅಕ್ಕ ಭಾಗ್ಯ ಲಕ್ಷ್ಮೀ ಆಸ್ಪತ್ರೆಗೆ ಓಡಿ ಬಂದಿದ್ದು, ತಮ್ಮನ ಮೃತದೇಹವನ್ನು ನೋಡಿತ್ತಿದ್ದಂತೆಯೇ ತೀವ್ರವಾಗಿ ಆಘಾತಕ್ಕೊಳಗಾಗಿದ್ದಾಳೆ ಎನ್ನಲಾಗಿದೆ. ಎಲ್ಲರೂ ಆಸ್ಪತ್ರೆಯಲ್ಲಿರುವಾಗ ಭಾಗ್ಯಲಕ್ಷ್ಮಿ ನೇರವಾಗಿ ಮನೆಗೆ ಹೋಗಿ ತಮ್ಮ ನೇಣು ಬಿಗಿದುಕೊಂಡಿದ್ದ ಅದೇ ಸೀರೆಗೆ ತಾನು ಕೂಡ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಆಕೆಯನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

ಚಿಕ್ಕ ವಯಸ್ಸಿನಿಂದ ಮಕ್ಕಳ ಬೇಕು, ಬೇಡಗಳನ್ನು ನೋಡುತ್ತಿರುವ ತಂದೆ—ತಾಯಿಗೆ ಅವರಿಗೆ ಬುದ್ಧಿ ಹೇಳುವ ಹಕ್ಕು ಕೂಡ ಇಲ್ಲವೇ ಎನ್ನುವ ಪ್ರಶ್ನೆಗಳನ್ನು ಈ ಘಟನೆಯ ಬೆನ್ನಲ್ಲೇ ಪೋಷಕರು ಕೇಳುವಂತಾಗಿದೆ. ಆದರೆ, ಇಂದಿನ ಮಕ್ಕಳ ಸೂಕ್ಷ್ಮ ಮನಸ್ಸನ್ನು ಪೋಷಕರು ಅರಿಯುವುದು ಕೂಡ ಪೋಷಕರ ಜವಾಬ್ದಾರಿ ಎನ್ನುವುದನ್ನು ಮರೆಯಬಾರದು ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಂಗಳೂರು: ನಾಗಬನ ಭಗ್ನಗೊಳಿಸಿದ ಪ್ರಕರಣ | 8 ಆರೋಪಿಗಳು ಅರೆಸ್ಟ್

ಡಿಜೆ ಸೌಂಡ್ ಗೆ ಹೃದಯಾಘಾತಗೊಂಡು 63 ಕೋಳಿಗಳ ಸಾವು

ಬೆಲೆ ಹೆಚ್ಚಿಸಿ ಶಾಕ್ ನೀಡಿದ್ದ ಏರ್ಟೆಲ್ ಈಗ ನೀಡಿರುವ ಆಫರ್ ಏನು ಗೊತ್ತಾ?

ಒಂದೇ ದಿನದಲ್ಲಿ ಫೇಮಸ್ ಆದ ‘ಗುಟ್ಕಾ ಮ್ಯಾನ್’ ಗೆ ಶುರುವಾಯ್ತು ತಲೆನೋವು! | ಪಕ್ಕದಲ್ಲಿದ್ದ ಹುಡುಗಿ ಯಾರು ಗೊತ್ತಾ?

ಶಾಸಕರಿಗೇ ಅಸ್ಪೃಶ್ಯತೆ ಅನುಭವವಾಯ್ತಾ? | ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೆಟ್ಟ ಅನುಭವ!

‘ಜೈಭೀಮ್’ ಸಿನಿಮಾ ಹೋಲುವ ಪ್ರಕರಣ | ತನ್ನ 3 ಮಕ್ಕಳ ಕೊಲೆಗೆ 19 ವರ್ಷಗಳ ಬಳಿಕ ನ್ಯಾಯ ಪಡೆದ ತಂದೆ!

ಇತ್ತೀಚಿನ ಸುದ್ದಿ