ಮುಂದಿನ ಸರಿಗಮಪ ವೇದಿಕೆಯಲ್ಲಿ ಹಂಸಲೇಖ ಇಲ್ಲದಿದ್ದರೆ, 'ಝೀ ಕನ್ನಡ'ಕ್ಕೆ ಆಗಲಿದೆ ಭಾರೀ ನಷ್ಟ! - Mahanayaka
8:11 AM Thursday 12 - December 2024

ಮುಂದಿನ ಸರಿಗಮಪ ವೇದಿಕೆಯಲ್ಲಿ ಹಂಸಲೇಖ ಇಲ್ಲದಿದ್ದರೆ, ‘ಝೀ ಕನ್ನಡ’ಕ್ಕೆ ಆಗಲಿದೆ ಭಾರೀ ನಷ್ಟ!

hamsalekha
28/11/2021

ಬೆಂಗಳೂರು: ಹಂಸಲೇಖ ಅವರು ಮುಂದಿನ ವಾರದ ಸರಿಗಮಪದಲ್ಲಿ ಇಲ್ಲದೇ ಹೋದರೆ, ಹಂಸಲೇಖ ಪರವಾಗಿರುವ ಅತ್ಯಧಿಕ ಸಂಖ್ಯೆಯ ‘ಝೀ ಕನ್ನಡ’ದ ವೀಕ್ಷಕರು ಕಾರ್ಯಕ್ರಮವನ್ನು ಮಾತ್ರವಲ್ಲದೇ ಚಾನೆಲ್ ನ್ನೇ ಬಹಿಷ್ಕರಿಸುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಂಸಲೇಖ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಜಾತಿವಾದ, ಅಸ್ಪೃಶ್ಯತೆಯ ವಿರುದ್ಧದ ಹೇಳಿಕೆಯನ್ನು ಮುಂದಿಟ್ಟುಕೊಂಡು, ಕೆಲವರು ವಿವಾದ ಸೃಷ್ಟಿಸಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಸರಿಗಮಪ ವೇದಿಕೆಯಿಂದ ಹೊರಗಿಡಲು ಚಾನೆಲ್ ಮುಂದಾದರೆ, ಶೇ.85ರಷ್ಟು ವೀಕ್ಷಕರು ಚಾನೆಲ್ ಗೆ ಮರ್ಮಾಘಾತ ನೀಡುವ ಮೂಲಕ ಹಂಸಲೇಖ ಅವರಿಗೆ ಭಾರೀ ಬೆಂಬಲವನ್ನು ನೀಡಲು ಮುಂದಾಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ಪೋಸ್ಟರ್ ಗಳು ಕಾಣಿಸಿಕೊಂಡಿದ್ದು, ಹಂಸಲೇಖ ಅವರನ್ನು ಹೊರಗಿಟ್ಟರೆ, ಚಾನೆಲ್ ನ್ನು ಬಹಿಷ್ಕರಿಸುವುದಾಗಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆರಳೆಣಿಕೆಯ ಕೆಲವು ವ್ಯಕ್ತಿಗಳ ಸ್ವಾರ್ಥ, ಧ್ವೇಷಪೂರಿತ ಮನಸ್ಥಿತಿಗೆ ಹಂಸಲೇಖ ಅವರನ್ನು ಚಾನೆಲ್ ಕಾರ್ಯಕ್ರಮದಿಂದ ಹೊರಗಿಟ್ಟರೆ, ಚಾನೆನ್ ನ್ನು ಬಹಿಷ್ಕರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಝೀ ಕನ್ನಡದ ವಿರುದ್ಧ ಈ ಹಿಂದೆ ಇದೇ ಜಾತಿವಾದಿ, ಮನುಷ್ಯ ವಿರೋಧಿ ಶಕ್ತಿಗಳು ಭಾರೀ ಪಿತೂರಿ ನಡೆಸಿದಾಗ, ಹೆಗಲು ಕೊಟ್ಟು ನಿಮ್ಮನ್ನು ಪ್ರೋತ್ಸಾಹಿಸಿದ್ದೇವೆ. ಇಂದು ಅದೇ ಜಾತಿವಾದಿಗಳಿಗೆ ಹೆದರಿ ಹಂಸಲೇಖ ಅವರನ್ನು ಕಾರ್ಯಕ್ರಮದಿಂದ ಹೊರಗಿಟ್ಟರೆ, ನಿಮ್ಮನ್ನೂ ನಾವು ಹೊರಗಿಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ನೀಡುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ABCD ಗೊತ್ತಿಲ್ಲದ ಇಬ್ಬರು ಇಂಗ್ಲಿಷ್ ಶಿಕ್ಷಕರ ಅಮಾನತು

ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕಿಗಾಗಿ ಪ್ರಬಲ ಜನಚಳುವಳಿ ಕಟ್ಟಲು ಸಿಪಿಐ(ಎಂ) ಜಿಲ್ಲಾ ಸಮ್ಮೇಳನ ನಿರ್ಧಾರ

ರಂಗಭೂಮಿಯನ್ನೂ ಬೆನ್ನತ್ತಿದ ಕೋಮುವಾದದ ಸರಕು

ತಮ್ಮ ನೇಣು ಬಿಗಿದುಕೊಂಡಿದ್ದ ಸೀರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಕ್ಕಾ!

ಮಂಗಳೂರು: ನಾಗಬನ ಭಗ್ನಗೊಳಿಸಿದ ಪ್ರಕರಣ | 8 ಆರೋಪಿಗಳು ಅರೆಸ್ಟ್

ಡಿಜೆ ಸೌಂಡ್ ಗೆ ಹೃದಯಾಘಾತಗೊಂಡು 63 ಕೋಳಿಗಳ ಸಾವು

ಇತ್ತೀಚಿನ ಸುದ್ದಿ