ಖಾಲಿ ಪೇಪರ್ ಗೆ ಮೃತ ವೃದ್ಧೆಯ ಹೆಬ್ಬೆಟ್ಟು ಹಾಕಿಸಿಕೊಂಡ ಸಂಬಂಧಿಕರು! - Mahanayaka
10:33 AM Thursday 12 - December 2024

ಖಾಲಿ ಪೇಪರ್ ಗೆ ಮೃತ ವೃದ್ಧೆಯ ಹೆಬ್ಬೆಟ್ಟು ಹಾಕಿಸಿಕೊಂಡ ಸಂಬಂಧಿಕರು!

hebbet
28/11/2021

ಮೈಸೂರು: ಕಣ್ಣೆದುರು ಯಾರಾದರೂ ಸಾವನ್ನಪ್ಪಿದಾಗ, ಒಂದು ದಿನ ನಾವೆಲ್ಲರೂ ಸಾಯಲೇ ಬೇಕು ಎನ್ನುವ ಸತ್ಯ ಅರಿವಾಗುವುದು ಸಾಮಾನ್ಯವಾಗಿದೆ. ಆದರೆ, ಇಂತಹ ಸಂದರ್ಭದಲ್ಲಿ ಕೂಡ ಸ್ವಾರ್ಥ ಸಾಧನೆ ಮಾಡುವವರಿಗೇನೂ ಕಡಿಮೆ ಇಲ್ಲ. ಮೈಸೂರಿನಲ್ಲಿ ನಡೆದ ಘಟನೆಯೊಂದರಲ್ಲಿ ಮೃತದೇಹದ ಕೈಯಿಂದ ಖಾಲಿ ಪೇಪರ್ ಗೆ ಹೆಬ್ಬೆಟ್ಟು ಒತ್ತಿಸಿಕೊಂಡ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಂತಹವರು ಕೂಡ ಇದ್ದಾರಾ? ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ವರದಿಯ ಪ್ರಕಾರ ಮೈಸೂರಿನ ಶ್ರೀರಾಂಪುರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.  ವೃದ್ಧೆಯೊಬ್ಬರು ಮೃತಪಟ್ಟಿದ್ದು, ಇದೇ ಸಂದರ್ಭದಲ್ಲಿ ಅವರ ಸಂಬಂಧಿಕರು ವೃದ್ಧೆಯ ಮೃತದೇಹದ ಹೆಬ್ಬೆಟ್ಟನ್ನು ಖಾಲಿ ಪೇಪರ್ ಗೆ ಒತ್ತಿಸುತ್ತಿರುವ ದೃಶ್ಯ ವೈರಲ್ ಆಗಿದೆ. ಮೃತದೇಹದ ಹೆಬ್ಬೆಟ್ಟನ್ನು ಖಾಲಿ ಪೇಪರ್ ಗೆ ಒತ್ತಿಸುತ್ತಿರುವುದಕ್ಕೆ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸಿ ವಿಡಿಯೋ ಮಾಡಿದ್ದು, ಜೊತೆಗೆ ಸಂಬಂಧಿಕರ ನಡೆಯನ್ನು ಪ್ರಶ್ನಿಸಿದ್ದಾರೆ.

ಸದ್ಯ ವಿಡಿಯೋ ವೈರಲ್ ಆಗಿರುವ ಹಿನ್ನೆಲೆಯಲ್ಲಿ  ವಿದ್ಯಾರಣ್ಯಪುರಂ ಪೊಲೀಸರು ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಘಟನೆ ನಡೆದು ಸುಮಾರು 11 ದಿನಗಳಾಗಿವೆ ಎಂದು ಹೇಳಲಾಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, ತನಿಖೆಯ ಬಳಿಕ ಸತ್ಯಾಂಶ ಬಯಲಾಗಬೇಕಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೊವಿಡ್ ಸೋಂಕು ಮತ್ತೆ ಉಲ್ಬಣ: ಹೊಸ ಮಾರ್ಗಸೂಚಿ ಬಿಡುಗಡೆ

ನಮ್ಮಲ್ಲಿ ಸಮಾಧಾನವಾಗದಿದ್ದಾಗ ಬಿಜೆಪಿಗೆ ಹೋದ ಬಂಡುಕೋರ | ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪಂಚ್

ಹಾವು ಹಿಡಿಯಲು ಹೋಗಿದ್ದ ವ್ಯಕ್ತಿಯನ್ನು 5ಕ್ಕೂ ಅಧಿಕ ಬಾರಿ ಕಚ್ಚಿ ಕೊಂದ ಹಾವು!

ಮುಂದಿನ ಸರಿಗಮಪ ವೇದಿಕೆಯಲ್ಲಿ ಹಂಸಲೇಖ ಇಲ್ಲದಿದ್ದರೆ, ‘ಝೀ ಕನ್ನಡ’ಕ್ಕೆ ಆಗಲಿದೆ ಭಾರೀ ನಷ್ಟ!

ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕಿಗಾಗಿ ಪ್ರಬಲ ಜನಚಳುವಳಿ ಕಟ್ಟಲು ಸಿಪಿಐ(ಎಂ) ಜಿಲ್ಲಾ ಸಮ್ಮೇಳನ ನಿರ್ಧಾರ

ಮಂಗಳೂರು: ನಾಗಬನ ಭಗ್ನಗೊಳಿಸಿದ ಪ್ರಕರಣ | 8 ಆರೋಪಿಗಳು ಅರೆಸ್ಟ್

ಇತ್ತೀಚಿನ ಸುದ್ದಿ