ಹೃದಯಾಘಾತವಾದ ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ವೈದ್ಯರಿಗೂ ಹೃದಯಾಘಾತ! - Mahanayaka
9:22 AM Thursday 12 - December 2024

ಹೃದಯಾಘಾತವಾದ ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ವೈದ್ಯರಿಗೂ ಹೃದಯಾಘಾತ!

dr lakshman
29/11/2021

ತೆಲಂಗಾಣ: ಹೃದಯಾಘಾತಕ್ಕೊಳಗಾಗಿರುವ ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ವೈದ್ಯರೊಬ್ಬರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ತೆಲಂಗಾಣದ ಕಾಮಾರೆಡ್ಡಿ ಎಂಬಲ್ಲಿ ನಡೆದಿದೆ.

ಡಾ.ಲಕ್ಷ್ಮಣ್ ಎಂಬವರು ಚಿಕಿತ್ಸೆ ನೀಡುತ್ತಿದ್ದ ವೇಳೆಯೇ ಹೃದಯಾಘಾತಕ್ಕೊಳಗಾದ ವೈದ್ಯರಾಗಿದ್ದಾರೆ. ಘಟನೆ ನಡೆದ ದಿನದಂದು, ಕಾಮಾರೆಡ್ಡಿ ಜಿಲ್ಲೆಯ ಗಾಂಧಾರಿ ಮಂಡಲ ನಿವಾಸಿ ಸರ್ಜು ಎಂಬವರಿಗೆ ಹೃದಯಾಘಾತವಾಗಿದ್ದು, ಅವರನ್ನು ತಕ್ಷಣವೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಲಕ್ಷ್ಮಣ್ ಅವರು ತಕ್ಷಣವೇ ಸರ್ಜುಗೆ ಚಿಕಿತ್ಸೆ ನೀಡಲು ಮುಂದಾಗಿದ್ದು, ಈ ವೇಳೆ ಲಕ್ಷ್ಮಣ್ ಅವರಿಗೂ ಹೃದಯಾಘಾತವಾಗಿದೆ. ಈ ವೇಳೆ ತಕ್ಷಣವೇ ಅವರನ್ನು ರಕ್ಷಿಸಲು ಪ್ರಯತ್ನಿಸಲಾಯಿತಾದರೂ ಅವರು ಮೃತಪಟ್ಟಿದ್ದಾರೆ.

ಇನ್ನೂ ಲಕ್ಷ್ಮಣ್ ಅವರು ಚಿಕಿತ್ಸೆ ನೀಡಲು ಮುಂದಾಗಿದ್ದ ರೋಗಿ ಸರ್ಜು ಕೂಡ ಸಾವಿಗೀಡಾಗಿದ್ದು, ಆಸ್ಪತ್ರೆಗಳ ಮೂಲ ಹೇಳುತ್ತಿರುವ ಪ್ರಕಾರ ಚಿಕಿತ್ಸೆ ಪೂರ್ವದಲ್ಲಿಯೇ ರೋಗಿ ಸರ್ಜು ಮೃತಪಟ್ಟಿದ್ದರು ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೃದಯಾಘಾತವಾದ ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ವೈದ್ಯರಿಗೂ ಹೃದಯಾಘಾತ!

ಒಮಿಕ್ರಾನ್: ಸಾವಿನ ಮೆರವಣಿಗೆ ಮತ್ತೆ ಬೇಡ, ಯಾರೂ ಎಚ್ಚರ ತಪ್ಪುವುದು ಬೇಡ | ಹೆಚ್.ಡಿ.ಕುಮಾರಸ್ವಾಮಿ

ಸ್ವಂತ ಅಣ್ಣನಿಂದಲೇ ತಂಗಿಯ ಮೇಲೆ ಅತ್ಯಾಚಾರ: ಆರೋಪಿ ಅರೆಸ್ಟ್

ಚಿಕ್ಕಬಳ್ಳಾಪುರದಲ್ಲೊಂದು ವಿಶೇಷ ಮದುವೆ: ಗಮನ ಸೆಳೆದ ವಿಶೇಷ ಜೋಡಿ

ನಮ್ಮಲ್ಲಿ ಸಮಾಧಾನವಾಗದಿದ್ದಾಗ ಬಿಜೆಪಿಗೆ ಹೋದ ಬಂಡುಕೋರ | ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪಂಚ್

ಇತ್ತೀಚಿನ ಸುದ್ದಿ