ವಿವಾದಕ್ಕೆ ಕಾರಣವಾದ ‘ಗರುಡ ಗಮನ ವೃಷಭ ವಾಹನ’ ಚಿತ್ರ | ಕೊಲೆ ಮಾಡಿ ಸಂಭ್ರಮಿಸುವ ದೃಶ್ಯಕ್ಕೆ ಮಾದಪ್ಪನ ಹಾಡು
ಹನೂರು: ಮಾದೇವನನ್ನು ಶಾಂತಿಧೂತ, ಏಳುಮಲೆಯ ಒಡೆಯ, ಮಾಯ್ಕರ ಮುದ್ದುಮಾದೇವ ಮೊದಲಾದ ಹೆಸರುಗಳಿಂದ ಮಾದೇವನ ಭಕ್ತರು ಕೊಂಡಾಡುತ್ತಾರೆ. ಇಂತಹ ಮಾದೇವನ ಕುರಿತಾಗಿರುವ ‘ಸೋಜುಗಾದ ಸೂಚಿ ಮಲ್ಲಿಗೆ’ ಎಂಬ ಹಾಡನ್ನು ‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ಕೊಲೆ ಮಾಡಿ ಸಂಭ್ರಮಿಸುವ ದೃಶ್ಯಕ್ಕೆ ಬಳಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
‘ಗರುಡ ಗಮನ ವೃಷಭ ವಾಹನ’ ಚಿತ್ರ ತಂಡ ಪ್ರತಿಭಾನ್ವಿತರೇ ಆಗಿದ್ದಾರೆ. ಆದರೆ, ಶಾಂತಿಯ ಮಂತ್ರವಾಗಿರುವ, ದೈವಿಕ ಜನಪದ ಗೀತೆಯನ್ನು ಕೊಲೆ ಮಾಡಿ ಸಂಭ್ರಮಿಸುವಂತಹ ದೃಶ್ಯಕ್ಕೆ ಬಳಕೆ ಮಾಡಿಕೊಂಡಿರುವುದು ಸರಿಯಲ್ಲ ಎನ್ನುವ ಮಾತುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿವೆ.
ಈ ಹಾಡನ್ನು ಚಿತ್ರಕ್ಕೆ ಬಳಸುವ ಮೊದಲು, ಮಾದಪ್ಪನ ಹಿನ್ನೆಲೆ ಏನು? ಪರಂಪರೆ ಏನು? ಇತಿಹಾಸ ಏನು ಎನ್ನುವುದನ್ನು ಚಿತ್ರ ತಂಡ ಅರಿಯಬೇಕಿತ್ತು. ಆದರೆ, ಇದ್ಯಾವುದನ್ನೂ ಅರಿಯದೇ ಶಾಂತಿಯ ಮಂತ್ರವಾಗಿರುವ ‘ಸೋಜುಗಾದ ಸೂಜಿ ಮಲ್ಲಿಗೆ’ ಹಾಡನ್ನು ಕೊಲೆ ಮಾಡಿ, ವಿಕೃತವಾಗಿ ಕುಣಿಯುವ ದೃಶ್ಯಕ್ಕೆ ಬಳಕೆ ಮಾಡಿರುವುದು ಸರಿಯಲ್ಲ ಎನ್ನುವ ಆಕ್ರೋಶದ ಮಾತುಗಳು ಕೂಡ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗಲ್ಫ್ ನಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ: ದೃಢಪಡಿಸಿದ ಸೌದಿ ಅರೇಬಿಯಾ
1ನೇ ತರಗತಿಯ ಬಾಲಕಿಗೆ ತಂದೆಯಿಂದಲೇ ಲೈಂಗಿಕ ಕಿರುಕುಳ!
‘ವಂದೇ ಇಂಡಿಯನ್ ಕಾನ್‌ಸ್ಟಿಟ್ಯೂಷನ್’: ಹಂಸಲೇಖ ಸಂಯೋಜನೆಯ ಸಂವಿಧಾನ ಗೀತೆ ವೈರಲ್
ಕ್ಲಾಸ್ ರೂಮ್ ಗೆ ನುಗ್ಗಿ ಗುಂಡಿನ ಮಳೆ ಸುರಿಸಿದ ಹೈಸ್ಕೂಲ್ ವಿದ್ಯಾರ್ಥಿ: 3 ಮಂದಿ ಸಾವು, 6 ಜನರಿಗೆ ಗಾಯ
ದನ ಸಾಗಾಟದ ವಾಹನ ಡಿಕ್ಕಿಯಾಗಿ ಯುವಕರಿಗೆ ಗಾಯ ಪ್ರಕರಣ: ಗಾಯಾಳುಗಳನ್ನು ಭೇಟಿಯಾದ ಸಚಿವ ಅರಗ ಜ್ಞಾನೇಂದ್ರ