ಯುವತಿಯ ಎದುರು ಓಲಾ ಕ್ಯಾಬ್ ಚಾಲಕನಿಂದ ಅಶ್ಲೀಲ ವರ್ತನೆ! - Mahanayaka
12:25 AM Tuesday 4 - February 2025

ಯುವತಿಯ ಎದುರು ಓಲಾ ಕ್ಯಾಬ್ ಚಾಲಕನಿಂದ ಅಶ್ಲೀಲ ವರ್ತನೆ!

ola
04/12/2021

ಬೆಂಗಳೂರು: ಓಲಾ ಕ್ಯಾಬ್ ಚಾಲಕನೋರ್ವ ಮಹಿಳೆಯ ಎದುರಿನಲ್ಲೇ ಅಶ್ಲೀಲವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದ್ದು, ಯುವತಿ ಟ್ವೀಟ್ ನಲ್ಲಿ ಈ ಮಾಹಿತಿ ಹಂಚಿಕೊಂಡ ಬಳಿಕ ಈ ಘಟನೆ ಬಯಲಿಗೆ ಬಂದಿದೆ ಎಂದು ವರದಿಯಾಗಿದೆ.

ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳಲು ಸಂತ್ರಸ್ತೆ ಓಲಾ ಕ್ಯಾಬ್ ಬುಕ್ ಮಾಡಿದ್ದು, ಮನೆಗೆ ತೆರಳುವಾಗ ಚಾಲಕ ಅಶ್ಲೀಲವಾಗಿ ವರ್ತಿಸಿದ್ದಾನೆ. ಇದನ್ನು ಯುವತಿ ಗಮನಿಸಿದಾಗ ಆತ ತಕ್ಷಣವೇ ಬಟ್ಟೆ ಮುಚ್ಚಿಕೊಂಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಚಾಲಕನ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ಯುವತಿ, ಕೂಡಲೇ ಕೂಗಾಗಿ ಕ್ಯಾಬ್ ನಿಲ್ಲಿಸಿ, ಕೆಳಗಿಳಿದಿದ್ದು, ಬಳಿಕ  ಬೇರೆ ಕ್ಯಾಬ್ ಮೂಲಕ ಮನೆಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಮಹಿಳೆಯರ ಸುರಕ್ಷತೆಗೆ ಒತ್ತು ನೀಡಬೇಕು. ಮಹಿಳೆಯರು ಕ್ಯಾಬ್ ಗಳಲ್ಲಿ ಒಬ್ಬರೇ ಹೋಗುವಾಗ ಪರಿಚಿತರ ಸಂಪರ್ಕದಲ್ಲಿರುವ ಜೊತೆಗೆ ಲೈವ್ ಲೊಕೇಷನ್ ಶೇರ್ ಮಾಡಿಕೊಳ್ಳಬೇಕು ಎಂದು  ಅವರು ಜಾಗೃತಿ ಮೂಡಿಸಿದ್ದಾರೆ.

ಸದ್ಯ ಓಲಾ ಕ್ಯಾಬ್ ಕಂಪೆನಿಗೆ ದೂರು ನೀಡಲಾಗಿದ್ದು, ಚಾಲಕನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಮಾಹಿತಿ ಪಡೆದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಆರೋಪಿ ಚಾಲಕನನ್ನು ಬಂಧಿಸಲು  ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಸ್ತೆಗೆ ತೆಂಗಿನ ಕಾಯಿ ಒಡೆದು ಉದ್ಘಾಟನೆ: ತೆಂಗಿನ ಕಾಯಿ ಬದಲು ಬಿರುಕು ಬಿಟ್ಟ ರಸ್ತೆ | ಬಿಜೆಪಿ ಶಾಸಕಿಗೆ ಮುಜುಗರ

ಮಂಗಳೂರು: ಶಾಲಾ ವಾಹನ ಚಾಲಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!

ಈರುಳ್ಳಿ ಸಾಗಾಟದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ನಾಲ್ವರು ಸ್ಥಳದಲ್ಲೇ ಸಾವು

ಪುತ್ರನ ಮದುವೆಯ ಸಂಭ್ರಮದಲ್ಲಿದ್ದ ದಂಪತಿ ರಸ್ತೆ ಅಪಘಾತದಲ್ಲಿ ದಾರುಣ ಸಾವು!

ಇತ್ತೀಚಿನ ಸುದ್ದಿ