ತಂದೆಯ ಕಣ್ಣ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಯುವಕ! - Mahanayaka

ತಂದೆಯ ಕಣ್ಣ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಯುವಕ!

uday
04/12/2021

ಮಂಡ್ಯ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ತಂದೆ, ತಾಯಿಯ ಕಣ್ಣೆದುರೇ ಯುವಕನೋರ್ವ ನೀರುಪಾಲಾದ ಘಟನೆ ವರದಿಯಾಗಿದ್ದು, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಸಾರಂಗಿ ಗ್ರಾಮದ ಬಳಿಯಲ್ಲಿ ಈ ಘಟನೆ  ಶುಕ್ರವಾರ ರಾತ್ರಿ ನಡೆದಿದೆ.

ಕೈಗೋನಗಳ್ಳಿಯ ಶಿವಲಿಂಗೇಗೌಡ ಮತ್ತು ಜಯಮ್ಮ ದಂಪತಿಯ ಒಬ್ಬನೇ ಮಗ  35 ವರ್ಷ ವಯಸ್ಸಿನ ಉದಯ ಕುಮಾರ್ ನೀರು ಪಾಲಾದ ಯುವಕನಾಗಿದ್ದು, ಮುಂಬೈನಲ್ಲಿ ಎಂಜಿನಿಯರಿಂಗ್ ಮುಗಿಸಿ ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಅವರು ಊರಿಗೆ ಮರಳಿದ್ದರು. ಆ ಬಳಿಕ ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರು, ಸೋಮವಾರವಷ್ಟೇ ಬೆಂಗಳೂರಿನಿಂದ ಊರಿಗೆ ಬಂದಿದ್ದರು.

ಶುಕ್ರವಾರ ಶ್ರವಣ ಬೆಳಗೊಳಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದ ಅವರು 10 ಗಂಟೆಗೆ ಮನೆಗೆ ಬರುವುದಾಗಿ ಹೇಳಿದ್ದರು. ಆದರೆ, 11 ಗಂಟೆ ಕಳೆದರೂ ಮಗ ಬಾರದೇ ಇದ್ದಾಗ ಗಾಬರಿಯಿಂದ ಹೆತ್ತವರು ಹುಡುಕಾಡಿದ್ದಾರೆ. ಈ ವೇಳೆ ಸಾರಂಗಿ  ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಉದಯ್ ನ ಬೈಕ್ ಪತ್ತೆಯಾಗಿದೆ. ಉದಯ್ ಹಳ್ಳದಲ್ಲಿ ಸಿಲುಕಿರುವುದು ಪತ್ತೆಯಾಗಿತ್ತು. ತಕ್ಷಣವೇ ತಂದೆ ಶಿವಲಿಂಗೇಗೌಡ ಉದಯ್ ನನ್ನು ರಕ್ಷಿಸಲು ಯತ್ನಿಸಿದ್ದಾರೆ. ಆದರೆ. ಆತ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭೀಕರ ಕೊಲೆ: ಒಮಿಕ್ರಾನ್ ಗೆ ಹೆದರಿ ಪತ್ನಿ, ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಬರ್ಬರ ಹತ್ಯೆ

ಡಿಸೆಂಬರ್ 6ರಂದು ಶಬರಿಮಲೆ ಯಾತ್ರೆಗೆ ಸಿದ್ಧತೆ ನಡೆಸಿದ್ದರಂತೆ ಹಿರಿಯ ನಟ ಶಿವರಾಮ್ 

ಬದುಕಿನ ದಾರಿ ಮುಗಿಸಿ ಹೊರಟೇ ಬಿಟ್ಟರು: ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ಜೊತೆಗೆ ನಟಿಸಿದ್ದ ಶಿವರಾಮಣ್ಣ

ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿದ ನಗರ ಪಾಲಿಕೆ: ಕತ್ತುಕೊಯ್ದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ

ಪೊಲೀಸರನ್ನು ನಾಯಿಗಳು ಎಂದು ನಿಂದನೆ: ಗೃಹ ಸಚಿವರ ವಿರುದ್ಧವೇ ದೂರು ದಾಖಲು

ಇತ್ತೀಚಿನ ಸುದ್ದಿ