ಇಂದು ಅಗಲಿದ ಹಿರಿಯ ನಟ ಶಿವರಾಮ್ ಅವರ ಅಂತ್ಯಕ್ರಿಯೆ - Mahanayaka

ಇಂದು ಅಗಲಿದ ಹಿರಿಯ ನಟ ಶಿವರಾಮ್ ಅವರ ಅಂತ್ಯಕ್ರಿಯೆ

shivaram
05/12/2021

ಬೆಂಗಳೂರು: ನಿನ್ನೆ ನಿಧನರಾಗಿದ್ದ ಕನ್ನಡದ ಹಿರಿಯ ನಟ ಶಿವರಾಮ್ ಅವರ ಅಂತ್ಯಕ್ರಿಯೆ ಇಂದು  ಬನಶಂಕರಿ ನಗರದ ಚಿತಾಗಾರದಲ್ಲಿ ಪೂರ್ವಾಹ್ನ 11 ಗಂಟೆಯ ಬಳಿಕ ನಡೆಯಲಿದೆ. ಇಂದು ಬೆಳಗ್ಗೆ 7:30ರಿಂದ  ರವೀಂದ್ರ ಕಲಾಕ್ಷೇತ್ರದಲ್ಲಿ  ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಅಂತಿಮ ದರ್ಶನದ ಬಳಿಕ ಪಾರ್ಥಿವ ಶರೀರವನ್ನು  ಅವರ ತ್ಯಾಗರತಾಜ ನಗರದ ನಿವಾಸಕ್ಕೆ ರವಾನಿಸಲಾಗುವುದು ಬಳಿಕ ಬನಶಂಕರಿ ನಗರದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಅಯ್ಯಪ್ಪನ ಪೂಜೆಗಾಗಿ ರೂಮ್ ಗೆ ತೆರಳಿದ್ದ ವೇಳೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಶಿವರಾಮ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮೆದುಳು ನಿಷ್ಕ್ರಿಯಗೊಂಡ ಪರಿಣಾಮ ವೈದ್ಯರ ಸಾಕಷ್ಟು ಪ್ರಯತ್ನಗಳ ಬಳಿಕವೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಶಿವರಾಮ್ ಅವರ ನಿಧನದ ಹಿನ್ನೆಲೆಯಲ್ಲಿ ಶನಿವಾರ ನಟ ಶಿವರಾಜ್ ಕುಮಾರ್, ನಿರ್ದೇಶಕ ಎಸ್.ನಾರಾಯಣ್, ನಟ ಅನಿರುದ್ಧ, ಹಿರಿಯ ನಟ ದ್ವಾರಕೀಶ್, ನಟ ಜಗ್ಗೇಶ್, ಪ್ರೊ.ದೊಡ್ಡರಂಗೇಗೌಡ, ನಟಿ ಉಮಾಶ್ರೀ, ಯೋಗರಾಜ್ ಭಟ್, ನಟಿ ಅನುಪ್ರಭಾಕರ್, ಹಿರಿಯ ನಟ ದೇವರಾಜ್, ಹಿರಿಯ ನಟಿ ಗಿರಿಜಾ ಲೋಕೇಶ್ ಸೇರಿದಂತೆ ಹಲವಾರ ನಟ, ನಟಿಯರು, ನಿರ್ದೇಶಕರು ಭೇಟಿ ನೀಡಿ ಅಂತಿಮ ದರ್ಶನ ಪಡೆದುಕೊಂಡು, ಶಿವರಾಮ್ ಅವರ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತಂದೆಯ ಕಣ್ಣ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಯುವಕ!

ಭೀಕರ ಕೊಲೆ: ಒಮಿಕ್ರಾನ್ ಗೆ ಹೆದರಿ ಪತ್ನಿ, ಇಬ್ಬರು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಬರ್ಬರ ಹತ್ಯೆ

ಡಿಸೆಂಬರ್ 6ರಂದು ಶಬರಿಮಲೆ ಯಾತ್ರೆಗೆ ಸಿದ್ಧತೆ ನಡೆಸಿದ್ದರಂತೆ ಹಿರಿಯ ನಟ ಶಿವರಾಮ್ 

ಬದುಕಿನ ದಾರಿ ಮುಗಿಸಿ ಹೊರಟೇ ಬಿಟ್ಟರು: ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರ ಜೊತೆಗೆ ನಟಿಸಿದ್ದ ಶಿವರಾಮಣ್ಣ

ಅಂಬೇಡ್ಕರ್ ಪ್ರತಿಮೆಯನ್ನು ತೆರವುಗೊಳಿಸಿದ ನಗರ ಪಾಲಿಕೆ: ಕತ್ತುಕೊಯ್ದುಕೊಂಡು ಯುವಕ ಆತ್ಮಹತ್ಯೆಗೆ ಯತ್ನ

ಈಶ್ವರಪ್ಪ ಪೆದ್ದ, ಅವರ ನಾಲಿಗೆಗೂ ಮೆದುಳಿಗೂ ಲಿಂಕ್ ಇಲ್ಲ | ಸಿದ್ದರಾಮಯ್ಯ ವ್ಯಂಗ್ಯ

ಮಂಗಳೂರು: ಶಾಲಾ ವಾಹನ ಚಾಲಕನಿಂದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ!

ಇತ್ತೀಚಿನ ಸುದ್ದಿ