‘ಬಿಜೆಪಿಯ ಭೀಷ್ಮ ‘ ಉರಿಮಜಲು ಕೆ.ರಾಮ ಭಟ್ ಇನ್ನಿಲ್ಲ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಬಿಜೆಪಿಯ ರಾಜಕೀಯ ಭೀಷ್ಮ ಎಂದೇ ಕರೆಯಲ್ಪಡುತ್ತಿದ್ದ ಮಾಜಿ ಶಾಸಕ ಉರಿಮಜಲು ಕೆ.ರಾಮ ಭಟ್ ಕೊಂಬೆಟ್ಟಿನಲ್ಲಿರುವ ತಮ್ಮ ಸ್ವಗೃಹದಲ್ಲಿ ಸೋಮವಾರ ನಿಧನರಾಗಿದ್ದಾರೆ. 92 ವರ್ಷ ವಯಸ್ಸಿನ ರಾಮ ಭಟ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಇಂದು ನಿಧನರಾಗಿದ್ದಾರೆ.
ಕಬಕ—ವಿಟ್ಲ ರಸ್ತೆ ಮಧ್ಯೆ ಸಿಗುವ ಉರಿಮಜಲು ಎಂಬಲ್ಲಿಯ ಅವಿಭಕ್ತ ಹವ್ಯಕ ಕುಟುಂಬದ ರಾಮ ಭಟ್ಟರು ತಮ್ಮ ಪ್ರೌಢ ಶಿಕ್ಷಣದ ಸಂದರ್ಭದಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS) ಸಂಘಟನೆಗೆ ಸೇರ್ಪಡೆಗೊಂಡಿದ್ದರು. ಪುತ್ತೂರಿನಲ್ಲಿ ಬಿಜೆಪಿಗೆ ಭದ್ರವಾದ ಅಡಿಪಾಯ ಹಾಕಿದ್ದ ಇವರು, ಎಲ್.ಕೆ.ಅಡ್ವಾಣಿಯಂತಹ ರಾಷ್ಟ್ರಮಟ್ಟದ ನಾಯಕರ ಜೊತೆಗೆ ನೇರ ಸಂಪರ್ಕದಲ್ಲಿದ್ದರು.
ಡಿ.ವಿ.ಸದಾನಂದ ಗೌಡ ಪುತ್ತೂರಿನ ಶಾಸಕರಾಗಲು, ವಿ.ಧನಂಜಯ ಕುಮಾರ್ ಅವರು ಸಂಸದರಾಗಲು ರಾಮಭಟ್ ಅವರ ಪರಿಶ್ರಮ ಹೆಚ್ಚಿನದ್ದಾಗಿತ್ತು. ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗಬೇಕಾದರೆ, ಅದಕ್ಕೆ ರಾಮ ಭಟ್ ಅವರ ಒಪ್ಪಿಗೆ ಬೇಕಾಗಿತ್ತು.
ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದ ರಾಮ ಭಟ್ ಅವರನ್ನು ಬಿಜೆಪಿಯ ಭೀಷ್ಮ ಎಂದೇ ಕರೆಯಲಾಗುತ್ತಿತ್ತು. ಗ್ರಾಮ ಗ್ರಾಮಗಳಿಗೆ ತೆರಳಿ ಪಕ್ಷ ಸಂಘಟನೆ ಮಾಡುವುದು, ಪಕ್ಷದೊಳಗಿನ ಭಿನ್ನಮತಗಳನ್ನು ಶಮನ ಮಾಡಿ, ರಾಜಿ ಸಂಧಾನ ಮಾಡಿ ಪಕ್ಷಕ್ಕೆ ಯಾವುದೇ ಹಾನಿಯಾಗದಂತೆ ಯಶಸ್ವಿಯಾಗಿ ನಿಭಾಯಿಸಿದ ಖ್ಯಾತಿ ಕೂಡ ಇವರಿಗಿದೆ.
2008ರಲ್ಲಿ ಶಿಷ್ಯೆ ಶಕುಂತಲಾ ಶೆಟ್ಟಿಗೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿದಾಗ ಬಂಡಾಯಕ್ಕೆ ಬೆಂಬಲ ನೀಡಿದ್ದರು. ಬಿಜೆಪಿ ವಿರುದ್ಧ ಸ್ವಾಭಿಮಾನಿ ವೇದಿಕೆ ಹುಟ್ಟುಹಾಕಿದ್ದ ರಾಮ್ ಭಟ್ 2009ರಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ವಿರುದ್ಧ ಸ್ಪರ್ಧೆ ಮಾಡಿದ್ದರು. ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದರು. ಬಳಿಕ, ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮತ್ತೆ ಬಿಜೆಪಿ ಬೆಂಬಲಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಾಬಾಸಾಹೇಬ್ ಅಂಬೇಡ್ಕರ್ ರ ಕೊನೆಯ ಸಂದೇಶ
ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ