ವಿಕೃತ ಘಟನೆ: ಗರ್ಭಿಣಿ ತಂಗಿಯ ಶಿರಚ್ಛೇದಿಸಿ ಸೆಲ್ಫಿ ತೆಗೆದುಕೊಂಡ ಸಹೋದರ!
ಔರಂಗಬಾದ್: ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದ ತಂಗಿಯನ್ನು ಗರ್ಭಿಣಿ ಎಂದೂ ನೋಡದೇ ಸ್ವಂತ ಸಹೋದರೇ ಶಿರಚ್ಚೇದಿಸಿ ಭೀಕರವಾಗಿ ಹತ್ಯೆ ಮಾಡಿರುವುದೇ ಅಲ್ಲದೇ, ಆಕೆಯ ತಲೆಯೊಂದಿಗೆ ತನ್ನ ತಾಯಿಯ ಜೊತೆಗೆ ಸೆಲ್ಫಿ ತೆಗೆದುಕೊಂಡ ವಿಕೃತ ಘಟನೆ ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ನಡೆದಿದೆ.
ಜೂನ್ ನಲ್ಲಿ 19 ವರ್ಷ ವಯಸ್ಸಿನ ಯುವತಿ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಬಳಿಕ ಕಳೆದ ವಾರವಷ್ಟೇ ಯುವತಿಯನ್ನು ಆಕೆಯ ತಾಯಿ ಸಂಪರ್ಕಿಸಿದ್ದು, ಹಳೆಯದ್ದನ್ನೆಲ್ಲ ಎಲ್ಲವನ್ನೂ ಮರೆತು ಬಿಡೋಣ, ಒಂದು ಬಾರಿ ನಿಮ್ಮ ಮನೆಗೆ ಬರುತ್ತೇವೆ ಎಂದು ಪ್ರೀತಿಯಿಂದ ಮಾತನಾಡಿಸಿದ್ದಾರೆ.
ತಾಯಿಯ ಮಾತು ಕೇಳಿ ಖುಷಿಯಲ್ಲಿದ್ದ ಮಗಳು ತಾಯಿ ಮತ್ತು ಸಹೋದರ ಬರುವಿಕೆಗಾಗಿ ದಾರಿ ಕಾದಿದ್ದಳು. ಆದರೆ, ತಾಯಿ ಹಾಗೂ ತನ್ನ ಸಹೋದರನ ತಲೆಯೊಳಗೆ ಇಂತಹ ವಿಕೃತ ಯೋಚನೆ ಇದೆ ಎನ್ನುವುದು ಕೂಡ ಆಕೆಗೆ ತಿಳಿದಿರಲಿಲ್ಲ.
ಭಾನುವಾರ ಸಹೋದರ ಹಾಗೂ ತಾಯಿ ಆಕೆಯ ಗಂಡನ ಮನೆಗೆ ಬಂದಿದ್ದು, ಈ ವೇಳೆ ಆಕೆಯ ಹೇಳಲಾರದಷ್ಟು ಖುಷಿಯಾಗಿತ್ತು. ಆಕೆಯ ಪತಿ ಕೂಡ ಮನೆಯಲ್ಲಿಯೇ ಇದ್ದ. ಬಹಳ ಸಮಯದಿಂದ ಅತ್ತೆ ಮತ್ತು ಭಾವ ಮನೆಗೆ ಬಂದಿದ್ದಾರೆ. ಅವರು ಮಾತನಾಡಿಕೊಳ್ಳಲಿ ಎಂದು ಆತ ಪಕ್ಕದ ಕೋಣೆಯಲ್ಲಿದ್ದ.
ಇತ್ತ ಮಗಳು ತಾಯಿ ಮತ್ತು ಅಣ್ಣನಿಗೆ ಚಹಾ ಮಾಡಿಕೊಡಬೇಕು ಎಂದು ಅವಸರದಲ್ಲಿ ಕಿಚನ್ ಗೆ ಹೋಗಿ ಚಹಾ ಮಾಡುತ್ತಿದ್ದಳು. ಈ ವೇಳೆ ಹಿಂದಿನಿಂದ ಅಣ್ಣ ಮತ್ತು ತಾಯಿ ಆಕೆಗೆ ಹಲ್ಲೆ ನಡೆಸಿದ್ದು, ಆಕೆಯ ತಲೆಯನ್ನೇ ಕತ್ತಿಯಿಂದ ಕತ್ತರಿಸಿ, ತಲೆಯನ್ನು ಕೈಯಲ್ಲಿ ಹಿಡಿದುಕೊಂಡು ವಿಕೃತವಾಗಿ ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ.
ಮಕ್ಕಳಿಗಿಂತ ತಮ್ಮ ಮರ್ಯಾದೆಯೇ ನಮಗೆ ಮುಖ್ಯ ಎನ್ನುವ ಪೋಷಕರು ಮಾತ್ರವೇ ಇಂತಹ ಕೃತ್ಯ ನಡೆಸಲು ಸಾಧ್ಯ. ಮಗಳಿಗಾಗಿ, ಮಗನಿಗಾಗಿ ಸರ್ವಸ್ವವನ್ನು ನೀಡುತ್ತೇನೆ ಎನ್ನುವ ಪೋಷಕರು, ಅವರ ವೈಯಕ್ತಿಕ ಜೀವನದ ಆಯ್ಕೆಗೆ ಕೂಡ ಸ್ವಾತಂತ್ರ್ಯ ನೀಡದಿರುವ ಘಟನೆಗಳು, ಭಾರತದಲ್ಲಿ ನಡೆಯುತ್ತಲೇ ಇದೆ. ಸಮಾಜದ ಮನಸ್ಥಿತಿಗಳು ಬದಲಾಗುವವರೆಗೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
‘ಬಿಜೆಪಿಯ ಭೀಷ್ಮ ‘ ಉರಿಮಜಲು ಕೆ.ರಾಮ ಭಟ್ ಇನ್ನಿಲ್ಲ
ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ
ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು
ಪ್ರಾಂಶುಪಾಲರಿಗೆ ಗುಂಡಿಕ್ಕಿ ಹತ್ಯೆಗೆ ಯತ್ನಿಸಿದ 15ರ ಬಾಲಕ!