ಸಿದ್ದರಾಮಯ್ಯ ವಿರುದ್ಧ ಮೇಲ್ವರ್ಗದವರು ಕುದಿಯುತ್ತಿದ್ದಾರೆ: ಸಿ.ಟಿ.ರವಿ ಆಕ್ರೋಶ - Mahanayaka
7:29 AM Thursday 12 - December 2024

ಸಿದ್ದರಾಮಯ್ಯ ವಿರುದ್ಧ ಮೇಲ್ವರ್ಗದವರು ಕುದಿಯುತ್ತಿದ್ದಾರೆ: ಸಿ.ಟಿ.ರವಿ ಆಕ್ರೋಶ

c t ravi
07/12/2021

ಬೆಂಗಳೂರು: ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮೇಲ್ವರ್ಗದವರು ಕುದಿಯುತ್ತಿದ್ದು, ಈ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ತಾನೊಬ್ಬ ಅಹಿಂದ ರಕ್ಷಕನೆಂದೇ ಹೇಳಿಕೊಂಡು ಮೇಲ್ವರ್ಗದವರ ವಿರೋಧಕ್ಕೆ ಗುರಿಯಾಗಿದ್ದಾರೆ. ಯಾವುದೇ ಕಾರಣಕ್ಕೂ ಅವರನ್ನು ಈ ಬಾರಿ ಚುನಾವಣೆಯಲ್ಲಿ ಮತದಾರರು ಗೆಲ್ಲಿಸುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.

2013ರ ವಿಧಾನಸಭೆ ಚುನಾವಣೆಯಲ್ಲಿ ಅಂದಿನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಕೊರಟಗೆರೆಯಲ್ಲಿ ಸೋಲಿಸಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ತನ್ನ ಪ್ರತಿ ಸ್ಪರ್ಧಿಗಳನ್ನು ತುಳಿದೇ ಅವರು ಮೇಲೆ ಬಂದಿದ್ದಾರೆ. ಒಂದು ಕಡೆ ಪರಮೇಶ್ವರ್ ಸೋಲಿಸಿದ್ದು, ಮತ್ತೊಂದು ಕಡೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಸ್ಥಾನವನ್ನು ಕೈ ತಪ್ಪಿಸಿದ್ದೇ ಸಿದ್ದರಾಮಯ್ಯ. ಸ್ವಾಭಿಮಾನಿ ದಲಿತರು 2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ ಗೆ ಸರಿಯಾದ ಪಾಠವನ್ನೇ ಕಲಿಸಿದ್ದಾರೆ ಅವರು ಆರೋಪಿಸಿದರು.

ದಲಿತೋದ್ಧಾರಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಅದೇ ಸಮುದಾಯದ ನಾಯಕರನ್ನು ತುಳಿದು ಮುಖ್ಯಮಂತ್ರಿಯಾದರು. ಪರಿಣಾಮ ಇಂದು ಆ ಸಮುದಾಯವು ಕೂಡ ಕಾಂಗ್ರೆಸ್ ಜೊತೆ ಇಲ್ಲ. ಐದು ವರ್ಷ ಆಡಳಿತ ನಡೆಸಿದ ಸಿದ್ದರಾಮಯ್ಯನವರಿಗೆ ಹೇಳಿಕೊಳ್ಳಲು ಒಂದು ಕ್ಷೇತ್ರವಿಲ್ಲ. ಚಾಮುಂಡೇಶ್ವರಿಯಲ್ಲಿ ಸೋಲುವುದು ಗೊತ್ತಿದ್ದೇ ಬಾದಾಮಿಗೆ ವಲಸೆ ಹೋದರು. ಈಗ ಅಲ್ಲಿಯೂ ಕೂಡ ಸೋಲುವುದು ಖಚಿತ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಮಗೆ ಕಾಂಗ್ರೆಸ್ ನವರ ಪ್ರಮಾಣ ಪತ್ರ ಬೇಕಾಗಿಲ್ಲ | ಸಿಎಂ ಬಸವರಾಜ ಬೊಮ್ಮಾಯಿ

ಬಿಜೆಪಿಗೆ ಯಾರ ಜೊತೆಗೂ ಮೈತ್ರಿಯ ಅಗತ್ಯವಿಲ್ಲ: ವಿ.ಶ್ರೀನಿವಾಸ್ ಪ್ರಸಾದ್

ಪ್ರಾಯೋಗಿಕ ಪರೀಕ್ಷೆಯ ನೆಪ: 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಮಾದಕ ದ್ರವ್ಯ ನೀಡಿ ಅತ್ಯಾಚಾರಕ್ಕೆ ಯತ್ನ

ಸತ್ಯದಪ್ಪೆ ಬೊಲ್ಲೆಯ ಬಯಕೆ/ ಸೀಮಂತ ಕಾರ್ಯಕ್ರಮ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 09

ಮದ್ಯಪ್ರಿಯರಿಗೆ ಶಾಕ್: ನಾಳೆಯಿಂದ 3 ದಿನಗಳ ಕಾಲ ಬಾರ್ ಬಂದ್!

ಮಾವನ ಪಿಎಫ್ ಹಣಕ್ಕಾಗಿ ಪತ್ನಿಯನ್ನು ಕೊಂದೇ ಬಿಟ್ಟ!

ವಿಕೃತ ಘಟನೆ: ಗರ್ಭಿಣಿ ತಂಗಿಯ ಶಿರಚ್ಛೇದಿಸಿ ಸೆಲ್ಫಿ ತೆಗೆದುಕೊಂಡ ಸಹೋದರ!

ಇತ್ತೀಚಿನ ಸುದ್ದಿ