ಗಗನಕ್ಕೇರಿದ ಟೊಮೆಟೋ ಬೆಲೆ: ಗ್ರಾಹಕನ ಜೇಬಿಗೆ ಕತ್ತರಿ ಹಾಕುತ್ತಿರುವ ತರಕಾರಿ! - Mahanayaka
5:44 AM Thursday 12 - December 2024

ಗಗನಕ್ಕೇರಿದ ಟೊಮೆಟೋ ಬೆಲೆ: ಗ್ರಾಹಕನ ಜೇಬಿಗೆ ಕತ್ತರಿ ಹಾಕುತ್ತಿರುವ ತರಕಾರಿ!

tometo
08/12/2021

ಬೆಂಗಳೂರು: ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ  ತರಕಾರಿ ಬೆಲೆ ಇದೀಗ ಗಗನಕ್ಕೇರಿದ್ದು, ಒಂದೆರಡು ತಿಂಗಳ ಹಿಂದೆ ಕೆಜಿಗೆ 10-20 ರೂಪಾಯಿಗೆ ಮಾರಾಟವಾಗುತ್ತಿದ್ದ ಟೊಮೇಟೋ ಇದೀಗ ಬೆಂಗಳೂರಿನಲ್ಲಿ 1 ಕೆ.ಜಿ.ಗೆ 140ರಿಂದ 150 ರೂಪಾಯಿಗಳಷ್ಟು ಏರಿಕೆಯಾಗುವ ಭೀತಿ ಸೃಷ್ಟಿಯಾಗಿದೆ.

ಇದು ಕೇವಲ ಬೆಂಗಳೂರಿನ ಪರಿಸ್ಥಿತಿ ಮಾತ್ರವಲ್ಲ ಇಡೀ ರಾಜ್ಯದಲ್ಲಿಯೇ ಟೊಮೇಟೋ ಬೆಲೆ ಗಗನಕ್ಕೇರಿದೆ. ಟೊಮೇಟೋಗೆ 140 ರೂ. ಬೆಲೆ ಏರಿಕೆಯಾದರೆ, ಸ್ಥಳೀಯ ಸಣ್ಣಪುಟ್ಟ ಅಂಗಡಿಗಳಲ್ಲಿ 180ಕ್ಕೂ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. ಆದರೂ, ಬೆಲೆ ಏರಿಕೆಯಾಗಿರುವ ಕಾರಣ ಜನರು ಟೊಮೇಟೋ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೆಲವು ಅಂಗಡಿಗಳಲ್ಲಿ ಟೊಮೇಟೊ ಮಾರಾಟ ಮಾಡುವುದನ್ನು ನಿಲ್ಲಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೇವಲ ಟೊಮೇಟೊ ಮಾತ್ರವಲ್ಲದೇ ಕ್ಯಾರೆಟ್, ಬೀನ್ಸ್, ತರಕಾರಿ ಬೆಲೆಗಳು ಕೂಡ 100ರ ಗಡಿದಾಟಿವೆ. ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. 80ರಿಂದ 90 ರೂ. ಬೆಂಗಳೂರಿನಲ್ಲಿ ಟೊಮೆಟೋ ಮಾರಾಟವಾಗುತ್ತಿತ್ತು. ಇದೀಗ ಅಂಗಡಿಯವರು ತೋಚಿದ ರೇಟ್ ಹಾಕ್ತಿದ್ದಾರೆ ಎನ್ನುವ ಆಕ್ರೋಶದ ಮಾತುಗಳು ಕೂಡ ಕೇಳಿ ಬಂದಿವೆ. ಈ ನಡುವೆ ಬೆಲೆ ಏರಿಕೆಯ ಬಗ್ಗೆ ಸರ್ಕಾರ ಮೌನವಹಿಸಿದ್ದು, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಝಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಿಜೆಪಿಗೆ ಈ ಪರಿಸ್ಥಿತಿ ಬರಬಾರದಿತ್ತು | ಡಿ.ಕೆ.ಶಿವಕುಮಾರ್ ವ್ಯಂಗ್ಯ

ಸಿದ್ದರಾಮಯ್ಯ ವಿರುದ್ಧ ಮೇಲ್ವರ್ಗದವರು ಕುದಿಯುತ್ತಿದ್ದಾರೆ: ಸಿ.ಟಿ.ರವಿ ಆಕ್ರೋಶ

ನಮಗೆ ಕಾಂಗ್ರೆಸ್ ನವರ ಪ್ರಮಾಣ ಪತ್ರ ಬೇಕಾಗಿಲ್ಲ | ಸಿಎಂ ಬಸವರಾಜ ಬೊಮ್ಮಾಯಿ

ಬಿಜೆಪಿಗೆ ಯಾರ ಜೊತೆಗೂ ಮೈತ್ರಿಯ ಅಗತ್ಯವಿಲ್ಲ: ವಿ.ಶ್ರೀನಿವಾಸ್ ಪ್ರಸಾದ್

ಪ್ರಾಯೋಗಿಕ ಪರೀಕ್ಷೆಯ ನೆಪ: 17 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ | ಮಾದಕ ದ್ರವ್ಯ ನೀಡಿ ಅತ್ಯಾಚಾರಕ್ಕೆ ಯತ್ನ

ಬಿಜೆಪಿ ಕಾರ್ಯಕರ್ತನ ಕಿರುಕುಳದಿಂದ ಬೇಸತ್ತು ಬೆಂಕಿ ಹಚ್ಚಿಕೊಂಡು ತಾಯಿ ಮಗ ಆತ್ಮಹತ್ಯೆ

ಇತ್ತೀಚಿನ ಸುದ್ದಿ