ನಡು ರಸ್ತೆಯಲ್ಲೇ ಟ್ರಾಫಿಕ್ ಪೊಲೀಸ್, ಕಂಡೆಕ್ಟರ್ ನಡುವೆ ಹೊಡೆದಾಟ! | ವಿಡಿಯೋ ವೈರಲ್
ಬೆಳಗಾವಿ: ನಡು ರಸ್ತೆಯಲ್ಲಿಯೇ ಟ್ರಾಫಿಕ್ ಪೊಲೀಸ್ ಹಾಗೂ ಬಸ್ ಕಂಡೆಕ್ಟರ್ ಹೊಡೆದಾಡಿಕೊಂಡ ಘಟನೆ ಬೆಳಗಾವಿಯ ಚೆನ್ನಮ್ಮ ರಸ್ತೆಯಲ್ಲಿ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.
ಚೆನ್ನಮ್ಮ ವೃತ್ತದ ಬಳಿಯಲ್ಲಿ ಬಸ್ ನಿಲ್ಲಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಂಡೆಕ್ಟರ್ ಹಾಗೂ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆದಿದ್ದು, ಈ ವೇಳೆ ತಾಳ್ಮೆ ಕಳೆದುಕೊಂಡ ಇಬ್ಬರು ಕೂಡ ಪರಸ್ಪರ ಕಪಾಳಕ್ಕೆ ಬಾರಿಸಿಕೊಂಡಿದ್ದು, ಬಳಿಕ ನೂಕಾಟ ತಳ್ಳಾಟ ನಡೆಸಿದ್ದು, ಅವಾಚ್ಯ ಶಬ್ದಗಳಲ್ಲಿ ಬೈದಾಡಿಕೊಂಡಿದ್ದಾರೆ.
ಮಾತನಾಡಿದಕ್ಕೆ ಹೊಡೆದ ಎಂದು ಟ್ರಾಫಿಕ್ ಪೊಲೀಸ್ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ, ಪೊಲೀಸ್ ಆದ್ರೆ, ಬಾಯಿಗೆ ಬಂದ ಹಾಗೆ ಮಾತನಾಡಬಹುದಾ? ಎಂದು ಕಂಡೆಕ್ಟರ್ ಪ್ರಶ್ನಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸರ್ಕಾರಿ ಶಾಲೆಗಳ ಹೀನಾಯ ಸ್ಥಿತಿಯ ಬಗ್ಗೆ ಧ್ವನಿ ಎತ್ತದ ಸ್ವಾಮೀಜಿಗಳು ಮೊಟ್ಟೆಗೆ ವಿರೋಧ ಮಾಡ್ತಿದ್ದಾರೆ!
ಕಾಲಿನಲ್ಲಿ ವೈಡ್ ಬಾಲ್ ಎಂದು ಸೂಚಿಸಿದ ಅಂಪೈರ್: ಬಿದ್ದು ಬಿದ್ದು ನಕ್ಕ ನೆಟ್ಟಿಗರು
ಗಗನಕ್ಕೇರಿದ ಟೊಮೆಟೋ ಬೆಲೆ: ಗ್ರಾಹಕನ ಜೇಬಿಗೆ ಕತ್ತರಿ ಹಾಕುತ್ತಿರುವ ತರಕಾರಿ!
ಬಿಜೆಪಿಗೆ ಈ ಪರಿಸ್ಥಿತಿ ಬರಬಾರದಿತ್ತು | ಡಿ.ಕೆ.ಶಿವಕುಮಾರ್ ವ್ಯಂಗ್ಯ
ಸಿದ್ದರಾಮಯ್ಯ ವಿರುದ್ಧ ಮೇಲ್ವರ್ಗದವರು ಕುದಿಯುತ್ತಿದ್ದಾರೆ: ಸಿ.ಟಿ.ರವಿ ಆಕ್ರೋಶ
ನಮಗೆ ಕಾಂಗ್ರೆಸ್ ನವರ ಪ್ರಮಾಣ ಪತ್ರ ಬೇಕಾಗಿಲ್ಲ | ಸಿಎಂ ಬಸವರಾಜ ಬೊಮ್ಮಾಯಿ