ಸೇನಾ ಹೆಲಿಕಾಫ್ಟರ್ ಪತನ ಹಿನ್ನೆಲೆ:  ಹುಟ್ಟುಹಬ್ಬ ಆಚರಣೆ ರದ್ದುಗೊಳಿಸಿದ ಸೋನಿಯಾ ಗಾಂಧಿ - Mahanayaka

ಸೇನಾ ಹೆಲಿಕಾಫ್ಟರ್ ಪತನ ಹಿನ್ನೆಲೆ:  ಹುಟ್ಟುಹಬ್ಬ ಆಚರಣೆ ರದ್ದುಗೊಳಿಸಿದ ಸೋನಿಯಾ ಗಾಂಧಿ

sonia gandhi
09/12/2021

ಚೆನ್ನೈ:  ತಮಿಳುನಾಡಿನ ಕೂನೂರ್ ಹೆಲಿಕಾಫ್ಟರ್ ಪತನದಲ್ಲಿ ಸಿಡಿಎಸ್ ಬಿಪಿನ್ ರಾವತ್ ಮತ್ತು ಸೈನಿಕರು ಮೃತಪಟ್ಟ ಹಿನ್ನೆಲೆಯಲ್ಲಿ  ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಇಂದು ತಮ್ಮ ಹುಟ್ಟು ಹಬ್ಬ ಆಚರಣೆಯನ್ನು ಕೈಬಿಟ್ಟಿದ್ದು, ಕಾರ್ಯಕರ್ತರು ಯಾವುದೇ ಕಾರ್ಯಕ್ರಮವನ್ನು ನಡೆಸಬಾರದು ಎಂದು ಅವರು  ಹೇಳಿದ್ದಾರೆ.

ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮಾಡಿ, ಪಕ್ಷದ ಮುಖ್ಯಸ್ಥೆಯ ನಿರ್ಧಾರವನ್ನು ತಿಳಿಸಿದ್ದಾರೆ. ಇನ್ನೂ ಲೋಕಸಭಾ ಸಂಸದ ಮಾಣಿಕ್ಕಮ್ ಟಾಗೋರ್ ಅವರು ಕೂಡ ಈ ಬಗ್ಗೆ ಮಾಹಿತಿ ನೀಡಿ, ಬಿಪಿನ್ ರಾವತ್ ಹಾಗೂ ಯೋಧರ ನಿಧನದ ಹಿನ್ನೆಲೆಯಲ್ಲಿ ಸಂಭ್ರಮದ ಆಚರಣೆಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಡಿ.8ರಂದು ನಡೆಯಬಾರದ ಘಟನೆಯೊಂದು ನಡೆದೇ ಹೋಗಿದೆ. ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ರಾವತ್ ಮತ್ತಿತರ ಸೇನಾ ಅಧಿಕಾರಿಗಳು ವೆಲ್ಲಿಂಗ್ಟನ್ ಗೆ ತೆರಳುತ್ತಿದ್ದ ವೇಳೆ ತಮಿಳುನಾಡಿನ ಊಟಿ ಸಮೀಪದ ಕೂನೂರ್ ಬಳಿಯ ಗುಡ್ಡ ಪ್ರದೇಶದಲ್ಲಿ ಹೆಲಿಕಾಫ್ಟರ್ ಪತನಗೊಂಡಿತ್ತು.

ವಿವಿಐಪಿ ಹೆಲಿಕಾಫ್ಟರ್ ಇದಾಗಿದ್ದು, ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದರೂ, ವಿಮಾನ ಪತನಗೊಂಡಿದ್ದು ಹೇಗೆ ಎನ್ನುವುದು ತಿಳಿದು ಬಂದಿಲ್ಲ.  ಈ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ಆರಂಭವಾಗಿದೆ. ಏಕಕಾಲದಲ್ಲಿ ಜನರಲ್ ಬಿಪಿನ್ ರಾವತ್ ಸೇರಿದಂತೆ ಯೋಧರನ್ನು ಕಳೆದುಕೊಂಡಿರುವುದಕ್ಕೆ ಇಡೀ ದೇಶವೇ ಮರುಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೀನುಗಾರ ಮಹಿಳೆಯನ್ನು ಅವಮಾನಿಸಿ ಬಸ್ ನಿಂದ ಬಲವಂತವಾಗಿ ಇಳಿಸಿದ ಕಂಡೆಕ್ಟರ್: ತಮಿಳುನಾಡು ಸಿಎಂ ಮಾಡಿದ್ದೇನು ಗೊತ್ತಾ?

ಸೇನಾ ವಿಮಾನ ಪತನ: 14 ಮಂದಿಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಇವರೊಬ್ಬರೇ…

ಆದಿ ಉಡುಪಿ: ಡಾ.ಬಿ.ಆರ್.ಅಂಬೇಡ್ಕರ ಅವರ 65ನೇ ಮಹಾಪರಿನಿಬ್ಬಾಣ ದಿನ ನಮನ | BSI ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಸೇನಾ ಹೆಲಿಕಾಫ್ಟರ್ ಪತನ: ಬಿಪಿನ್ ರಾವತ್ ಪತ್ನಿ ಮಧುಲಿಕಾ ಮೃತ್ಯು?, ಬಿಪಿನ್ ರಾವತ್ ಸ್ಥಿತಿ ಗಂಭೀರ!

ಮೊಟ್ಟೆ ಯೋಜನೆ ಕೈ ಬಿಡದಿದ್ದರೆ, ಬೀದಿಗಿಳಿದು ಹೋರಾಟ: ಅಖಿಲ ಭಾರತ ಸಸ್ಯಾಹಾರಿಗಳ ಒಕ್ಕೂಟ

ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ | ಡೆತ್ ನೋಟ್ ಆಧಾರದಲ್ಲಿ ಓರ್ವ ಮಹಿಳೆ ಪೊಲೀಸ್ ವಶಕ್ಕೆ

 

ಇತ್ತೀಚಿನ ಸುದ್ದಿ