ಗುಡ್ ನ್ಯೂಸ್: ಹೆಲಿಕಾಫ್ಟರ್ ಪತನದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಚೇತರಿಸಿಕೊಳ್ಳುತ್ತಿದ್ದಾರೆ
ದೆಹಲಿ: ಸೇನಾ ಹೆಲಿಕಾಫ್ಟರ್ ಅಪಘಾತದಲ್ಲಿ 13 ಮಂದಿ ಮೃತಪಟ್ಟ ನೋವಿನ ಘಟನೆಯ ನಡುವೆಯೇ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎನ್ನುವ ಗುಡ್ ನ್ಯೂಸ್ ದೊರೆತಿದೆ.
ಬಿಪಿನ್ ರಾವತ್ ಸಹಿತ 14 ಮಂದಿಯನ್ನು ಹೊತ್ತು ಸಾಗುತ್ತಿದ್ದ ಹೆಲಿಕಾಫ್ಟರ್ ಏಕಾಏಕಿ ಬೆಂಕಿ ಹತ್ತಿಕೊಂಡು ನೆಲಕ್ಕೆ ಅಪ್ಪಳಿಸಿದ್ದು, ಪರಿಣಾಮವಾಗಿ 13 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಮಾತ್ರವೇ ಬದುಕುಳಿದಿದ್ದರು.
ಶೇ.45ರಷ್ಟು ಸುಟ್ಟಗಾಯಗಳೊಂದಿಗೆ ಬದುಕುಳಿದ ವರುಣ್ ಸಿಂಗ್ ಅವರಿಗೆ ವೆಲ್ಲಿಂಗ್ಟನ್ ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನಲ್ಲಿರುವ ಏರ್ಪೋರ್ಸ್ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಇಯರ್ ಫೋನ್ ಬಳಕೆಯಿಂದ ನಮ್ಮ ಮೆದುಳಿಗೆ ಆಗುವ ಸಮಸ್ಯೆಗಳೇನು ಗೊತ್ತಾ?
ಸೇನಾ ಹೆಲಿಕಾಫ್ಟರ್ ಪತನದ ಹಿಂದೆ ಚೀನಾ ಕೈವಾಡ? | ಲೇಸರ್ ದಾಳಿ ನಡೆಯಿತೇ?
ಮೀನುಗಾರ ಮಹಿಳೆಯನ್ನು ಅವಮಾನಿಸಿ ಬಸ್ ನಿಂದ ಬಲವಂತವಾಗಿ ಇಳಿಸಿದ ಕಂಡೆಕ್ಟರ್: ತಮಿಳುನಾಡು ಸಿಎಂ ಮಾಡಿದ್ದೇನು ಗೊತ್ತಾ?
ಸಿದ್ದರಾಮಯ್ಯ ವಿರುದ್ಧ ಮೇಲ್ವರ್ಗದವರು ಕುದಿಯುತ್ತಿದ್ದಾರೆ: ಸಿ.ಟಿ.ರವಿ ಆಕ್ರೋಶ
ಕಾಲಿನಲ್ಲಿ ವೈಡ್ ಬಾಲ್ ಎಂದು ಸೂಚಿಸಿದ ಅಂಪೈರ್: ಬಿದ್ದು ಬಿದ್ದು ನಕ್ಕ ನೆಟ್ಟಿಗರು