ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು, ಹಿಂದೂ-ಮುಸ್ಲಿಂ ಅಂತ ಅಲ್ಲ | ಸಿದ್ದರಾಮಯ್ಯ
ಬೆಂಗಳೂರು: ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕೇ ಹೊರತು ಅವನು ಹಿಂದೂ, ಇವನು ಮುಸ್ಲಿಂ ಎಂದು ನೋಡಿ ಪ್ರೀತಿಸುವುದಲ್ಲ. ಎಲ್ಲರೂ ಕೂಡ ಮನುಷ್ಯರೇ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಚಾಮರಾಜಪೇಟೆಯಲ್ಲಿ ನಿರ್ಮಿಸಿರುವ ಮಹದೇಶ್ವರ ಭವನ ಉದ್ಘಾಟಿಸಿ ಮಾತನಾಡಿದ ಅವರು, ನಾನು ಸಾಮಾನ್ಯವಾಗಿ ದೇವಸ್ಥಾನಕ್ಕೆ ಹೋಗಲ್ಲ. ಮಲೆ ಮಹದೇಶ್ವರ ದೇಗುಲಕ್ಕೆ ಶಿವರಾತ್ರಿ ದಿನ ಬರುತ್ತೇನೆ. ನಾನು ಚಾಮುಂಡಿ, ತಿರುಪತಿ, ನಂಜನಗೂಡು ದೇವಾಲಯಗಳಿಗೆ ಅಪರೂಪಕ್ಕೆ ಹೋಗ್ತೇನೆ. ಹಾಗಂತ ದೇವರ ಮೇಲೆ ನಂಬಿಕೆ ಇಲ್ಲ ಅಂತ ಅಲ್ಲ, ದೇವರು ನಮ್ಮಲ್ಲೇ ಇದ್ದಾನೆ ಎಂದು ಸಿದ್ದರಾಮಯ್ಯ ಹೇಳಿದರು.
ಮನುಷ್ಯ ಮನುಷ್ಯನನ್ನು ಪ್ರೀತಿಸಬೇಕು. ಅವನು ಹಿಂದೂ, ಮುಸ್ಲಿಂ ಅಂತ ಅಲ್ಲ. ಎಲ್ಲರೂ ಕೂಡ ಮನುಷ್ಯರೇ. ಈಶ್ವರ, ಅಲ್ಲಾ ತೇರೆನಾಮ್ ಅಂತ. ಎಲ್ಲರೂ ಅವರ ಧರ್ಮದ ಪಾಲನೆ ಮಾಡಲಿ. ದೇವನೊಬ್ಬ ನಾಮ ಹಲವು. ದೇವರ ಸೃಷ್ಟಿಯಿಂದ ನಾವು ಹುಟ್ಟಿದ್ದೇವೆ. ನಾವೆಲ್ಲ ದೇವರ ಮಕ್ಕಳು. ಎಲ್ಲ ಜಾತಿಯವರು ಮಹದೇಶ್ವರ ದೇಗುಲಕ್ಕೆ ಹೋಗ್ತಾರೆ. ಯಾರು ಕೂಡ ಹೋಗುವುದು ಬೇಡ ಅನ್ನಲ್ಲ. ಎಲ್ಲರೂ ಚೆನ್ನಾಗಿರಲಿ ಅಂತ ಬೇಡಿಕೊಳ್ಳಬೇಕು. ನನಗೆ ಮಾತ್ರ ಒಳ್ಳೆಯದು ಮಾಡು ಅಂದ್ರೆ ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಚರಿತ್ರೆಯನ್ನು ದಾಖಲಿಸುವ ಸಾಕ್ಷ್ಯ ಚಿತ್ರ – ಕಿಸಾನ್ ಸತ್ಯಾಗ್ರಹ
ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಇದೆಯಾ? | ಕೊವಿಡ್ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳೇನು?
ಗುಡ್ ನ್ಯೂಸ್: ಹೆಲಿಕಾಫ್ಟರ್ ಪತನದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಚೇತರಿಸಿಕೊಳ್ಳುತ್ತಿದ್ದಾರೆ
ಇಯರ್ ಫೋನ್ ಬಳಕೆಯಿಂದ ನಮ್ಮ ಮೆದುಳಿಗೆ ಆಗುವ ಸಮಸ್ಯೆಗಳೇನು ಗೊತ್ತಾ?
ಸೇನಾ ಹೆಲಿಕಾಫ್ಟರ್ ಪತನದ ಹಿಂದೆ ಚೀನಾ ಕೈವಾಡ? | ಲೇಸರ್ ದಾಳಿ ನಡೆಯಿತೇ?
ಮೀನುಗಾರ ಮಹಿಳೆಯನ್ನು ಅವಮಾನಿಸಿ ಬಸ್ ನಿಂದ ಬಲವಂತವಾಗಿ ಇಳಿಸಿದ ಕಂಡೆಕ್ಟರ್: ತಮಿಳುನಾಡು ಸಿಎಂ ಮಾಡಿದ್ದೇನು ಗೊತ್ತಾ?