ಮಾಸ್ಕ್ ಹಾಕಿಲ್ಲ ಎಂದು ಮಗಳ ಎದುರೇ ತಂದೆಯ ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ | ಬಿಕ್ಕಿಬಿಕ್ಕಿ ಅತ್ತ ಮಗಳು - Mahanayaka
10:30 AM Thursday 12 - December 2024

ಮಾಸ್ಕ್ ಹಾಕಿಲ್ಲ ಎಂದು ಮಗಳ ಎದುರೇ ತಂದೆಯ ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ | ಬಿಕ್ಕಿಬಿಕ್ಕಿ ಅತ್ತ ಮಗಳು

hyderabad
10/12/2021

ಹೈದರಾಬಾದ್: ಮಾಸ್ಕ್ ಹಾಕಿಲ್ಲ ಎಂದು ವ್ಯಕ್ತಿಯೊಬ್ಬರಿಗೆ ಮಾರ್ಕೆಟ್ ನಲ್ಲಿಯೇ ಪೊಲೀಸ್ ಅಧಿಕಾರಿ ಕಪಾಳ ಮೋಕ್ಷ ನಡೆಸಿದ್ದು, ಈ ವೇಳೆ ಪೆಟ್ಟು ತಿಂದ ವ್ಯಕ್ತಿಯ ಮಗಳು ಹೆದರಿ ಗಳಗಳನೇ ಅತ್ತಿರುವ ಘಟನೆ ಹೈದರಾಬಾದ್ ನ ಮಹುಬಾದ್ ನಗರದಲ್ಲಿ ನಡೆದಿದೆ.

ಮಹುಬಾದ್ ನಿವಾಸಿಯಾಗಿರುವ ಶ್ರೀನಿವಾಸ್ ಎಂಬವರು ಪೊಲೀಸ್ ಅಧಿಕಾರಿಯಿಂದ ಹಲ್ಲೆಗೊಳಗಾದವರಾಗಿದ್ದಾರೆ. ಶ್ರೀನಿವಾಸ್ ಅವರು ತಮ್ಮ ಮಗಳ ಜೊತೆಗೆ ಮಾರ್ಕೆಟ್ ಗೆ ತರಕಾರಿ ತರಲೆಂದು ಹೋಗಿದ್ದು, ಈ ವೇಳೆ ಈ ವೇಳೆ ಅವರು ಮಾಸ್ಕ್ ಧರಿಸಿರಲಿಲ್ಲ ಎನ್ನಲಾಗಿದೆ. ಈ ವೇಳೆ ಸ್ಥಳದಲ್ಲಿದ್ದ ಸಬ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಅವರ ಕೆನ್ನೆಗೆ ಬಾರಿಸಿ ಮಾಸ್ಕ್ ಹಾಕು ಎಂದು ಅವಾಜ್ ಹಾಕಿದ್ದಾರೆನ್ನಲಾಗಿದೆ.

ಅಪ್ಪನಿಗೆ ಪೊಲೀಸ್ ಹೊಡೆದದ್ದನ್ನು ಕಂಡು ಮಗಳು ಬಿಕ್ಕಿಬಿಕ್ಕಿ ಅತ್ತಿದ್ದಾಳೆ. ಈ ವೇಳೆ ಶ್ರೀನಿವಾಸ್ ಪೊಲೀಸ್ ಅಧಿಕಾರಿಯ ನಡೆಯನ್ನು ಪ್ರಶ್ನಿಸಿ ಸ್ಥಳದಲ್ಲಿಯೇ ತರಾಟೆಗೆತ್ತಿಕೊಂಡರು. ಮಾಸ್ಕ್ ಧರಿಸಿಲ್ಲವೆಂದರೆ, ದಂಡ ಹಾಕಿ ನನಗೆ ಹೊಡೆಯಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.

ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಪೊಲೀಸ್ ಅಧಿಕಾರಿಯ ದರ್ಪದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಕ್ಕಳಿದ್ದರೆ ಎನ್ನುವುದನ್ನೂ ನೋಡದೇ ಈ ರೀತಿ ಹೊಡೆಯುವುದೇ? ಇದು ಜನಸ್ನೇಹಿ ಪೊಲೀಸರೇ? ಎಂದು ಪ್ರಶ್ನಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

2 ಡೋಸ್ ಜೊತೆಗೆ ಬೂಸ್ಟರ್ ಡೋಸ್ ಪಡೆದುಕೊಂಡರೂ ಇಬ್ಬರಿಗೆ ವಕ್ಕರಿಸಿದ ಒಮಿಕ್ರಾನ್

ಅರ್ಧ ಗಂಟೆಗಳ ಕಾಲ ಆಕಾಶದಲ್ಲೇ ಸುತ್ತು ಹಾಕಿದ ಸಿಎಂ ಪ್ರಯಾಣಿಸುತ್ತಿದ್ದ ವಿಮಾನ!

ರಾಜ್ಯದ ಜನತೆಗೆ ಬಿಗ್ ಶಾಕ್: ಬೇಸಿಗೆಗೆ ಮುನ್ನವೇ ಏರಿಕೆಯಾಗಲಿದೆಯೇ ವಿದ್ಯುತ್ ಬೆಲೆ?

ಮೊಟ್ಟೆ ಕೊಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯಕೊಟ್ಟಂತಾಗುತ್ತದೆ | ಪೇಜಾವರ ಶ್ರೀ

ಎರಡು ಲಾರಿ, ಒಂದು ಕಾರಿನ ನಡುವೆ ಸರಣಿ ಅಪಘಾತ!

ಇಯರ್ ಫೋನ್ ಬಳಕೆಯಿಂದ ನಮ್ಮ ಮೆದುಳಿಗೆ ಆಗುವ ಸಮಸ್ಯೆಗಳೇನು ಗೊತ್ತಾ?

ಇತ್ತೀಚಿನ ಸುದ್ದಿ