ಪತ್ನಿ ನಿದ್ದೆಗೆ ಜಾರಿದ್ದ ವೇಳೆ ಪತಿಯಿಂದ ಹೀನ ಕೃತ್ಯ: ನಡೆಯಿತು ಭೀಕರ ಕೊಲೆ - Mahanayaka
10:07 AM Thursday 12 - December 2024

ಪತ್ನಿ ನಿದ್ದೆಗೆ ಜಾರಿದ್ದ ವೇಳೆ ಪತಿಯಿಂದ ಹೀನ ಕೃತ್ಯ: ನಡೆಯಿತು ಭೀಕರ ಕೊಲೆ

crime news
10/12/2021

ಹೈದರಾಬಾದ್: ಪತ್ನಿಯ ಮೇಲಿನ ವಿಪರೀತ ಅನುಮಾನದಿಂದ ವ್ಯಕ್ತಿಯೋರ್ವ ಆಕೆಯನ್ನು ಭೀಕರವಾಗಿ ಹತ್ಯೆಗೈದು ಶಿರಚ್ಚೇದಿಸಿದ ಘಟನೆ ಹೈದರಾಬಾದ್ ನ ರಾಜೇಂದ್ರ ನಗರದಲ್ಲಿ ನಡೆದಿದೆ.

ಫರ್ವೇಜ್ ಎಂಬಾತ ಹತ್ಯೆ ಆರೋಪಿಯಾಗಿದ್ದು, ಈತನ ಪತ್ನಿ ಸಮ್ರಿನ್ ಬೇಗಂ ಹತ್ಯೆಗೀಡಾದವರು ಎಂದು ಗುರುತಿಸಲಾಗಿದೆ. ಫರ್ವೇಜ್ ನ ಅನುಮಾನದಿಂದಾಗಿ ಇವರಿಬ್ಬರ ಸಂಸಾರದಲ್ಲಿ  ನಿರಂತರ ಜಗಳ ನಡೆಯುತ್ತಿದ್ದು, ನೆಮ್ಮದಿ ಇಲ್ಲದಂತಾಗಿತ್ತು ಎನ್ನಲಾಗಿದೆ.

ಕೆಲವು ವರ್ಷಗಳ ಹಿಂದೆ, ಇವರಿಬ್ಬರು ಸಂಸಾರ ಸರಿ ಹೊಂದದ ಹಿನ್ನೆಲೆಯಲ್ಲಿ ಬೇರ್ಪಟ್ಟಿದ್ದರು. ಬಳಿಕ ಡಿವೋರ್ಸ್ ಕೂಡ ಆಗಿತ್ತು ಎನ್ನಲಾಗಿದೆ. ಆದರೆ, ಆ ಬಳಿಕ ಇಬ್ಬರು ಕೂಡ ಮನಸ್ಸು ಬದಲಿಸಿ ಮರು ಮದುವೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಆರಂಭದಲ್ಲಿ ಎಲ್ಲವೂ ಸರಿಯಾಗಿದ್ದರೂ, ಆ ಬಳಿಕ ಫರ್ವೇಜ್ ಗೆ ಮತ್ತೆ ಪತ್ನಿಯ ಮೇಲೆ ಅನುಮಾನ ಮೂಡಲಾರಂಭಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು ಎನ್ನಲಾಗಿದೆ. ಇದೀಗ ರಾತ್ರಿ ವೇಳೆ ಪತ್ನಿ ನಿದ್ದೆಗೆ ಜಾರಿದ್ದ ಸಂದರ್ಭ ನೋಡಿಕೊಂಡು ಫರ್ವೇಜ್ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿರುವುದೇ ಅಲ್ಲದೇ ಶಿರಚ್ಛೇದನ ನಡೆಸಿ ವಿಕೃತಿ ಮೆರೆದಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಸ್ಥಳೀಯ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶಿಕ್ಷಕರ ಮೇಲೆ ವಿದ್ಯಾರ್ಥಿಗಳಿಂದ ಪುಂಡಾಟಿಕೆ: ವಿಡಿಯೋ ವೈರಲ್ ಆದ ಬಳಿಕ ನಡೆದದ್ದೇನು?

ಮಾಸ್ಕ್ ಹಾಕಿಲ್ಲ ಎಂದು ಮಗಳ ಎದುರೇ ತಂದೆಯ ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ | ಬಿಕ್ಕಿಬಿಕ್ಕಿ ಅತ್ತ ಮಗಳು

2 ಡೋಸ್ ಜೊತೆಗೆ ಬೂಸ್ಟರ್ ಡೋಸ್ ಪಡೆದುಕೊಂಡರೂ ಇಬ್ಬರಿಗೆ ವಕ್ಕರಿಸಿದ ಒಮಿಕ್ರಾನ್

ಅರ್ಧ ಗಂಟೆಗಳ ಕಾಲ ಆಕಾಶದಲ್ಲೇ ಸುತ್ತು ಹಾಕಿದ ಸಿಎಂ ಪ್ರಯಾಣಿಸುತ್ತಿದ್ದ ವಿಮಾನ!

ರಾಜ್ಯದ ಜನತೆಗೆ ಬಿಗ್ ಶಾಕ್: ಬೇಸಿಗೆಗೆ ಮುನ್ನವೇ ಏರಿಕೆಯಾಗಲಿದೆಯೇ ವಿದ್ಯುತ್ ಬೆಲೆ?

ಮೊಟ್ಟೆ ಕೊಡುವುದರಿಂದ ಸಮಾಜಕ್ಕೆ ಕೆಟ್ಟ ಅಭಿಪ್ರಾಯಕೊಟ್ಟಂತಾಗುತ್ತದೆ | ಪೇಜಾವರ ಶ್ರೀ

ಇತ್ತೀಚಿನ ಸುದ್ದಿ