ವಿಶ್ವ ಮಾನವ ಹಕ್ಕುಗಳ ದಿನಾಚರಣೆ | ಸಂತ್ರಸ್ತರ ಪಾಲಿನ ಆಶಾಕಿರಣ 'ಸಿಕ್ರಂ': ಡಾ.ದೇವರಾಜು.ಎಸ್.ಎಸ್.  - Mahanayaka
10:50 PM Friday 20 - September 2024

ವಿಶ್ವ ಮಾನವ ಹಕ್ಕುಗಳ ದಿನಾಚರಣೆ | ಸಂತ್ರಸ್ತರ ಪಾಲಿನ ಆಶಾಕಿರಣ ‘ಸಿಕ್ರಂ’: ಡಾ.ದೇವರಾಜು.ಎಸ್.ಎಸ್. 

sikrim
10/12/2021

ಪಿರಿಯಾಪಟ್ಟಣ: ಮಾನವ ಹಕ್ಕುಗಳ ಸಾರ್ವತ್ರಿಕ ವಿಶ್ವ ಘೋಷಣೆಯ ಅಂಗವಾಗಿ  ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮವನ್ನು ದಕ್ಷಿಣ ಭಾರತದ ಮಾನವ ಹಕ್ಕುಗಳ ಶಿಕ್ಷಣ ಮತ್ತು ಸಂರಕ್ಷಣಾ ಘಟಕ (ಸಿಕ್ರಂ) ಪಿರಿಯಾಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಪಿರಿಯಾಪಟ್ಟಣ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಕುಮಾರ್. ಎನ್ ರವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಕ್ರಂ ಸಂಸ್ಥೆಯ ಭೀಮಪ್ಪನವರು,  ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಹಿನ್ನೆಲೆಯ ಕುರಿತು ಪ್ರಸ್ತಾಪಿಸಿ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಆದ ಹಿಂಸೆ, ಅಪಾರ ಸಾವು ನೋವಿನ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ  ಶಾಂತಿ ಸ್ಥಾಪಿಸಲು ಮಾನವ ಹಕ್ಕು ಸಂರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ವಿಶ್ವ ಘೋಷಣೆಯನ್ನು ಮಾಡಲಾಯಿತು. ಅದಕ್ಕನುಗುಣವಾಗಿ ಭಾರತದಲ್ಲಿ ಅನೇಕ ಕಾಯ್ದೆ ಕಾನೂನುಗಳನ್ನು ರಚಿಸಿ ಹಕ್ಕುಗಳ ರಕ್ಷಣೆ ಮಾಡುವ ಮಾಡಲಾಗುತ್ತಿದೆ. ಆದರೂ ಹಕ್ಕು ಉಲ್ಲಂಘನೆಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಉಪನ್ಯಾಸಕ ಡಾ.ದೇವರಾಜು ಎಸ್.ಎಸ್. ರವರು, ಮಾನವ ಹಕ್ಕುಗಳ ರಕ್ಷಣೆ ಮತ್ತು ಸಂವರ್ಧನೆ ಕುರಿತು ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಅವ್ಯಾಹತವಾಗಿ ದಿನಂಪ್ರತಿ  ನಡೆಯುತ್ತಿದೆ. ಮಾನವ ಹಕ್ಕುಗಳನ್ನು ಸಂರಕ್ಷಿಸುವ ಮತ್ತು ಸಂವರ್ಧಿಸುವ ಜವಾಬ್ದಾರಿಯನ್ನು ಹೊತ್ತಿರುವ ರಾಷ್ಟ್ರೀಯ ಮತ್ತು ರಾಜ್ಯ  ಮಾನವ ಹಕ್ಕುಗಳ ಆಯೋಗಗಳು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ನಾಗರಿಕರ ರಕ್ಷಣೆ ಮಾಡುವ ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ  ಪರಿಣಾಮಕಾರಿ ಕಾರ್ಯನಿರ್ವಹಣೆಯ ಅಗತ್ಯತೆಯನ್ನು ಒತ್ತಿ ಹೇಳಿದರು.


Provided by

ಅಲ್ಲದೆ ಸರ್ಕಾರಿ ಆಯೋಗ ಮತ್ತು ಇಲಾಖೆಗಳಂತೆಯೇ ಮಾನವ ಹಕ್ಕುಗಳ ರಕ್ಷಣೆಗಾಗಿ ಅಸಂಖ್ಯಾತ ಸರ್ಕಾರೇತರ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ. ಅಂತಹ ಪ್ರಮುಖ ಸಂಘಟನೆಗಳಲ್ಲಿ ದಕ್ಷಿಣ ಭಾರತದ ಮಾನವ ಹಕ್ಕುಗಳ ಶಿಕ್ಷಣ ಮತ್ತು ನಿಗಾ ಘಟಕ ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಮಾನವೀಯ ಮತ್ತು ನ್ಯಾಯಯುಕ್ತ  ಸಮಾಜ ನಿರ್ಮಾಣದ ಗುರಿಯನ್ನು ಹೊಂದಿ  ಕಾರ್ಯಪ್ರವೃತ್ತವಾಗಿದೆ. ಸಿಕ್ರಂ ಸಂಸ್ಥೆಯು ಮಾನವ ಹಕ್ಕುಗಳ ಅರಿವಿಲ್ಲದ ಜನರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ಕಾರ್ಯಕರ್ತರಿಗೆ, ಸರ್ಕಾರೇತರ ಸಂಸ್ಥೆಯ ಸಿಬ್ಬಂದಿಗಳಿಗೆ, ಪೊಲೀಸ್ ಅಧಿಕಾರಿಗಳಿಗೆ, ಕಾನೂನು ವೃತ್ತಿಪರರಿಗೆ, ಪತ್ರಕರ್ತರಿಗೆ,  ಮಾನವ ಹಕ್ಕುಗಳ ಶಿಕ್ಷಣ ನೀಡುತ್ತಿದೆ. ಅಲ್ಲದೆ ಸಾರ್ವಜನಿಕರು ಹಕ್ಕು ಉಲ್ಲಂಘನೆಯ ಕುರಿತು ದೂರು ನೀಡುವ ಸಲುವಾಗಿ ಸಹಾಯವಾಣಿ, ಸಂಚಾರಿ ಕಾನೂನು ಘಟಕ, ಹಾಗೂ ಸತ್ಯಶೋಧನಾ ವರದಿ ರಚಿಸಿ ಉಲ್ಲಂಘನೆಗೆ ಪ್ರತಿಯಾಗಿ ಸೂಕ್ತ ಕ್ರಮ ಜರುಗಿಸಲು ಮಾನವ ಹಕ್ಕುಗಳ ಆಯೋಗಗಳಿಗೆ ಹಾಗೂ ಇಲಾಖೆಗಳಿಗೆ ರವಾನಿಸಿ ಸೂಕ್ತ ಪರಿಹಾರ ದೊರಕಿಸಿಕೊಟ್ಟು  ನೊಂದ ಜನರ ಪಾಲಿಗೆ ಆಶಾಕಿರಣವಾಗಿದೆ.  ಅಲ್ಲದೆ ಜೀತಪದ್ಧತಿ, ಬಾಲಕಾರ್ಮಿಕತೆ, ಮಹಿಳಾ ಶೋಷಣೆ, ಅಲ್ಪಸಂಖ್ಯಾತರು, ದೀನದಲಿತರು, ಹಿಂದುಳಿದವರ ಮೇಲಿನ ಶೋಷಣೆ ಗಳಂತಹ ಹಕ್ಕು ಉಲ್ಲಂಘನೆಗಳನ್ನು ತಡೆಗಟ್ಟಲು ನಿರಂತರ ಶ್ರಮಿಸುತ್ತಿದೆ. ಅಲ್ಲದೆ ಸಂತ್ರಸ್ತರಿಗೆ ಸಕಾಲಿಕವಾಗಿ ಸಲಹೆ, ಸೂಚನೆ, ಕಾನೂನಿನ ನೆರವು, ಆರ್ಥಿಕ ನೆರವು ನೀಡುವ ಮೂಲಕ ಸಂತ್ರಸ್ತರ ಪಾಲಿಗೆ ಜೀವಧ್ವನಿಯಾಗಿದೆ ಎಂದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀ ಕುಮಾರ್ ಎನ್. ರವರು ಮಾತನಾಡಿ, ಭಾರತದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಸಂವಿಧಾನಬದ್ಧವಾಗಿ ಮೂಲಭೂತ ಹಕ್ಕುಗಳಿವೆ.  ಹಾಗೂ ಹಕ್ಕು ಸಂರಕ್ಷಣೆಗಾಗಿ ಅನೇಕ ಕಾಯ್ದೆ ಕಾನೂನುಗಳನ್ನು  ಜಾರಿಗೆ ತರಲಾಗಿದೆ. ಈ ಹಕ್ಕುಗಳು ಪ್ರತಿಯೊಬ್ಬರ ಕಲ್ಯಾಣಕ್ಕೆ ಅತ್ಯಗತ್ಯ ಈ ಹಕ್ಕುಗಳೆಲ್ಲವೂಗಳನ್ನು ನಾವು ಅರ್ಥೈಸಿಕೊಂಡು ಇತರರ ಹಕ್ಕುಗಳನ್ನು ಗೌರವಿಸಬೇಕು. ಇತರರಿಗೂ ಹಕ್ಕುಗಳ ಕುರಿತು ಜಾಗೃತಿ ಮೂಡಿಸಬೇಕೆಂದು ಸಲಹೆ ನೀಡಿದರು.

ಸಿಕ್ರಂನ ಮೈಸೂರು ಜಿಲ್ಲಾ ಸಂಯೋಜಕರಾದ ದೀಪ.ಎಂ ರವರು ಮಾತನಾಡುತ್ತಾ ಹಕ್ಕುಗಳು ಹುಟ್ಟಿನಿಂದ ಸಾಯುವವರೆಗೂ ಅತ್ಯವಶ್ಯಕವಾಗಿವೆ. ಗರ್ಭಾವಸ್ಥೆಯಲ್ಲಿ ಹೆಣ್ಣು ಮಗು ಅಥವಾ ಗಂಡು ಮಗು ಎಂದು ತಿಳಿಯುವ ಬಯಕೆಯಲ್ಲಿ ಸ್ಕ್ಯಾನಿಂಗ್ ಮಾಡಿಸುವುದು ಸಹ ಹಕ್ಕು ಉಲ್ಲಂಘನೆ ಎಂದು ನೆರೆದಿದ್ದ ಜನರಿಗೆ ಜಾಗೃತಿ ಮೂಡಿಸಿದರು. ಹಾಗಾಗಿ ಮಹಿಳೆಯರು ಅವರ ಹಕ್ಕುಗಳ ಕುರಿತು ಜಾಗೃತರಾಗಬೇಕು ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವಾಹನ ಇನ್ಸೂರೆನ್ಸ್ ನೆಪದಲ್ಲಿ ಕರೆದು ಶ್ರೀರಾಮಸೇನೆಯ ಕಾರ್ಯಕರ್ತನಿಗೆ ಹಲ್ಲೆ

ಪತ್ನಿ ನಿದ್ದೆಗೆ ಜಾರಿದ್ದ ವೇಳೆ ಪತಿಯಿಂದ ಹೀನ ಕೃತ್ಯ: ನಡೆಯಿತು ಭೀಕರ ಕೊಲೆ

ಶಿಕ್ಷಕರ ಮೇಲೆ ವಿದ್ಯಾರ್ಥಿಗಳಿಂದ ಪುಂಡಾಟಿಕೆ: ವಿಡಿಯೋ ವೈರಲ್ ಆದ ಬಳಿಕ ನಡೆದದ್ದೇನು?

ಮಾಸ್ಕ್ ಹಾಕಿಲ್ಲ ಎಂದು ಮಗಳ ಎದುರೇ ತಂದೆಯ ಕೆನ್ನೆಗೆ ಬಾರಿಸಿದ ಪೊಲೀಸ್ ಅಧಿಕಾರಿ | ಬಿಕ್ಕಿಬಿಕ್ಕಿ ಅತ್ತ ಮಗಳು

2 ಡೋಸ್ ಜೊತೆಗೆ ಬೂಸ್ಟರ್ ಡೋಸ್ ಪಡೆದುಕೊಂಡರೂ ಇಬ್ಬರಿಗೆ ವಕ್ಕರಿಸಿದ ಒಮಿಕ್ರಾನ್

ಅರ್ಧ ಗಂಟೆಗಳ ಕಾಲ ಆಕಾಶದಲ್ಲೇ ಸುತ್ತು ಹಾಕಿದ ಸಿಎಂ ಪ್ರಯಾಣಿಸುತ್ತಿದ್ದ ವಿಮಾನ!

ಇತ್ತೀಚಿನ ಸುದ್ದಿ