ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪೂಜಾರಿ: ಮಹಿಳೆಯ ದಾರುಣ ಸಾವು - Mahanayaka
7:25 AM Thursday 12 - December 2024

ಪೂಜೆಯ ನೆಪದಲ್ಲಿ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದ ಪೂಜಾರಿ: ಮಹಿಳೆಯ ದಾರುಣ ಸಾವು

parvati
11/12/2021

ಹಾಸನ: ಪೂಜೆಯ ನೆಪದಲ್ಲಿ ಪೂಜಾರಿಯೋರ್ವ ಅನಾರೋಗ್ಯ ಪೀಡಿತ ಮಹಿಳೆಯ ತಲೆಗೆ ಹೊಡೆದಿದ್ದು, ಪರಿಣಾಮವಾಗಿ ಮಹಿಳೆ ಸಾವನ್ನಪ್ಪಿರುವ ಅಮಾನವೀಯ ಘಟನೆ ಚನ್ನರಾಯಪಟ್ಟಣ ತಾಲೂಕಿನ ಬೆಕ್ಕ ಗ್ರಾಮದಲ್ಲಿ ನಡೆದಿದೆ.

ವರದಿಯ ಪ್ರಕಾರ, ಡಿಸೆಂಬರ್ 7ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. 47 ವರ್ಷದ ಪಾರ್ವತಿ ಅವರು ತಲೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಹೋಗಿಯೂ ಗುಣಮುಖರಾಗದಿದ್ದ ಹಿನ್ನೆಲೆಯಲ್ಲಿ ಗ್ರಾಮದ ಪಿರಿಯಾಪಟ್ಟಣದಮ್ಮ ದೇವರ ಪೂಜಾರಿ ಮಧು ಎಂಬವರ ಬಳಿಗೆ ಕರೆದುಕೊಂಡು ಹೋಗಿದ್ದು, ತಲೆ ನೋವನ್ನು ಬೆತ್ತದಿಂದ ಸರಿಪಡಿಸುವುದಾಗಿ ಹೇಳಿದ ಪೂಜಾರಿ ಬೆತ್ತದಿಂದ ಮಹಿಳೆಗೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಪೂಜಾರಿಯ ಏಟಿನಿಂದಾಗಿ ಡಿಸೆಂಬರ್ 8ರಂದು ಮಹಿಳೆ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಈ ಘಟನೆ ಸಂಬಂಧ ಡಿಸೆಂಬರ್ 9ರಂದು  ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಲೆಗೆ ಬಿದ್ದ ಬಲವಾದ ಒಂದೇ ಏಟಿಗೆ ಪಾರ್ವತಿ ಅವರು ತೀವ್ರ ಅಸ್ವಸ್ಥಗೊಂಡಿದ್ದರು ಎನ್ನಲಾಗಿದೆ. ಈ ವೇಳೆ ನಿಂಬೆ ರಸ ಕುಡಿಸಿ ಕಾಯಿಲೆ ಗುಣವಾಗಿದೆ ಎಂದು ಹೇಳಿ ಕುಟುಂಬಸ್ಥರನ್ನು ಪೂಜಾರಿ ಕಳುಹಿಸಿದ್ದಾನೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

1 ಲೀಟರ್ ಕತ್ತೆಯ ಹಾಲಿಗೆ 10 ಸಾವಿರ ರೂಪಾಯಿ! | ಒಂದು ಚಮಚ ಕತ್ತೆಯ ಹಾಲಿಗೆ 100 ರೂಪಾಯಿ!

ವಿಶ್ವ ಮಾನವ ಹಕ್ಕುಗಳ ದಿನಾಚರಣೆ | ಸಂತ್ರಸ್ತರ ಪಾಲಿನ ಆಶಾಕಿರಣ ‘ಸಿಕ್ರಂ’: ಡಾ.ದೇವರಾಜು.ಎಸ್.ಎಸ್. 

ವಾಹನ ಇನ್ಸೂರೆನ್ಸ್ ನೆಪದಲ್ಲಿ ಕರೆದು ಶ್ರೀರಾಮಸೇನೆಯ ಕಾರ್ಯಕರ್ತನಿಗೆ ಹಲ್ಲೆ

ಪತ್ನಿ ನಿದ್ದೆಗೆ ಜಾರಿದ್ದ ವೇಳೆ ಪತಿಯಿಂದ ಹೀನ ಕೃತ್ಯ: ನಡೆಯಿತು ಭೀಕರ ಕೊಲೆ

ಶಿಕ್ಷಕರ ಮೇಲೆ ವಿದ್ಯಾರ್ಥಿಗಳಿಂದ ಪುಂಡಾಟಿಕೆ: ವಿಡಿಯೋ ವೈರಲ್ ಆದ ಬಳಿಕ ನಡೆದದ್ದೇನು?

ಇತ್ತೀಚಿನ ಸುದ್ದಿ