ರಂಗಾಯಣದಲ್ಲಿ ರಾಜಕೀಯ ನಾಟಕ: ಠಾಣೆ ಮೆಟ್ಟಿಲೇರಿದ ರಂಗಾಯಣ-ಪ್ರಗತಿಪರರ ವಿವಾದ - Mahanayaka
11:12 AM Saturday 21 - September 2024

ರಂಗಾಯಣದಲ್ಲಿ ರಾಜಕೀಯ ನಾಟಕ: ಠಾಣೆ ಮೆಟ್ಟಿಲೇರಿದ ರಂಗಾಯಣ-ಪ್ರಗತಿಪರರ ವಿವಾದ

rangayana
15/12/2021

ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಕ್ರವರ್ತಿ ಸೂಲಿಬೆಲೆ ಹಾಗೂ ಮಾಳವಿಕ ಅವಿನಾಶ್ ಅವರನ್ನು ಅತಿಥಿಗಳಾಗಿ ಆಹ್ವಾನಿಸಿದ ವಿಚಾರಕ್ಕೆ ಪ್ರಗತಿಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಇದೀಗ ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಸೂಲಿಬೆಲೆ ಹಾಗೂ ಮಾಳವಿಕ ಅವರನ್ನು ಆಹ್ವಾನಿಸಿದರೆ, ನಾಟಕ ನಡೆಯಲು ಬಿಡುವುದಿಲ್ಲ ಎಂದು ಪ್ರಗತಿಪರರು ಎಚ್ಚರಿಕೆ ನೀಡಿದ್ದು. ಈ ಹಿನ್ನೆಲೆಯಲ್ಲಿ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ ಎಂದು ವರದಿಯಾಗಿದೆ.

ಬಿಜೆಪಿ ಪರ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರ ಜೊತೆಗೆ ಪ್ರಗತಿಪರ ಹೋರಾಟಗಾರರು ವಾಗ್ವಾದ ನಡೆಸಿದ್ದರು ಎಂದು ಹೇಳಲಾಗಿದೆ.


Provided by

ಈ ಘಟನೆಯ ಹಿನ್ನೆಲೆಯಲ್ಲಿ  ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ,  ಹಿರಿಯ ಹೋರಾಟಗಾರ ಪ.ಮಲ್ಲೇಶ್, ಮಾಜಿ ನಿರ್ದೇಶಕ ಜನ್ನಿ, ಕಲಾವಿದ ಮೈಮ್ ರಮೇಶ್ ಸೇರಿದಂತೆ ಹಲವರ ವಿರುದ್ಧ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳ್ಬೇಕಂದ್ರೆ, ನೀವು ಟ್ರೈಲರ್ ನೋಡಬೇಕು | ರಶ್ಮಿಕಾ ಮಂದಣ್ಣ

ಬೂದಿ ಮುಚ್ಚಿದ ಕೆಂಡದಂತಿದ್ದ ಉಪ್ಪಿನಂಗಡಿ ಸಹಜ ಸ್ಥಿತಿಯತ್ತ!

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ | ಪ್ರಧಾನಿ ಮೋದಿ ಸಹಿತ ಗಣ್ಯರಿಂದ ಸಂತಾಪ

ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವನ ಕಥೆ ಮುಗಿದಿದೆ | ರಮೇಶ್ ಜಾರಕಿಹೊಳಿ

ಕುಡಿತದ ಮತ್ತಿನಲ್ಲಿ ಅಪ್ರಾಪ್ತ ವಯಸ್ಸಿನ ತನ್ನ ಮಗಳನ್ನೇ ಅತ್ಯಾಚಾರ ನಡೆಸಿದ ತಂದೆ!

ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣಿನ ಜೊತೆಗೆ ಶೇಂಗಾ ಮಿಠಾಯಿ ನೀಡಲು ನಿರ್ಧಾರ!

ಇತ್ತೀಚಿನ ಸುದ್ದಿ