ಉಪ್ಪಿನಂಗಡಿ ಘಟನೆ ಖಂಡಿಸಿ ಮಂಗಳೂರಿನಲ್ಲಿ ಪಿಎಫ್ ಐ ಬೃಹತ್ ಪ್ರತಿಭಟನೆ - Mahanayaka
6:37 PM Friday 20 - September 2024

ಉಪ್ಪಿನಂಗಡಿ ಘಟನೆ ಖಂಡಿಸಿ ಮಂಗಳೂರಿನಲ್ಲಿ ಪಿಎಫ್ ಐ ಬೃಹತ್ ಪ್ರತಿಭಟನೆ

pfi
17/12/2021

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ನಡೆದ ಲಾಠಿ ಚಾರ್ಜ್ ಖಂಡಿಸಿ, ಬಂಧಿತ ಅಮಾಯಕರನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು ಮಂಗಳೂರಿನ ಕ್ಲಾಕ್ ಟವರ್ ಬಳಿ ಎಸ್ ಪಿ ಕಚೇರಿ ಚಲೋ ನಡೆಸಿತು.

ಹಂಪನಕಟ್ಟೆ ವೃತ್ತದಿಂದ ಕ್ಲಾಕ್ ಟವರ್ ವರೆಗೆ ರ್ಯಾಲಿ ನಡೆಸಿದ ಪ್ರತಿಭಟನಾಕಾರರು, ಭಾರೀ ಸಂಖ್ಯೆಯಲ್ಲಿ ನೆರೆದು ಘೋಷಣೆ ಕೂಗಿದರು. ಇನ್ನು ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಂಗಳೂರು ಎಸ್ ಪಿ ಕಚೇರಿ ಬಳಿಯಲ್ಲಿ ಬಿಗು ಬಂದೋಬಸ್ತ್ ನಡೆಸಲಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಫಿ ಬೆಳ್ಳಾರೆ, ಜನರೇ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತರುವುದಾದರೆ, ಪೊಲೀಸ್ ವ್ಯವಸ್ಥೆಗಳೇಕೆ? ಪೊಲೀಸರು ಯಾಕೆ ಸರ್ಕಾರದಿಂದ ವೇತನ ಪಡೆದುಕೊಳ್ಳುತ್ತಾರೆ? ಎಂದು ಉಪ್ಪಿನಂಗಡಿ ಘಟನೆಯನ್ನು ಉಲ್ಲೇಖಿಸಿ ಪ್ರಶ್ನಿಸಿದರು.


Provided by

ಪಿಸ್ತೂಲ್ ಮತ್ತು ಲಾಠಿಗೆ ಧರ್ಮವಿಲ್ಲ ಎಂದು ಟಿ.ಡಿ.ನಾಗರಾಜ್ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ಧ ಪೊಲೀಸರು ಇನ್ನೂ ಕ್ರಮವನ್ನೇ ಕೈಗೊಂಡಿಲ್ಲ ಎಂದು ಇದೇ ವೇಳೆ ಪೊಲೀಸರ ಕ್ರಮಗಳ ಬಗ್ಗೆ ಟೀಕಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಿದ್ದರಾಮಯ್ಯ, ಸಿಎಂ ಇಬ್ರಾಹಿಂ ಬೈದಾಡಿಕೊಳ್ಳುತ್ತಿರುವ ವಿಡಿಯೋ ಬಗ್ಗೆ ಸಿಎಂ ಇಬ್ರಾಹಿಂ ಹೇಳಿದ್ದೇನು ಗೊತ್ತಾ?

ಅತ್ಯಾಚಾರದ ಬಗ್ಗೆ ವ್ಯಂಗ್ಯ: ಸ್ಪೀಕರ್ ಕಾಗೇರಿ ಕ್ಷಮೆ ಕೇಳುವುದಿಲ್ಲವೇ? ಎಂಬ ಪ್ರಶ್ನೆಗೆ ನಿರುತ್ತರವಾದ ಯಡಿಯೂರಪ್ಪ

“ರೇಪ್ ತಡೆಯಲು ಆಗದಿದ್ದರೆ, ಮಲಗಿ ಎಂಜಾಯ್ ಮಾಡಬೇಕು” | ತನ್ನ ವಿವಾದಾತ್ಮಕ ಹೇಳಿಕೆಗೆ ಕ್ಷಮೆ ಕೇಳಿದ ರಮೇಶ್ ಕುಮಾರ್

ಮಗುವನ್ನು ಬಕೆಟ್ ನಲ್ಲಿ ಮುಳುಗಿಸಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ!

ಕುಟುಂಬ ರಾಜಕಾರಣ: ವಿಧಾನ ಪರಿಷತ್ ತುಂಬ ರಾಜಕಾರಣಿಗಳ ಕರುಳ ಕುಡಿಗಳು

ಉಪ್ಪಿನಂಗಡಿ ಪೊಲೀಸರ ಕಟ್ಟುಕಥೆಗಳು: ಲಾಠಿಚಾರ್ಜ್ ಪ್ರಮಾದ ಮುಚ್ಚಿ ಹಾಕುವ ಪಿತೂರಿ: ಪಾಪ್ಯುಲರ್ ಫ್ರಂಟ್ ಆರೋಪ

ಇತ್ತೀಚಿನ ಸುದ್ದಿ