ಭಾರತೀಯ ಸೇನೆಯ ಪ್ರತಿ ದಾಳಿಗೆ ಲಾಂಚ್ ಪ್ಯಾಂಡ್ ಬಿಟ್ಟು ಓಡಿಹೋದ ಪಾಕ್ ಸೇನೆ | ಪಾಕಿಸ್ತಾನದ 8 ಯೋಧರ ಹತ್ಯೆ - Mahanayaka

ಭಾರತೀಯ ಸೇನೆಯ ಪ್ರತಿ ದಾಳಿಗೆ ಲಾಂಚ್ ಪ್ಯಾಂಡ್ ಬಿಟ್ಟು ಓಡಿಹೋದ ಪಾಕ್ ಸೇನೆ | ಪಾಕಿಸ್ತಾನದ 8 ಯೋಧರ ಹತ್ಯೆ

14/11/2020

ಶ್ರೀನಗರ:  ನಿನ್ನೆ ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿ ಭಾರತೀಯ ಸೇನೆಯ ಮೇಲೆ  ಪಾಕ್ ಸೇನೆಯು ಅಪ್ರಚೋದಿತ ದಾಳಿ ನಡೆದಿದ್ದು, ಈ ದಾಳಿಗೆ ಭಾರತೀಯ ಸೇನೆ ಸಮರ್ಪಕವಾದ ಉತ್ತರ ನೀಡಿದ್ದು, ಪಾಕ್ ಸೇನೆ ಲಾಂಚ್ ಪ್ಯಾಂಡ್ ಬಿಟ್ಟು ಓಡಿಹೋಗುವಂತೆ ಮಾಡಿದೆ.

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಮೂವರು ಸೈನಿಕರು ಮತ್ತು ಅನೇಕ ನಾಗರಿಕರು ಸಾವನ್ನಪ್ಪಿದ್ದರು.

ಪಾಕಿಸ್ತಾನದ ಈ ನರಿ ಬುದ್ಧಿಗೆ ಪಾಠ ಕಲಿಸಿದ ಭಾರತೀಯ ಸೇನೆ ಪ್ರತಿ ದಾಳಿ ನಡೆಸಿದ್ದು, ಈ ಸಂದರ್ಭ ಕನಿಷ್ಠ 8-9 ಪಾಕಿಸ್ತಾನಿ ಸೈನಿಕರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತಪಟ್ಟವರ ಪೈಕಿ ಪಾಕಿಸ್ತಾನದ 2-3 ಎಸ್ ಪಿಜಿ ಕಮಾಂಡೋಗಳೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಉಗ್ರರ ಹಿಂಬದಿಯಲ್ಲಿ ನಿಂತು ಪಾಕಿಸ್ತಾನ ಸೇನಾ ಪಡೆಗಳು ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಗಡಿಯಲ್ಲಿ ಗುಂಡಿನ ದಾಳಿ ನಡೆಸಿತ್ತು. ವಾಸ್ತವ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿದ್ದಲ್ಲದೇ ಎರಡು ಪ್ರತ್ಯೇಕ ಕಡೆಗಳಲ್ಲಿ ಕದನ ವಿರಾಮ ಉಲ್ಲಂಘಿಸಲಾಗಿತ್ತು. ಪಾಕಿಸ್ತಾನದ ನರಿ ಬುದ್ಧಿಗೆ ಇದೀಗ ಸರಿಯಾದ ತಿರುಗೇಟನ್ನು ಭಾರತೀಯ ಸೇನೆ ನೀಡಿದೆ.

ಇತ್ತೀಚಿನ ಸುದ್ದಿ