ಕೊಲೆಗೆ ಕೊಲೆಯೇ ಉತ್ತರವಾಯ್ತು!: ಎಸ್ ಡಿಪಿಐ ಮುಖಂಡನ ಕೊಲೆ ನಡೆದು ಬೆಳಗಾಗುವಷ್ಟರಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ - Mahanayaka

ಕೊಲೆಗೆ ಕೊಲೆಯೇ ಉತ್ತರವಾಯ್ತು!: ಎಸ್ ಡಿಪಿಐ ಮುಖಂಡನ ಕೊಲೆ ನಡೆದು ಬೆಳಗಾಗುವಷ್ಟರಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

shan ranjith
19/12/2021

ಅಲಪ್ಪುಳ: ಕೇರಳದಲ್ಲಿ ಬಿಜೆಪಿ ಹಾಗೂ ಎಸ್ ಡಿಪಿಐ ನಡುವಿನ ಸಮರ ಕೊಲೆಗೆ ಕೊಲೆಯೇ ಉತ್ತರ ಎಂಬಂತೆ ಮುಂದುವರಿದಿದ್ದು, ಎಸ್ ಡಿಪಿಐ ಮುಖಂಡ ಕೆ.ಎಸ್.ಶಾನ್ ಹತ್ಯೆ ನಡೆದು ದಿನಬೆಳಗಾಗುವಷ್ಟರಲ್ಲಿ ಬಿಜೆಪಿಯ ಒಬಿಸಿ ಮೋರ್ಚಾ ರಾಜ್ಯಾ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ ಅವರನ್ನು ಬರ್ಬರವಾಗಿ ಹತ್ಯೆ ನಡೆಸಲಾಗಿದೆ.

ಅಲಪ್ಪುಳದಲ್ಲಿ ಕೆಲವೇ ಗಂಟೆಗಳಲ್ಲಿ ನಡೆದ ಎರಡು ಕೊಲೆಗಳು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ. ಈ ಎರಡೂ ಕೊಲೆಗಳು ರಾಜಕೀಯ ವೈಷಮ್ಯಕ್ಕೆ ನಡೆದ ಕೊಲೆಗಳು ಎನ್ನುವುದು ಇದೀಗ ಸ್ಪಷ್ಟವಾಗುತ್ತಿದೆ. ಎಸ್ ಡಿಪಿಐ ಹಾಗೂ ಬಿಜೆಪಿ ಮುಖಂಡ ಇಬ್ಬರನ್ನೂ ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾಗಿದೆ.

ಎಸ್ ಡಿಪಿಐ ಮುಖಂಡನ ಹತ್ಯೆ:

ಶನಿವಾರ ಸಂಜೆ ಸುಮಾರು 7:30ರ ವೇಳೆಗೆ ಎಸ್ ಡಿಪಿಐ ಮುಖಂಡ ಕೆ.ಎಸ್.ಶಾನ್ ಅವರು ತಮ್ಮ ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಇಲ್ಲಿನ ಮನ್ನಂಚೇರಿ ಕುಪೆಜಂ ಜಂಕ್ಷನ್ ನಲ್ಲಿ ಕಾರಿನಿಂದ ಬೈಕ್ ನ ಹಿಂಬಂದಿಗೆ ಡಿಕ್ಕಿ ಹೊಡೆಸಲಾಗಿದ್ದು, ಈ ವೇಳೆ ನೆಲಕ್ಕೆ ಬಿದ್ದ ಶಾನ್ ಅವರ ಕೈ, ಕಾಲು, ಹೊಟ್ಟೆ ಮತ್ತು ಕತ್ತು ಸೇರಿದಂತೆ ವಿವಿಧ ಭಾಗಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹಾಕಲಾಗಿದೆ. ಕೇರಳದ ಮಾಧ್ಯಮಗಳ ವರದಿಗಳ ಪ್ರಕಾರ, ಶಾನ್ ಅವರ ದೇಹದಲ್ಲಿ 40 ಗಾಯಗಳಿವೆ ಎಂದು ಹೇಳಲಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳೀಯರು ಕೆ.ಎಸ್.ಶಾನ್ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅವರು ಮೃತಪಟ್ಟಿದ್ದಾರೆ.

ಬಿಜೆಪಿ ಮುಖಂಡನ ಹತ್ಯೆ:

ಅಲಪ್ಪುಳದಲ್ಲಿ ಎಸ್ ಡಿಪಿಐ ಮುಖಂಡನ ಬರ್ಬರ ಹತ್ಯೆ ನಡೆದು ದಿನ ಬೆಳಗಾಗುವಷ್ಟರಲ್ಲಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ ನಡೆದಿದೆ. ಶನಿವಾರ ರಾತ್ರಿ 7:30ಕ್ಕೆ ಎಸ್ ಡಿಪಿಐ ಮುಖಂಡನ ಹತ್ಯೆ ನಡೆದಿದ್ದರೆ, ಭಾನುವಾರ ಬೆಳಗ್ಗೆ 6 ಗಂಟೆಯ ವೇಳೆಗೆ ಅಲಪ್ಪುಳ ನಗರದ ಇನ್ನೊಂದು ಪ್ರದೇಶದಲ್ಲಿ ಬಿಜೆಪಿಯ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ ಅವರನ್ನು ಬರ್ಬರವಾಗಿ ಹತ್ಯೆ ನಡೆಸಲಾಗಿದೆ.

ರಂಜಿತ್ ಶ್ರೀನಿವಾಸ್ ಅವರು ಬೆಳಗ್ಗೆ ವಾಕಿಂಗ್ ಗೆ ಹೊರಡುತ್ತಿದ್ದ ವೇಳೆ ಆಂಬುಲೆನ್ಸ್ ನಲ್ಲಿ ಬಂದ ತಂಡ, ಮನೆಯೊಳಗೆಯೇ ನುಗ್ಗಿ ಕುಟುಂಬಸ್ಥರ ಮುಂದೆಯೇ ಮಾರಕಾರಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ ಎಂದು ಸದ್ಯ ವರದಿಯಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಬಿಜೆಪಿ ಮುಖಂಡನ ಹತ್ಯೆಗೆ ಸಂಬಂಧಿಸಿದಂತೆ 11 ಮಂದಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.ಎಸ್ ಡಿಪಿಐ ಮುಖಂಡನ ಹತ್ಯೆಗೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಪೊಲೀಸರು ಈಗಾಗಲೇ ಗುರುತಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಲಪ್ಪುಳದಲ್ಲಿ ನಿಷೇಧಾಜ್ಞೆ:

ಅಲಪ್ಪುಳದಲ್ಲಿ ನಡೆದ ಎರಡೂ ಕೊಲೆಗಳನ್ನು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಖಂಡಿಸಿದ್ದು, ಆರೋಪಿಗಳು ಮತ್ತು ಅವರ ಸಹಚರರನ್ನು ಬಂಧಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸದ್ಯ ಮುನ್ನೆಚ್ಚರಿಕಾ ಕ್ರಮವಾಗಿ ಭಾನುವಾರ ಮತ್ತು ಸೋಮವಾರ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಆಟೋ ಮೇಲೆ ಮಗುಚಿ ಬಿದ್ದ ಬೃಹತ್ ಕಂಟೈನರ್: ನಾಲ್ವರ ದಾರುಣ ಸಾವು

ರಾತ್ರಿ ವೇಳೆ ಹೊತ್ತಿ ಉರಿದ ಎರಡು ಅಂಗಡಿಗಳು: ಮಂಗಳೂರಿನ ದುಬೈ ಮಾರ್ಕೆಟ್ ನಲ್ಲಿ ಘಟನೆ

ಯೋಗಿ ‘ಉಪಯೋಗಿ’ ಎಂದ ಮೋದಿ; ಯೋಗಿ ‘ನಿರುಪಯೋಗಿ’ ಎಂದ ಅಖಿಲೇಶ್ ಯಾದವ್!

ಸರ್ಕಾರಿ ಶಾಲೆಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ!

ಅಪಾರ್ಟ್ ಮೆಂಟ್ ನ 5ನೇ ಮಹಡಿಯಿಂದ ಬಿದ್ದು 2 ವರ್ಷದ ಮಗು ಸಾವು

ಕನ್ನಡ ಧ್ವಜಕ್ಕೆ ಬೆಂಕಿ: ಕನ್ನಡಿಗರ ಘನತೆ ಎತ್ತಿಹಿಡಿಯ ಬೇಕಾದವರೇ ಏನೂ ನಡೆದಿಲ್ಲ ಎಂಬಂತಿದ್ದಾರೆ | ಯುವ ನಾಯಕ ಸಚಿನ್ ಸರಗೂರು

ಇತ್ತೀಚಿನ ಸುದ್ದಿ