ಕನ್ನಡ ಬಾವುಟ ಸುಟ್ಟದ್ದು, ಕನ್ನಡ ತಾಯಿಯನ್ನೇ ಸುಟ್ಟಂತೆ | ನಟ ಶಿವರಾಜ್ ಕುಮಾರ್
ಬೆಂಗಳೂರು: ಕನ್ನಡಕ್ಕಾಗಿ ನನ್ನ ಪ್ರಾಣ ಕೊಡಲು ಕೂಡ ತಯಾರಿದ್ದೇನೆ. ಭಾರತದಲ್ಲಿ ಎಲ್ಲರಿಗೂ ಎಲ್ಲಾ ಭಾಷೆ ಮುಖ್ಯ. ಆದರೆ, ಆಯಾ ರಾಜ್ಯದ ಭಾಷೆ ಮತ್ತು ಸಂಸ್ಕೃತಿಗೆ ಎಲ್ಲರೂ ಮರ್ಯಾದೆ ಕೊಡಬೇಕಾಗಿರುವುದು ಎಲ್ಲರ ಧರ್ಮ ಎಂದು ನಟ ಶಿವರಾಜ್ ಕುಮಾರ್ ಹೇಳಿದರು.
ಡಾಲಿ ಧನಂಜಯ್ ನಟನೆಯ ಬಹು ನಿರೀಕ್ಷಿತ ಚಿತ್ರ ‘ಬಡವ ರಾಸ್ಕಲ್’ ಚಿತ್ರದ ರಿಲೀಸ್ ಇವೆಂಟ್ ನಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವರಾಜ್ ಕುಮಾರ್ ಅವರು, ಎಂಇಎಸ್ ಪುಂಡರ ಪುಂಡಾಟದ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿದರು.
ಬೇರೆಯವರ ಬಾವುಟ ಸುಡುವಂತಹ ಕೆಲಸ ಯಾರಿಂದಲೂ ಆಗಬಾರದು ಎಂದ ಅವರು, ನಾನು ಹುಟ್ಟಿದ್ದು ಚೆನ್ನೈನಲ್ಲಿ. ಅಲ್ಲಿ ಓದುವಾಗ ತಮಿಳು ಭಾಷೆ ಓದಿದ್ದೇನೆ. ತಮಿಳು ಭಾಷೆಯನ್ನು ಮೂರನೇ ಭಾಷೆ ಎಂದು ಕಲಿತಿದ್ದೇನೆ. ಅದು ಬೇಡ ಎಂದು ಬಿಟ್ಟಿಲ್ಲ. ತಮಿಳು ಸ್ನೇಹಿತರು ಸಿಕ್ಕಿದಾಗ ತಮಿಳು ಮಾತನಾಡುತ್ತೇನೆ ಎಂದರು.
ತಮಿಳು, ತೆಲುಗು, ಮಲಯಾಳಂ, ಹಿಂದಿ, ಪಂಜಾಬಿ, ಗುಜರಾತಿ, ಮರಾಠಿ ಭಾಷೆ ಸೇರಿದಂತೆ ಎಲ್ಲಾ ಭಾಷೆಗಳ ಸಿನಿಮಾ ನೋಡುತ್ತೇನೆ. ಆದರೆ, ಕರ್ನಾಟಕದಲ್ಲಿ ಇದ್ದಾಗ ಕನ್ನಡ ಭಾಷೆಯನ್ನು ಪ್ರೀತಿಸಬೇಕು. ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕು ಎಂದರು.
ಈ ಬಗ್ಗೆ ಹೋರಾಟ ಮಾಡಲೇ ಬೇಕು. ನಮ್ಮ ಭಾಷೆಗಾಗಿ ನಾವು ಹೋರಾಡಲೇ ಬೇಕು. ಈ ವಿಚಾರ ತಿಳಿದಾಗ ನಾನು ಟ್ವೀಟ್ ಮಾಡಿದೆ. ಆದರೆ, ಈಗ ಟ್ವೀಟ್ ಒಂದು ಫ್ಯಾಶನ್ ಆಗಿದೆ. ಅದರಿಂದ ಯಾವುದೇ ಪ್ರಯೋಜನವಿಲ್ಲ. ಕನ್ನಡಕ್ಕಾಗಿ ನನ್ನ ಪ್ರಾಣ ಕೊಡೋಕು ಸಿದ್ಧ. ಕನ್ನಡ ಬಾವುಟವನ್ನು ಸುಟ್ಟದ್ದು, ನಮ್ಮ ತಾಯಿಯನ್ನು ಸುಟ್ಟಂತೆ. ಇದರ ವಿರುದ್ಧ ಹೋರಾಡಲೇ ಬೇಕು. ಭಾಷೆಗಾಗಿ ಪ್ರಾಣ ಹೋಗುವುದಿದ್ದರೆ ಹೋಗಲಿ ಬಿಡಿ ಎಂದು ಶಿವರಾಜ್ ಕುಮಾರ್ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆನ್ ಲೈನ್ ಕ್ಲಾಸ್ ನ ಗ್ರೂಪ್ ಗೆ ಅಶ್ಲೀಲ ವಿಡಿಯೋ ಶೇರ್ ಮಾಡಿದ ಗಣಿತ ಶಿಕ್ಷಕ!
ಬೆಳಗಾವಿ ಸುವರ್ಣಸೌಧ ಮುತ್ತಿಗೆ ಯತ್ನ: ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಉದ್ಯಮಿ
ಮೈಸೂರು: ಮ್ಯಾನ್ ಹೋಲ್ ಸ್ವಚ್ಛತೆಗೆ ಇಳಿದ ಪೌರಕಾರ್ಮಿಕ ಸಾವು
ಮಂಗಳೂರು: ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಅತಿಥಿ ಉಪನ್ಯಾಸಕನ ಬಂಧನ
ಪನಾಮಾ ಪೇಪರ್ಸ್ ಸೋರಿಕೆ ಪ್ರಕರಣ: ಖ್ಯಾತ ಬಾಲಿವುಡ್ ನಟಿ ಐಶ್ವರ್ಯಾ ರೈ ಗೆ ಇಡಿ ಸಮನ್ಸ್