ಪಾಪ ಕಳೆಯುವುದಾಗಿ ಹೇಳಿ ಯುವತಿ ಮೇಲೆ ನಿರಂತರ ಅತ್ಯಾಚಾರ: ದೇವಮಾನವ ಮತ್ತು ಆತನ ಪತ್ನಿ ಅರೆಸ್ಟ್ - Mahanayaka
10:49 PM Wednesday 11 - December 2024

ಪಾಪ ಕಳೆಯುವುದಾಗಿ ಹೇಳಿ ಯುವತಿ ಮೇಲೆ ನಿರಂತರ ಅತ್ಯಾಚಾರ: ದೇವಮಾನವ ಮತ್ತು ಆತನ ಪತ್ನಿ ಅರೆಸ್ಟ್

sathya narayana
21/12/2021

ಚೆನ್ನೈ: ದೇವಮಾನವನೋರ್ವ ತನ್ನ ಪತ್ನಿಯ ಸಹಾಯದಿಂದ ಬಾಲಕಿಯನ್ನು ಅತ್ಯಾಚಾರ ನಡೆಸಿರುವುದೇ ಅಲ್ಲದೇ, ಆಕೆಯ ಚಿತ್ರವನ್ನು ತೋರಿಸಿ ನಿರಂತರವಾಗಿ ಲೈಂಗಿಕವಾಗಿ ಬಳಸಿಕೊಂಡು ಚಿತ್ರಹಿಂಸೆ ನೀಡಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ  ಚೆನ್ನೈ ಪೊಲೀಸರು ಆರೋಪಿ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ.

ದೇವಮಾನವ ಸತ್ಯನಾರಾಯಣ ಮತ್ತು ಆತನ ಪತ್ನಿ ಪುಷ್ಪಲತಾ ಬಂಧಿತ ಆರೋಪಿಗಳು. ಬಾಲಕಿ ಪಿಯುಸಿ ಓದುತ್ತಿದ್ದ ವೇಳೆ ಬಾಲಕಿಯ ಸಂಬಂಧಿಕರು ಆಕೆಯನ್ನು ಆಶ್ರಮಕ್ಕೆ ಕರೆತಂದಿದ್ದರು. ಆಗ ಪವಿತ್ರ ಬೂದಿ ನೀಡುವುದಾಗಿ ಬಾಲಕಿಯನ್ನು ಕೋಣೆಯೊಳಗೆ ಕರೆದೊಯ್ದ ಪುಷ್ಪಲತಾ ಮತ್ತು ಬರುವ ಔಷಧಿ ಬೆರೆಸಿದ ಪಾನೀಯವನ್ನು ಬಾಲಕಿಗೆ ನೀಡಿದ್ದಳು. ಬಾಲಕಿ ಪಾನೀಯ ಸೇವಿಸಿ ಪ್ರಜ್ಞೆ ಕಳೆದುಕೊಂಡ ವೇಳೆ ದೇವಮಾನವ ಸತ್ಯನಾರಾಯಣ ಅತ್ಯಾಚಾರ ನಡೆಸಿದ್ದ.

ಸುಮಾರು ಎರಡು ಗಂಟೆಗಳ ಬಳಿಕ ಬಾಲಕಿಗೆ ಪ್ರಜ್ಞೆ ಮರಳಿದ್ದು, ಈ ವೇಳೆ ತನ್ನ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದು ಬಂದಿದೆ. ಬಳಿಕ ಅತ್ಯಾಚಾರ ನಡೆಸಿದ ಫೋಟೋವನ್ನು ತೋರಿಸಿ ಬಾಲಕಿಗೆ ಬೆದರಿಕೆ ಹಾಕಿದ್ದು, ವಿಚಾರ ಯಾರಿಗೂ ಹೇಳದಂತೆ ಬೆದರಿಸಿದ್ದಾನೆ.

ಸಂತ್ರಸ್ತೆಯ ಪಾಪದ ಹೊರೆ ಇಳಿಸುತ್ತಿದ್ದೇನೆ ಎಂದು ಬಾಲಕಿಯ ಪೋಷಕರಿಗೆ ದೇವಮಾನವ ಹೇಳಿದ್ದು, ಸಂತ್ರಸ್ತೆಯ ಪೋಷಕರು ಮೌಢ್ಯದ ಆರಾಧಕರಾಗಿದ್ದು, ಹೀಗಾಗಿ ಆತನ ಮಾತುಗಳನ್ನು ನಂಬಿದ್ದರು.

2018ರಲ್ಲಿ ಸಂತ್ರಸ್ತೆಗೆ ವಿವಾಹವಾಗಿದ್ದು, ಪತಿಯೊಂದಿಗೆ ವಿದೇಶಕ್ಕೆ ಹೋಗಿ ವಾಸವಾಗಿದ್ದಾಳೆ. ಆದರೆ ಅದು ಹೇಗೋ ಸಂತ್ರಸ್ತೆಯನ್ನು ಪತ್ತೆ ಮಾಡಿದ ಸತ್ಯನಾರಾಯಣ್, ಆಕೆಗೆ ಕರೆ ಮಾಡಿ ಮತ್ತೆ ಆಶ್ರಮಕ್ಕೆ ಬರುವಂತೆ ಒತ್ತಡ ಹೇರಿದ್ದು, ಇಲ್ಲವಾದರೆ, ನಿನ್ನ ಪತಿಗೆ ಫೋಟೋ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಬೆದರಿ ಆಶ್ರಮಕ್ಕೆ ಬಂದ ಆಕೆಯ ಮೇಲೆ ಮತ್ತೆ ನಿರಂತರ ಅತ್ಯಾಚಾರ ನಡೆಸಿದ್ದಾನೆ.

2020ರಲ್ಲಿ ಸಂತ್ರಸ್ತೆ ಗರ್ಭಿಣಿಯಾಗಿದ್ದು, ಈ ವೇಳೆ ಸಂತ್ರಸ್ತೆಗೆ ಗರ್ಭಪಾತ ಮಾಡಿಸುವಂತೆ ಸತ್ಯನಾರಾಯಣ್ ಹಾಗೂ ಆತನ ಪತ್ನಿ ಒತ್ತಡ ಹೇರಿದ್ದಾರೆ. ಇದರಿಂದ ನೊಂದು ಸಂತ್ರಸ್ತೆ ಆತ್ಮಹತ್ಯೆಗೂ ಯತ್ನಿಸಿದ್ದಳು 2021ರ ಜನವರಿಯಲ್ಲಿ ಮಗುವಿಗೆ ಜನ್ಮ ನೀಡಿದ್ದ ಆಕೆ ಬಳಿಕ ವಿದೇಶಕ್ಕೆ ಹೋಗಿದ್ದಳು.

ಇಷ್ಟೆಲ್ಲ ಆದ ಬಳಿಕವೂ ಸತ್ಯನಾರಾಯಣ್ ಸಂತ್ರಸ್ತೆಯನ್ನು ಆಶ್ರಮಕ್ಕೆ ಬರುವಂತೆ ಕರೆದಿದ್ದಾನೆ.  ಇದರಿಂದ ನೊಂದ ಸಂತ್ರಸ್ತೆ ತನ್ನ ಪತಿಗೆ ಈ ವಿಚಾರವನ್ನು ತಿಳಿಸಿದ್ದಾಳೆ.  ಬಳಿಕ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಸತ್ಯನಾರಾಯಣ್ ಹಾಗೂ ಆತನ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾಳೆ. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಒಂದು ಇಂಚು ನೆಲವನ್ನೂ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಸಚಿವರ ಮಕ್ಕಳೇ ಕ್ರಿಶ್ಚಿಯನ್ ಸ್ಕೂಲ್ ನಲ್ಲಿ ಕಲಿತಿದ್ದಾರೆ, ಅಲ್ಲಿ ಮತಾಂತರಕ್ಕೆ ಬಲವಂತ ಮಾಡಿದ್ರಾ? | ಡಿ.ಕೆ.ಶಿವಕುಮಾರ್ ಪ್ರಶ್ನೆ

ಸರ್ಕಾರಿ ಕಚೇರಿಯಲ್ಲಿ ಮಹಿಳಾ ಅಧಿಕಾರಿಗೆ ಧಮ್ಕಿ: ಆರ್​ ಟಿಐ ಕಾರ್ಯಕರ್ತನ ಬಂಧನ

ಕಿರಣಿ ಅಂಗಡಿಗೆ ಬೆಂಕಿ ಹಚ್ಚಿದ ಇಬ್ಬರು ಆರೋಪಿಗಳ ಬಂಧನ

ಯೂಟ್ಯೂಬ್ ನೋಡಿಕೊಂಡು ಪತ್ನಿಗೆ ಡೆಲಿವರಿ ಮಾಡಲು ಯತ್ನಿಸಿದ ಪತಿ: ಮಗು ಸಾವು, ಮಹಿಳೆಯ ಸ್ಥಿತಿ ಚಿಂತಾಜನಕ

ಕನ್ನಡ ಬಾವುಟ ಸುಟ್ಟದ್ದು, ಕನ್ನಡ ತಾಯಿಯನ್ನೇ ಸುಟ್ಟಂತೆ | ನಟ ಶಿವರಾಜ್ ಕುಮಾರ್

ಇತ್ತೀಚಿನ ಸುದ್ದಿ