ಕಾನದ-ಕಟದರ ಬಾಲ್ಯ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 11 - Mahanayaka
2:09 AM Wednesday 11 - December 2024

ಕಾನದ-ಕಟದರ ಬಾಲ್ಯ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 11

kanada katada
22/12/2021

  • ಸತೀಶ್ ಕಕ್ಕೆಪದವು

“ಕುಲೊಟು ಕುಲದೈವ ಬರಿಟ್ ಬಂಗಾರ ದೈವ ನಿಲೆಟ್ ಕಾನದೆ ಕಟದೆರೆ ಅರ್ಸರಳಿ ಪೊರ್ತು”

“ಏಲ್ ಗಲಿಗೆದ ಬಲಕೆ ಏಲ್ ದಿನೊತಲೆಕ್ಕ, ಏಲ್ ದಿನೊತ ಬಲಕೆ ಏಲ್ ಒರ್ಸೊದಲೆಕ್ಕ ಬುಲೆವೊಂದು , ರಟ್ಟೆ ಬಲ ಬಲಿರ್ನ ಪೊರ್ತು”

ಹೀಗೆ ದೈವ ಪಾತ್ರಿಗಳ ನುಡಿಕಟ್ಟಿನ ಪ್ರಕಾರ ಕಾನದ ಕಟದರ ಹುಟ್ಟು ಬೆಳವಣಿಗೆಯ ವರ್ಣನೆಗಳನ್ನು ಕಾಣಬಹುದಾಗಿದೆ. ದಿನ ಹದಿನಾರು ತುಂಬುತ್ತಿದ್ದಂತೆ ಅಮೆ ಸೂತಕಗಳನ್ನು ಕಳೆದು ಅವಳಿ ಮಕ್ಕಳಿಗೆ ನಾಮಕರಣದ ಸಂಭ್ರಮದ ಏರ್ಪಾಡು ಮಾಡಲಾಗಿತ್ತು. ತುಳುನಾಡಿನ ವೀರ ಕಂದಮ್ಮಗಳಿಗೆ  ಹಿರಿಯರು ಬಂಧು ಬಳಗದವರು ಪಾಂಬಲಜ್ಜಿಗ ಪೂಂಬಲಕರಿಯರು ಊರ ಬೊಟ್ಯದರು ಮೊದಲಾದವರು ಸೇರಿಕೊಂಡು “ಕಾನದ ಕಟದ” ಎಂಬುದಾಗಿ ನಾಮಕರಣ ಮಾಡುತ್ತಾರೆ. ಮರುದಿನ “ಬಾಲೆ ತೊಟ್ಟಿಲು ಲೆತೊಪೋಪಿನ ಕಟ್ಟ್” ಕ್ರಮದಂತೆ ಕಿಜನೊಟ್ಟು ಬರ್ಕೆಯತ್ತ ಪೆದ್ಮೆದಿ ಬೊಲ್ಲೆ ಹಾಗು ಅವಳಿ ಮಕ್ಕಳನ್ನು ಕರೆದುಕೊಂಡು ಹೋಗಲು ಸಿದ್ಧರಾಗುತ್ತಾರೆ. ಹಾಗೆಯೆ ಮುಂದೆ ಕೆಲವು ದಿನಗಳಲ್ಲಿ ಪಾಂಬಲಜ್ಜಿಗ ಪೂಂಬಲಕರಿಯರ ಮನೆಯಲ್ಲಿದ್ದು ಮುಂದಕ್ಕೆ ದೇಯಿಬೈದೆದಿಯು ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿ ಮೂಲದ ಬಾಲೆ ಬೊಲ್ಲೆಯನ್ನೂ, ಆಕೆಯ ಅವಳಿ ಮಕ್ಕಳನ್ನು ಪೋಷಿಸಿ ಬೆಳೆಸುವುದಕ್ಕೆ ಮುಂದಾಗುತ್ತಾಳೆ.

“ಬೊಟ್ಟು ಕಂಡೊಡು ಪೆತ್ತ ಮೇತ್ ದ್ ಮೇಪದೆರಾಯಿ ಬಾಲೆಲೆ, ಕಿನ್ನಿ ಪಿರಯೊಡೆ ಬೆಂದ್ ತಿನ್ಪಿನ, ಸಾದಿ ಪನ್ಡರೆ ಲೋಕೋಗೆ” …….

ಕಾನದ ಕಟದರು ದೇಯಿಬೈದೆದಿ ಸೂಚಿಸಿದಂತಹ ದನ ಮೇಯಿಸುವ ಕಾಯಕದಲ್ಲಿ ಬಾಲ್ಯದಲ್ಲಿಯೇ ತೊಡಗಿಸಿಕೊಳ್ಳುತ್ತಾರೆ. ಇದು ಮಾನವ ಸಮಾಜಕ್ಕೆ ಮಾದರಿಯ ನಡೆಯಾಗಿದೆ. ಬಾಲ್ಯದಲ್ಲಿಯೇ ಸೋಮಾರಿಗಳಾಗದೆ ದುಡಿಮೆಗೆ ಪ್ರೋತ್ಸಾಹ ನೀಡಿರುವುದನ್ನು ಕಾಣಬಹುದಾಗಿದೆ.

“ಗೊಬ್ಬು ಕಲ್ಗೊಬ್ಬು ಕನ್ನ ಮುಚ್ಚಲೆ ಕೈಯಾಟನೆ ಟೊಂಕೊಲು, ಮರ ಮಂಗೆನೆ ಗಿಲಿ ಕಕ್ಕೆನೆ ಕುಟ್ಟಿ ದೊನ್ನೆನೆ ಗೊಬ್ಯರ”…….

ಹೀಗೆ ಕಲ್ಲಾಟ, ಕಣ್ಣ ಮುಚ್ಚಾಲೆ, ಕೈ ಹೊಡೆದು ಓಡುತ್ತಾ ಮುಟ್ಟಿದಾಗ ತಪ್ಪಿಸಿಕೊಳ್ಳುವಾಟ, ಒಂದೇ ಕಾಲಿನ ಓಟ, ಮರದಿಂದ ಮರಕ್ಕೆ ಜಿಗಿಯುವ ಮರಮಂಗಾಟ, ಕಾಗೆ ಗಿಳಿಯಾಟ, ಕುಟ್ಟಿ ದೊನ್ನೆ ಇತ್ಯಾದಿ ಆಟಗಳನ್ನು ಆಡುತ್ತಾ ಅನೇಕ ಮಕ್ಕಳ ಒಡಗೂಡಿ ದಿನ ಸಾಗಿಸುತ್ತಿದ್ದರು.

“ಮರನಿರೆಲ್ ಡ್ ಇರೆ ಮುತ್ತುದು, ಕಬೆ ವೂರುದು ದೊಂಪೊನು ಕಟ್ಟ್ ದಟಿಲ್ ಅಡ್ ದುನ್ಪಿ ಕುಸಿತಾಟ ಗೊಬ್ಯರ”………

ದನ ಕರುಗಳನ್ನು ಮೇಯಿಸಲು “ಬೊಟ್ಟುಕಂಡ” ಕ್ಕೆ ಬಂದ ಕಾನದ ಕಟದರು ಇತರ ಮಕ್ಕಳೊಡನೆ ಸೇರಿಕೊಂಡು ಮನೆಯಾಟ ಆಡುತ್ತಿದ್ದರು. ವಿಶಾಲವಾದ ಮರದ ನೆರಳಲ್ಲಿ ಚಪ್ಪರ ನಿರ್ಮಾಣ ಮಾಡಿಕೊಂಡು, ಸೊಪ್ಪುಗಳ ಹೊದಿಕೆಯಿಂದ ಮಾಡು ನಿರ್ಮಿಸಿ, ಮನೆ ಕಟ್ಟಿ ಅಡುಗೆಯನ್ನು ಮಾಡಿ ಬಾಲ್ಯದಲ್ಲಿಯೇ ಪಾಕ ಪ್ರವೀಣರೆನಿಸಿದ್ದರು.

“ಕುಂಟಲ್ ದ ಇರೆ ಮಡಿತ್ ಪಿಪೀಂದ್ ಉರಿತರ, ಡೆರೆಡಬ್ಬಿ ಬೊಟ್ಟೊಂದು, ಗಂಜಲಿಡೆ ಗೊಬ್ಯರ”……..

‌ಬಾಲ್ಯದ ಆಟಗಳನ್ನು ಎಲ್ಲಾ ಹೊತ್ತಿನಲ್ಲಿಯೂ ಸದುಪಯೋಗ ಪಡಿಸಿಕೊಂಡ ಕಾನದ ಕಟದರು ಕುಂಟಲ್ ಮರದ ಎಲೆಮಡಿಚಿ ಪಿಪೀಂ  ಎಂಬುದಾಗಿ ಊದಿಕೊಂಡು, ಡೈ‌‌ ಡೈ ಬಾರಿಸಿಕೊಂಡು ಹಬ್ಬದ  ಮೆರವಣಿಗೆಯ ವಾತಾವರಣ ವನ್ನೇ ಸೃಷ್ಟಿಸುತ್ತಾರೆ.

‌” ಸೊರ ದೆರ್ತ್ ನೆರಿನವೆಕ್ ಬೆರಿ ನಿಲಿಕೆ ಗುದ್ಯರ, ಕುರೆ ಮೇಲ್ ಕೀಲ್ ದ ನೊರೆನೊಚ್ಚಿದ್ ಗೊಬ್ಯರ”………..

ಹೀಗೆ ಬೊಟ್ಟು ಕಂಡದ ನೆರೆಹೊರೆಯ ಇತರ ಸಮುದಾಯದ ಮಕ್ಕಳೊಂದಿಗೆ ಕಾನದ ಕಟದರ ವಿವೇಚನೆ, ನಡೆದು ಕೊಳ್ಳುವ ನಡಾವಳಿಕೆಗಳು ವಿಭಿನ್ನ ಎನಿಸಿದರೂ ಕೂಡ ಯಾವ ಮಕ್ಕಳಿಗೂ ತಗ್ಗದೆ ಬಗ್ಗದೆ ಸ್ವಾಭಿಮಾನಿಗಳಾಗಿ ಎದುರುತ್ತರ ನೀಡುತ್ತಿದ್ದರು. ಮಾತಿಗೆ ಮಾತಿನ ಪೆಟ್ಟು, ನೀತಿಗೆ ನಡತೆಯ ಪೆಟ್ಟು, ಎದುರಾಲಿಗೆ ಗುದ್ದಿನ ಪೆಟ್ಟಿನ ಮೂಲಕ ಎಚ್ಚರಿಕೆಯ ಸೂಚನೆಯನ್ನು ನೀಡಿದರಲ್ಲದೆ ಜಾಗೃತಿಯ ಪಾಠವನ್ನು ಬೋಧಿಸುತ್ತಿದ್ದರು. ಜಾತೀಯತೆ, ಅಸಮಾನತೆ,

ಅಸ್ಪೃಶ್ಯತೆಯ ಕುರಿತಾಗಿ ಅವಮಾನ ಆದಾಗ “ಮಾನೊಗು ಕುಂದಾನಗ ಪ್ರಾನೊನಾಂಡಲ ಕೊರ್ದ್, ಮಾನೊನು ಒರಿತೊನುವ” ಎಂಬ ಮಾತನ್ನು ಉದ್ಗರಿಸಿ

‌ಸರ್ವ ಸಮಾಜಕ್ಕೆ ಬಾಲ್ಯದಲ್ಲಿಯೇ ಪ್ರೇರಣೆಯಾದರು, ಮಾದರಿಯಾದರು. ಹೀಗೆ ನೆಲ ಜಲ ಪರಿಸರ ಜೀವನ ಪ್ರೀತಿಯ ದ್ಯೋತಕವಾಗಿ ಜೋಡಿ ನಂದ ದೀಪಗಳಾಗಿ ಪ್ರಜ್ವಲನಗೊಂಡು ತುಳುನಾಡಿನಲ್ಲಿ  ಕಾನದ ಕಟದರು ಬೆಳೆದು ನಿಲ್ಲುತ್ತಾರೆ.

‌( ಮುಂದಿನ ಸಂಚಿಕೆಯಲ್ಲಿ: ಅಪ್ಪೆ ಸಾಲೊದ ಪನ್ನಿ / ಬಂಗಾಡಿಗೆ ಪ್ರಯಾಣ)

ಹಿಂದಿನ ಸಂಚಿಕೆಗಳು:

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01

ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:

ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03

ಬೊಲ್ಲೆಯ ನಾಮಕರಣ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 04

ಸ್ವಾಭಾವಿಕ ಸ್ವಭಾವ ಬೆಳೆಸಿಕೊಂಡ ಸತ್ಯದಪ್ಪೆ ಬೊಲ್ಲೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 05

ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06

ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07

ನವದಂಪತಿಗಳಿಂದ ಬಂಗಾಡಿ ಬೀಡಿಗೆ ವೀಳ್ಯದೆಲೆ ಸಮರ್ಪಣೆ: ತುಳುನಾಡಿನ ಅವಳಿ ವೀರರು ಕಾನದ—ಕಟದರು | ಸಂಚಿಕೆ: 08

ಸತ್ಯದಪ್ಪೆ ಬೊಲ್ಲೆಯ ಬಯಕೆ/ ಸೀಮಂತ ಕಾರ್ಯಕ್ರಮ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 09

ಕಾನದ-ಕಟದರ ಜನನ: ತುಳುನಾಡಿನ ಅವಳಿ ವೀರರು-ಕಾನದ ಕಟದರು | ಸಂಚಿಕೆ: 10

ಇತ್ತೀಚಿನ ಸುದ್ದಿ