ಬಿಜೆಪಿ ಆಡಳಿತದಲ್ಲಿ ಮಾತ್ರ ಹಿಂದೂಗಳ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ | ಯೋಗಿ ಆದಿತ್ಯನಾಥ್ - Mahanayaka
12:28 PM Friday 20 - September 2024

ಬಿಜೆಪಿ ಆಡಳಿತದಲ್ಲಿ ಮಾತ್ರ ಹಿಂದೂಗಳ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ | ಯೋಗಿ ಆದಿತ್ಯನಾಥ್

yogi adithyanath
22/12/2021

ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳಿಗೆ ಹಬ್ಬ ಆಚರಿಸಲು ಸಾಧ್ಯವಾಗುತ್ತಿದೆ. ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಅಂತಹ ಪರಿಸ್ಥಿತಿ ಇರಲಿಲ್ಲ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದರು.

ಸೋನೆಭದ್ರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ಬಿಜೆಪಿ  ಹಾಗೂ ಎಸ್ ಪಿ ಸರ್ಕಾರದ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಈ ಹಿಂದೆ ನಮ್ಮ ಹಬ್ಬಗಳನ್ನು ಆಚರಿಸಲು ಅವಕಾಶ ನೀಡಿಲ್ಲ. ಆದರೆ ಈಗ ನೀವು ಹಬ್ಬ ಆಚರಿಸಬಹುದಾಗಿದೆ ಎಂದು ಅವರು ಹೇಳಿದರು.

ಈ ಹಿಂದಿನ ಎಸ್ ಪಿ ಸರ್ಕಾರವು ಕನ್ವರ್ ಯಾತ್ರೆ ಅಥವಾ ದುರ್ಗಾಪೂಜೆ ಆಚರಣೆಗೆ ಅವಕಾಶ ನೀಡುತ್ತಿರಲಿಲ್ಲ. ಆದರೆ, ಭಕ್ತರು ಈಗ ಕನ್ವರ್ ಯಾತ್ರೆ ಕೈಗೊಳ್ಳುತ್ತಿದ್ದಾರೆ ಎಂದು ಅವರು ಎಸ್ ಪಿ ವಿರುದ್ಧ ವಾಗ್ದಾಳಿ ನಡೆಸಿದರು.


Provided by

ಬಿಜೆಪಿಯ ಆಡಳಿತದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿದೆ. ಕಾಶಿ ವಿಶ್ವನಾಥ ಮಂದಿರವೂ ಭವ್ಯವಾಗುತ್ತಿದೆ ಎಂದ ಅವರು ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯಾಗಿದೆ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾನದ-ಕಟದರ ಬಾಲ್ಯ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 11

ಮತಾಂತರ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಿಂದಿನಿಂದ ಕಾಯ್ದೆಗೆ ಬೆಂಬಲ‌ ನೀಡುತ್ತಿದೆ | ಬಿಜೆಪಿ ಶಾಸಕ ಯತ್ನಾಳ್

ಹೇಗೆಂದರೆ ಹಾಗೆ ಬದುಕಲು ನಮ್ಮ ದೇಶ ಧರ್ಮಛತ್ರವಲ್ಲ: ಮತಾಂತರ ಕುರಿತು ಆರಗ ಜ್ಞಾನೇಂದ್ರ ಹೇಳಿಕೆ

ತಂದೆಯ ಚಟ ಬಿಡಿಸಿದ ಮಗಳ ‘ಹಠ’: ಅದ್ದೂರಿ ಮೆರವಣಿಗೆ ಮಾಡಿ ಮಗಳಿಗೆ ಮೊಬೈಲ್ ಕೊಡಿಸಿದ ಬಡ ತಂದೆ

ಮತಾಂತರ ನಿಷೇಧ ಕಾಯ್ದೆಯ ದುರ್ಬಳಕೆಯ ಸಾಧ್ಯತೆ ಹೆಚ್ಚಿದೆ: ಕ್ರೈಸ್ತ ಧರ್ಮಾಧಿಕಾರಿ ಡಾ.ಕೆ.ಎ.ವಿಲಿಯಂ

ಇತ್ತೀಚಿನ ಸುದ್ದಿ