ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ "ಕರುನಾಡ ರತ್ನ" ಪ್ರಶಸ್ತಿ ಜಾಗೃತಿಯ ಬಾಲಾಜಿ ಎಂ. ಕಾಂಬಳೆ ಆಯ್ಕೆ - Mahanayaka
11:08 PM Wednesday 11 - December 2024

ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ “ಕರುನಾಡ ರತ್ನ” ಪ್ರಶಸ್ತಿ ಜಾಗೃತಿಯ ಬಾಲಾಜಿ ಎಂ. ಕಾಂಬಳೆ ಆಯ್ಕೆ

balaji m kamble
23/12/2021

ಮೈಸೂರು: ಶೋಷಿತ ಸಮುದಾಯಗಳ ಧ್ವನಿಗೆ ಧ್ವನಿಯಾಗಲು ಜಾಗೃತಿ ನ್ಯೂಸ್ ಎಂಬ ಡಿಜಿಟಲ್ ಮಾಧ್ಯಮವನ್ನು ಆರಂಭಿಸಿದ ಪತ್ರಕರ್ತ ಬಾಲಾಜಿ ಎಂ.ಕಾಂಬಳೆ ಅವರಿಗೆ ಈ ಬಾರಿಯ ಕರುನಾಡ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು,  ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಕೊಡಮಾಡುವ ಪ್ರಶಸ್ತಿಗೆ ಸ್ವಾತಂತ್ರ್ಯ ಪತ್ರಕರ್ತ ಬಾಲಾಜಿ ಎಂ ಕಾಂಬಳೆ ಭಾಜನರಾಗಿದ್ದಾರೆ.

ಡಿಸೆಂಬರ್ 25ರಂದು ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ನಡೆಯುವ ಕನ್ನಡ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಯಮುನಾ ಹೆಚ್.ಎಲ್ ತಿಳಿಸಿದ್ದಾರೆ.

ಪತ್ರಕರ್ತ ಹಿನ್ನೆಲೆ: ಬಾಲಾಜಿ ಎಂ ಕಾಂಬಳೆ ಮೂಲತಃ ಕಲಬುರಗಿಯವರು. ಕಳೆದ 7 ವರ್ಷಗಳಿಂದ ನಾಡಿನಲ್ಲಿ ದಲಿತ ಸಾಹಿತ್ಯದಲ್ಲಿ ತೊಡಗಿಸಿಕೊಂಡು, ಈಗಾಗಲೇ ದಲಿತ ಸಾಹಿತ್ಯ ಆಕಾಡೆಮಿ ನವದೆಹಲಿ ಅಲ್ಲದೇ ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಜೊತೆಗೆ ದಲಿತ ಪರವಾದ ಧ್ವನಿಗೆ ಮಾಧ್ಯಮ ಮೂಲಕ ಧ್ವನಿಯಾಗಲು ಜಾಗೃತಿ ನ್ಯೂಸ್ ಡಿಜಿಟಲ್ ಮಾಧ್ಯಮ ಹಾಗೂ ಜಾಗೃತಿ ಮಾಸ ಪತ್ರಿಕೆ ಆರಂಭಿಸುವ ಮೂಲಕ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

ಮೂಲತಃ ಹೋರಾಟದ ಹಿನ್ನೆಲೆಯಿಂದ ಬರುವ ಇವರು ದಲಿತ ವಿದ್ಯಾರ್ಥಿ ಪರಿಷತ್ ಸಂಘಟನೆಯ ರಾಜ್ಯ ಸಂಚಾಲಕರಾಗಿ ವಿದ್ಯಾರ್ಥಿ ಸಂಘಟನೆಯ ಮೂಲಕ ವಿಧ್ಯಾರ್ಥಿ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ.  ಬಾಲಾಜಿ ಎಂ. ಕಾಂಬಳೆ ಅವರ ಸೇವೆಯನ್ನು ಗುರುತಿಸಿ ಇದೀಗ ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ನೀಡುವ ಕರುನಾಡ ರತ್ನ ಪ್ರಶಸ್ತಿ ಇವರ ಮುಡಿಗೇರುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಲವಂತ ಮತಾಂತರಕ್ಕೆ ಶಿಕ್ಷೆ ಸಂವಿಧಾನದಲ್ಲೇ ಗುರುತಿಸಲಾಗಿದ್ದು ಮತ್ತೊಂದು ಕಾಯ್ದೆ ಯಾಕೆ ಬೇಕು?: ಸಿದ್ದರಾಮಯ್ಯ

ಅಂಬೇಡ್ಕರ್ ಯಾಕೆ ಬೌದ್ಧ ಧರ್ಮ ಸ್ವೀಕರಿಸಿದರು? | ಸದನದಲ್ಲಿ ನಡೆಯಿತು ಭಾರೀ ಚರ್ಚೆ!

ರಾಜ್ಯದಲ್ಲಿ ಶೀಘ್ರದಲ್ಲೇ ಉದ್ಯೋಗ ನೀತಿ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ

ಕೊಳ್ಳೆಗಾಲದಲ್ಲಿ ನಿಗೂಢ ವಸ್ತು ಸ್ಪೋಟ: ಮನೆ ಸಂಪೂರ್ಣ ಛಿದ್ರ

ಲೂಧಿಯಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸಂಕೀರ್ಣದಲ್ಲಿ ಸ್ಫೋಟ: ಇಬ್ಬರು ಸಾವು, ಐದು ಮಂದಿ ಗಾಯ

ಬಿಜೆಪಿ ಮುಖಂಡರಿಂದ ಅಯೋಧ್ಯೆ ಸುತ್ತಲಿನ ಭೂಮಿ ಲೂಟಿ: ಪ್ರಿಯಾಂಕಾ ಗಾಂಧಿ ಆರೋಪ

ಇತ್ತೀಚಿನ ಸುದ್ದಿ