ಮಗುವಿನ ಹುಟ್ಟುಹಬ್ಬ ಮುಗಿಯುವ ಮೊದಲೇ ಮಸಣ ಸೇರಿದ ತಾಯಿ! - Mahanayaka
10:59 PM Wednesday 11 - December 2024

ಮಗುವಿನ ಹುಟ್ಟುಹಬ್ಬ ಮುಗಿಯುವ ಮೊದಲೇ ಮಸಣ ಸೇರಿದ ತಾಯಿ!

birthday
23/12/2021

ಲಖೀಂಪುರ್ ಖೇರಿ:  ಮಗನ ಹುಟ್ಟು ಹಬ್ಬದ ಸಂಭ್ರಮ ಮುಗಿಯುವ ಮೊದಲೇ ತಾಯಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಲಿಖೀಂಪುರ್ ಖೇರಿಯಲ್ಲಿ ನಡೆದಿದ್ದು, ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ದುಃಖ ಮಡುಗಟ್ಟಿದೆ.

ಅನಿತಾ ವರ್ಮಾ ಹಾಗೂ ಪ್ರದೀಪ್ ವರ್ಮಾ ದಂಪತಿಯ ಮಗುವಿನ ಹುಟ್ಟು ಹಬ್ಬದ ಕಾರ್ಯಕ್ರಮ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಸ್ನೇಹಿತರು, ಸಂಬಂಧಿಕರು ಎಂದು ಸುಮಾರು 100ಕ್ಕೂ ಅಧಿಕ ಜನರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಪ್ರದೀಪ್ ವರ್ಮಾ ಅವರ ಸಹೋದರ ಸಂಬಂಧಿ, ಫರ್ಧಾನ್ ಪೊಲೀಸ್ ಠಾಣೆಯ ರಾಯ್ ದೇವಕಾಲಿ ನಿವಾಸಿ ಜೈಶ್ರೀರಾಮ್ ಎಂಬಾತ ಕೂಡ ಭಾಗಿಯಾಗಿದ್ದು, ಈತ ವಿಪರೀತವಾಗಿ ಕುಡಿದು ಚಿತ್ತಾಗಿದ್ದು, ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡು  ರೂಮ್ ವೊಂದರಲ್ಲಿ ಮಲಗಿದ್ದ.

ಇತ್ತ ಮಗುವಿನ ತಾಯಿ ಅನಿತಾ ವರ್ಮಾ ಜೈರಾಮ್ ನನ್ನು ಊಟಕ್ಕೆ ಕರೆಯಲು ಬಂದಿದ್ದು, ಈ ವೇಳೆ ತೀವ್ರ ಮತ್ತಿನಲ್ಲಿದ್ದ ಜೈರಾಮ್ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಲು ಮುಂದಾಗಿದ್ದಾನೆ. ಆದರೆ, ಗುಂಡು ಅನಿತಾ ವರ್ಮಾ ಅವರ ಎದೆಯನ್ನು ಹೊಕ್ಕಿದೆ. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇದೀಗ ಘಟನೆಗೆ ಸಂಬಂಧಿಸಿದಂತೆ ಆರೋಪಿ ಜೈರಾಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಶ್ರೀಮಂತರು ತಮ್ಮ ಸಂಭ್ರಮವನ್ನು  ಪಿಸ್ತೂಲ್, ಬಂದೂಕಿನಿಂದ ಗುಂಡು ಹಾರಿಸಿ ಪ್ರದರ್ಶಿಸುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಅನೇಕರು ಪ್ರಾಣ ಕಳೆದುಕೊಂಡಿರುವ ಘಟನೆಗಳು ಹಲವಾರು ನಡೆದಿದ್ದರೂ, ಇದಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ “ಕರುನಾಡ ರತ್ನ” ಪ್ರಶಸ್ತಿ ಜಾಗೃತಿಯ ಬಾಲಾಜಿ ಎಂ. ಕಾಂಬಳೆ ಆಯ್ಕೆ

ಬಲವಂತ ಮತಾಂತರಕ್ಕೆ ಶಿಕ್ಷೆ ಸಂವಿಧಾನದಲ್ಲೇ ಗುರುತಿಸಲಾಗಿದ್ದು ಮತ್ತೊಂದು ಕಾಯ್ದೆ ಯಾಕೆ ಬೇಕು?: ಸಿದ್ದರಾಮಯ್ಯ

ಅಂಬೇಡ್ಕರ್ ಯಾಕೆ ಬೌದ್ಧ ಧರ್ಮ ಸ್ವೀಕರಿಸಿದರು? | ಸದನದಲ್ಲಿ ನಡೆಯಿತು ಭಾರೀ ಚರ್ಚೆ!

ರಾಜ್ಯದಲ್ಲಿ ಶೀಘ್ರದಲ್ಲೇ ಉದ್ಯೋಗ ನೀತಿ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ

ಕೊಳ್ಳೆಗಾಲದಲ್ಲಿ ನಿಗೂಢ ವಸ್ತು ಸ್ಪೋಟ: ಮನೆ ಸಂಪೂರ್ಣ ಛಿದ್ರ

ಇತ್ತೀಚಿನ ಸುದ್ದಿ