ಮತಾಂತರ ನಿಷೇಧ: ತಿದ್ದ ಬೇಕಿರುವುದು ಜಾತಿ ಅಸಮಾನತೆಯನ್ನು, ಸಂವಿಧಾನವನ್ನಲ್ಲ! - Mahanayaka
11:17 PM Wednesday 11 - December 2024

ಮತಾಂತರ ನಿಷೇಧ: ತಿದ್ದ ಬೇಕಿರುವುದು ಜಾತಿ ಅಸಮಾನತೆಯನ್ನು, ಸಂವಿಧಾನವನ್ನಲ್ಲ!

caste system
24/12/2021

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ನಿನ್ನೆ ಮತಾಂತರ ನಿಷೇಧ ಮಸೂದೆಯನ್ನು ಅಂಗೀಕರಿಸಲಾಗಿದೆ. ಬಲವಂತದ ಮತಾಂತರ ತಡೆಯಲು ಈಗಾಗಲೇ ಸಂವಿಧಾನದಲ್ಲಿ ಬೇರೆ ಕಾನೂನುಗಳಿದ್ದರೂ ಆರೆಸ್ಸೆಸ್ ನಾಯಕರ ಮನಸ್ಸನ್ನು ಖುಷಿಪಡಿಸಲು ಬಿಜೆಪಿ ಮತಾಂತರ ನಿಷೇಧ ಎಂಬ ವಿವಾದಿತ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿದೆ.

ರಾಜ್ಯದಲ್ಲಿ ಜನರು ಮತಾಂತರಗೊಳ್ಳಲು, ಆಸೆ, ಆಮಿಷಗಳು ಕಾರಣ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ, ಹಿಂದೂ ಧರ್ಮದೊಳಗಿನ ಜಾತಿ ವ್ಯವಸ್ಥೆಯಿಂದ ನೊಂದವರು ಬೌದ್ಧ, ಕ್ರೈಸ್ತ, ಇಸ್ಲಾಂ ಧರ್ಮ ಸೇರಿದಂತೆ ಇತರ ಧರ್ಮಗಳಿಗೆ ಮತಾಂತರವಾಗುತ್ತಿದ್ದಾರೆ ಎನ್ನುವುದು ವಾಸ್ತವವಾಗಿದೆ. ಆದರೆ, ಮತಾಂತರ ನಿಷೇಧ ಮಸೂದೆ ಮಂಡನೆಯ ವೇಳೆ, ಜಾತಿ ವ್ಯವಸ್ಥೆಯ ಅವಮಾನಗಳ ಬಗ್ಗೆ ಬಿಜೆಪಿ ಮೌನ ವಹಿಸಿದ್ದು, ಜಾತಿ ಅಸಮಾನತೆಗೆ ಪರೋಕ್ಷ ಬೆಂಬಲ ಎನ್ನುವಂತೆ ವರ್ತಿಸಿದೆ.

ಹಿಂದೂ ಧರ್ಮದಲ್ಲಿರುವ ಜಾತಿ ಆಧಾರಿತ ಅಸಮಾನತೆ, ಅಸ್ಪೃಶ್ಯತಾ ಆಚರಣೆ ಮತಾಂತರಕ್ಕೆ ನೇರ ಕಾರಣವಾಗಿದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆದರೂ, ಅಸ್ಪೃಶ್ಯತೆಯಂತಹ ಆಚರಣೆಗಳನ್ನು ತಡೆಯಲು ಬಿಜೆಪಿ ದೇಶದ ಯಾವ ರಾಜ್ಯದಲ್ಲಿಯೂ ಕಠಿಣ ಕಾನೂನುಗಳನ್ನು ಜಾರಿ ಮಾಡಲು ಮುಂದಾಗಿಲ್ಲ. ಇದರ ಬದಲು, ಮತಾಂತರ ನಿಷೇಧ ಮಾಡುವ ಮೂಲಕ ಅಸ್ಪೃಶ್ಯರು ದಾಸ್ಯದಿಂದ ಮುಕ್ತವಾಗಲು ಇರುವ ಅವಕಾಶವನ್ನೂ ಕಿತ್ತುಕೊಳ್ಳಲಾಗಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ.

ಮತಾಂತರ ನಿಷೇಧ ಕಾಯ್ದೆ ಎನ್ನುವುದು ಬಿಜೆಪಿಯು ಆರೆಸ್ಸೆಸ್ ನಾಯಕರನ್ನು ಖುಷಿಪಡಿಸಲು ತಂದಿರುವ ಕಾಯ್ದೆಯಾಗಿದೆ ಎನ್ನುವ ಅಭಿಪ್ರಾಯಗಳು ಇದೀಗ ಕೇಳಿ ಬಂದಿದೆ. ಜಾತಿ ಅಸಮಾನತೆಯ ಕೊಳೆಯನ್ನು ತೊಳೆಯದೇ, ಸಂವಿಧಾನಕ್ಕೆ ತಿದ್ದುಪಡಿ ಮಾಡುವ ಮೂಲಕ ಜಾತಿ ಅಸಮಾನತೆಯನ್ನು ಮತ್ತಷ್ಟು ಬೆಳೆಸುವ ಆರೆಸ್ಸೆಸ್ ನ ತಂತ್ರಕ್ಕೆ ಬಿಜೆಪಿ ಕೈಜೋಡಿಸಿದೆ. ಮಾತ್ರವಲ್ಲದೇ ಕ್ರೈಸ್ತರು ಮತ್ತು ಮುಸ್ಲಿಮರ ಮೇಲಿರುವ ಆರೆಸ್ಸೆಸ್ ನ ದ್ವೇಷ, ಅಸೂಯೆಯನ್ನು ತಣಿಸಲು ಬಿಜೆಪಿ ಒಂದು ಅವಕಾಶ ಮಾಡಿಕೊಟ್ಟಿದೆ.  ಇದರ ಫಲವಾಗಿಯೇ ಮತಾಂತರ ನಿಷೇಧ ಮಸೂದೆ ಅಂಗೀಕಾರವಾಗಿದೆ ಎನ್ನುವ ಮಾತುಗಳು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಗುವಿನ ಹುಟ್ಟುಹಬ್ಬ ಮುಗಿಯುವ ಮೊದಲೇ ಮಸಣ ಸೇರಿದ ತಾಯಿ!

ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ “ಕರುನಾಡ ರತ್ನ” ಪ್ರಶಸ್ತಿ ಜಾಗೃತಿಯ ಬಾಲಾಜಿ ಎಂ. ಕಾಂಬಳೆ ಆಯ್ಕೆ

ಬಲವಂತ ಮತಾಂತರಕ್ಕೆ ಶಿಕ್ಷೆ ಸಂವಿಧಾನದಲ್ಲೇ ಗುರುತಿಸಲಾಗಿದ್ದು ಮತ್ತೊಂದು ಕಾಯ್ದೆ ಯಾಕೆ ಬೇಕು?: ಸಿದ್ದರಾಮಯ್ಯ

ಅಂಬೇಡ್ಕರ್ ಯಾಕೆ ಬೌದ್ಧ ಧರ್ಮ ಸ್ವೀಕರಿಸಿದರು? | ಸದನದಲ್ಲಿ ನಡೆಯಿತು ಭಾರೀ ಚರ್ಚೆ!

ರಾಜ್ಯದಲ್ಲಿ ಶೀಘ್ರದಲ್ಲೇ ಉದ್ಯೋಗ ನೀತಿ ಜಾರಿ: ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರಲ್ಲಿ ಹವಾಲಾ ದಂಧೆ ಬೆಳಕಿಗೆ: ನಾಲ್ಕು ಮಂದಿ ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ