ಸ್ನೇಹಿತನಿಂದಲೇ ಯುವಕನ ಕೊಲೆ: ಆರೋಪಿಯ ಬಂಧನ
ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನಿಂದಲೇ ಯುವಕನನ್ನು ಕೊಲೆ ಮಾಡಿರುವ ಘಟನೆ ನಗರದ ಎಂವಿ ಗಾರ್ಡ್ನ್ನಲ್ಲಿ ನಡೆದಿದೆ.
ಮನೀಶ್( 18) ಮೃತ ಯುವಕ. ಮೃತ ಮನೀಶ್ ಹಾಗೂ ಆತನ ಸ್ನೇಹಿತ ನಿನ್ನೆ ತಡರಾತ್ರಿ ಜೊತೆಯಾಗಿ ಮದ್ಯಪಾನ ಮಾಡಿದ್ದಾರೆ. ಕುಡಿತ ಮತ್ತಿನಲ್ಲಿದ್ದ ಇಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಆರಂಭವಾಗಿದ್ದು, ಈ ವೇಳೆ ಸ್ನೇಹಿತ ಚಾಕುವಿನಿಂದ ಮನೀಶ್ ಕುತ್ತಿಗೆಗೆ ಇರಿದಿದ್ದಾನೆ ಎನ್ನಲಾಗಿದೆ.
ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನೀಶ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಮನೀಶ್ ಸಾವನ್ನಪ್ಪಿದ್ದಾನೆ.
ಈ ಘಟನೆ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಕ್ರಿಸ್ಮಸ್ ಸಂದೇಶ: ಪ್ರೀತಿಯಿಂದ ಜೀವಿಸಿದಾಗ ನಮ್ಮ ಹೃದಯ ಗೋದಲಿಯಲ್ಲಿ ಯೇಸು ಜನಿಸುತ್ತಾರೆ | ಫಾ.ಮಾಥ್ಯೂ ವೆಲ್ಲಚಾಲಿಲ್
ಕ್ರಿಸ್ಮಸ್ ಸಂದೇಶ: ಎಲ್ಲರ ಹೃದಯದಲ್ಲಿ ಶಾಂತಿ ಬೆಳಗಲಿ | ಸಿಸ್ಟರ್ ದೀಪ್ತಿ
ಚಾರ್ಮಾಡಿ ಘಾಟ್: ಬಸ್ಸಿನಲ್ಲಿಯೇ ಕಂಡೆಕ್ಟರ್ ಗೆ ಹೃದಯಾಘಾತ
ಉತ್ತರ ಪ್ರದೇಶಕ್ಕೆ ರಾಷ್ಟ್ರಪತಿ ಆಳ್ವಿಕೆ ಬಂದರೂ ಅಚ್ಚರಿಯಿಲ್ಲ: ಸುಬ್ರಮಣಿಯನ್ ಸ್ವಾಮಿ
ದಾವಣಗೆರೆಯಲ್ಲಿ ಭೀಕರ ರಸ್ತೆ ಅಪಘಾತ: ಮೂವರ ಸಾವು