ತೆಲಂಗಾಣ: ಗುಂಡಿನ ಚಕಮಕಿ; ಆರು ಮಂದಿ ನಕ್ಸಲರ ಹತ್ಯೆ - Mahanayaka

ತೆಲಂಗಾಣ: ಗುಂಡಿನ ಚಕಮಕಿ; ಆರು ಮಂದಿ ನಕ್ಸಲರ ಹತ್ಯೆ

naxals
27/12/2021

ತೆಲಂಗಾಣ: ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಕಮಾಂಡರ್ ಸೇರಿದಂತೆ ಆರು ಮಂದಿ ನಕ್ಸಲರು ಹತ್ಯೆಯಾಗಿರುವ ಘಟನೆ ಇಂದು ಮುಂಜಾನೆ ತೆಲಂಗಾಣದ ಗಡಿ ಭಾಗದಲ್ಲಿ ನಡೆದಿದೆ.

ತೆಲಂಗಾಣ ಮತ್ತು ಛತ್ತೀಸ್‍ಗಡ ಉಭಯ ರಾಜ್ಯಗಳ ನಕ್ಸಲರ ವಿರುದ್ಧದ ಕಾರ್ಯಾಚರಣೆ ನಡೆದಿದ್ದು, ಛತ್ತೀಸ್‍ಗಡದ ಪೊಲೀಸರು ಹಾಗೂ ತೆಲಂಗಾಣ ಗ್ರೇ ಹೂಂಡ್ಸ್ ಪೊಲೀಸರು ಬೆಳಗ್ಗೆ ಚರ್ಲಾ ವಲಯದಿಂದ 25 ಕಿ.ಮೀ. ದೂರದಲ್ಲಿರುವ ಕೂರ್ನವಲ್ಲಿ , ಪೇಸರ್ಲಪಡು ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ್ದರು.

ಈ ಕಾರ್ಯಾಚರಣೆಯಲ್ಲಿ ಆರು ಮಂದಿ ಮಾವೋವಾದಿಗಳು ಹತರಾಗಿದ್ದಾರೆ ಎಂದು ತೆಲಂಗಾಣ ಪೊಲೀಸರು ಖಚಿತ ಪಡಿಸಿದ್ದಾರೆ. ಈ ಪೈಕಿ ನಾಲ್ವರು ಮಹಿಳೆಯರು ಹಾಗೂ ಚರ್ಲಾ ಪ್ರದೇಶದ ನಕ್ಸಲ್ ಕಮಾಂಡರ್ ಮಧು ಎಂದು ಗುರುತಿಸಲಾಗಿದ್ದು, ಆರು ಮೃತ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮತಾಂತರದ ಬಗ್ಗೆ ಶೌರ್ಯದ ಮಾತಿನ ಬಳಿಕ ಹೇಳಿಕೆ ವಾಪಸ್ ಪಡೆದ ತೇಜಸ್ವಿ ಸೂರ್ಯ

ಬಾಲಕಿಯ ಮೇಲೆ 6 ಮಂದಿ ಅಪ್ರಾಪ್ತರಿಂದ ಸಾಮೂಹಿಕ ಅತ್ಯಾಚಾರ

ಚಂಡೀಗಢ: ನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಭರ್ಜರಿ ಜಯ

ಕೋಮು ಪ್ರಚೋದನಕಾರಿ ಭಾಷಣ ಆರೋಪ: ಹಾರಿಕಾ ಮಂಜುನಾಥ ವಿರುದ್ಧ ಎಫ್​ಐಆರ್​ ದಾಖಲು

BSP ದ.ಕ.ಜಿಲ್ಲಾ ಮಟ್ಟದ ಪದಾಧಿಕಾರಿಗಳ ತರಬೇತಿ ಸಭೆ

ನೈಟ್ ಕರ್ಫ್ಯೂ ಆದೇಶ ಮರುಪರಿಶೀಲನೆ ಇಲ್ಲ: ಸಿಎಂ ಬೊಮ್ಮಾಯಿ

ಇತ್ತೀಚಿನ ಸುದ್ದಿ