ಮಂಡಿ ನೋವಿಗೆ ನಾಟಿ ಚಿಕಿತ್ಸೆಯ ಮೊರೆ ಹೋದ ಸಿಎಂ ಬೊಮ್ಮಾಯಿ - Mahanayaka

ಮಂಡಿ ನೋವಿಗೆ ನಾಟಿ ಚಿಕಿತ್ಸೆಯ ಮೊರೆ ಹೋದ ಸಿಎಂ ಬೊಮ್ಮಾಯಿ

27/12/2021

ಬೆಳಗಾವಿ: ಮಂಡಿ ನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ನಾಟಿ ಚಿಕಿತ್ಸೆ ಪಡೆದುಕೊಂಡಿದ್ದು, ಮೈಸೂರು ಮೂಲದ ನಾಟಿ ವೈದ್ಯ ಲೋಕೇಶ್ ಟೇಕಲ್‌ ರಿಂದ ಚಿಕಿತ್ಸೆ ಪಡೆದು ಕೊಂಡರು.

ಖ್ಯಾತ ನಾಟಿ ವೈದ್ಯರಾಗಿರುವ ಲೋಕೇಶ್ ಅವರು ಈ ಹಿಂದೆ ಚರ್ಮ ರೋಗದಿಂದ ಬಳಲುತ್ತಿದ್ದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೂ ಚಿಕಿತ್ಸೆ ನೀಡಿದ್ದರು. ಅಧಿವೇಶನದ ವೇಳೆ ಲಕ್ಷ್ಮಣ ಸವದಿ, ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ನಾಟಿ ವೈದ್ಯ ಲೋಕೇಶ್ ಟೇಕಲ್‌ ಪರಿಚಯ ಮಾಡಿಕೊಟ್ಟಿದ್ದರು ಎಂದು ಹೇಳಲಾಗಿದೆ.

ಮಂಡಿ ನೋವಿನಿಂದ ಬಳಲುತ್ತಿರುವ ಬಸವರಾಜ್ ಬೊಮ್ಮಾಯಿ ಅವರು ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇದೀಗ ವನಸ್ಪತಿ ಔಷಧಿ ಚಿಕಿತ್ಸೆಗೆ ಒಳಗಾಗಿರುವ ಸಿಎಂಗೆ ನಾಟಿ ವೈದ್ಯ ಲೋಕೇಶ್ ಚಿಕಿತ್ಸೆ ಮುಂದುವರೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಡ್ರಗ್ಸ್ ನೀಡಿ ನನ್ನ ಮಗಳಿಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ:  ಮಂಗಳೂರು ಕಮಿಷನರ್ ಗೆ ದೂರು ನೀಡಿದ ತಾಯಿ

90 ಎಲೆಕ್ಟ್ರಿಕ್ ಬಸ್ ​ಗಳಿಗೆ ಸಿಎಂ ಬೊಮ್ಮಾಯಿ ಚಾಲನೆ: ಈ ಬಸ್ಸಿನ ವಿಶೇಷತೆ ಏನು?

ರಾಜ್ಯದಲ್ಲಿ ಆಯಾ ಶಾಲೆಗಳಲ್ಲಿಯೇ ಮಕ್ಕಳಿಗೆ ಕೋವಿಡ್‌ ಲಸಿಕೆ: ಸಿಎಂ ಬಸವರಾಜ ಬೊಮ್ಮಾಯಿ

ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಲಕ್ಷ್ಮಣ ಸವದಿ, ಉಡುಪಿಯ ನಯನಾ ಗಣೇಶ್ ನೇಮಕ

ಭಾರೀ ಪ್ರವಾಹ:18 ಸಾವು, 280ಕ್ಕೂ ಹೆಚ್ಚು ಮಂದಿಗೆ ಗಾಯ; 35 ಸಾವಿರ ಜನರ ಸ್ಥಳಾಂತರ

ಕೋಮು ಪ್ರಚೋದನಕಾರಿ ಭಾಷಣ ಆರೋಪ: ಹಾರಿಕಾ ಮಂಜುನಾಥ ವಿರುದ್ಧ ಎಫ್​ಐಆರ್​ ದಾಖಲು

ಇತ್ತೀಚಿನ ಸುದ್ದಿ