ಅಂತ್ಯ ಸಂಸ್ಕಾರಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಕಣ್ತೆರೆದು ಮಾತನಾಡಿದ ವೃದ್ಧ!
ನವದೆಹಲಿ: ಸ್ವಲ್ಪ ತಡವಾಗುತ್ತಿದ್ದರೆ, ಆ ವೃದ್ಧ ಜೀವಂತವಾಗಿ ದಹನವಾಗುತ್ತಿದ್ದ. ಮೃತಪಟ್ಟ ವೃದ್ಧರೊಬ್ಬರು ಸ್ಮಶಾನದಲ್ಲಿ ಕಣ್ತೆರೆದಿದ್ದು, ಸಂಬಂಧಿಕರು ಕೆಲಕಾಲ ಶಾಕ್ ಗೊಳಗಾದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
62 ವರ್ಷ ವಯಸ್ಸಿನ ಸತೀಶ್ ಭಾರದ್ವಾಜ್ ಎಂಬವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರನ್ನು ದೊಡ್ಡ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಭಾನುವಾರ ಬೆಳಗ್ಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಸತೀಶ್ ಭಾರದ್ವಾಜ್ ಮೃತಪಟ್ಟಿದ್ದಾರೆ ಎಂದು ಸಂಬಂಧಿಕರು ಇಲ್ಲಿನ ಟಿಕ್ರಿ ಖುರ್ದ್ ಪ್ರದೇಶದಲ್ಲಿರುವ ಸ್ಮಶಾನಕ್ಕೆ ತೆರಳಿದ್ದು, ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕೊನೆಯ ಕಾರ್ಯಕ್ರಮವಾಗಿ ಮೃತದೇಹದ ಬಾಯಿಗೆ ಗಂಗಾಜಲ ಬಿಡುತ್ತಿದ್ದಂತೆಯೇ ಮೃತ ವ್ಯಕ್ತಿ ಕಣ್ತೆರೆದು ಮಾತನಾಡಲಾರಂಭಿಸಿದ್ದಾರೆ.
ಏಕಾಏಕಿ ನಡೆದ ಘಟನೆಯಿಂದ ಬೆಚ್ಚಿ ಬಿದ್ದ ಕುಟುಂಬಸ್ಥರು ತಕ್ಷಣವೇ ದೆಹಲಿ ಪೊಲೀಸರಿಗೆ ವಿಷಯ ಮುಟ್ಟಿಸಿ, ವೃದ್ಧನನ್ನು ನರೇಲಾದ ರಾಜಾ ಹರಿಶ್ಚಂದ್ರ ಆಸ್ಪತ್ರೆಗೆ ದಾಖಲಿಸಿದ್ದು, ತಪಾಸಣೆಯ ವೇಳೆ ಸತೀಶ್ ಭಾರದ್ವಾಜ್ ಅವರ ಬಿ.ಪಿ., ಹೃದಯದ ಬಡಿತ, ನಾಡಿ ಮಿಡಿತ ಎಲ್ಲವೂ ನಾರ್ಮಲ್ ಆಗಿದ್ದು, ಅವರು ಆರೋಗ್ಯವಂತರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗ್ರಾಮದ ಮುಖ್ಯಸ್ಥೆಯ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆ
ನೈಟ್ ಕರ್ಫ್ಯೂಗೆ ಪದೇ ಪದೇ ವಿರೋಧ ಮಾಡೋದು ಸರಿಯಲ್ಲ: ಸಚಿವ ಕೆ.ಸುಧಾಕರ್
ಹೆದ್ದಾರಿಯಲ್ಲಿ ಕಾರು ಅಡ್ಡಗಟ್ಟಿ ಮಹಿಳೆಯ ಬರ್ಬರ ಹತ್ಯೆ
ಸೆಲ್ಫಿ ತೆಗೆದುಕೊಳ್ಳಲು ಬಂದ ಬೆಂಬಲಿಗನ ಮೇಲೆ ತಿರುಗಿ ಬಿದ್ದ ಡಿ.ಕೆ.ಶಿವಕುಮಾರ್