ಜನರಿಗೊಂದು ನ್ಯಾಯ, ನಾಯಕರಿಗೊಂದು ನ್ಯಾಯ: ಬಿಜೆಪಿ ಕಾರ್ಯಕರಣಿ ಸಭೆಯಲ್ಲಿ ಮಾಸ್ಕ್ ಧರಿಸದೇ ನಿರ್ಲಕ್ಷ್ಯ - Mahanayaka
5:15 PM Friday 20 - September 2024

ಜನರಿಗೊಂದು ನ್ಯಾಯ, ನಾಯಕರಿಗೊಂದು ನ್ಯಾಯ: ಬಿಜೆಪಿ ಕಾರ್ಯಕರಣಿ ಸಭೆಯಲ್ಲಿ ಮಾಸ್ಕ್ ಧರಿಸದೇ ನಿರ್ಲಕ್ಷ್ಯ

bjp
28/12/2021

ಹುಬ್ಬಳ್ಳಿ: ರಾಜ್ಯದಲ್ಲಿ ಇಂದಿನಿಂದ ರಾತ್ರಿ 10 ಗಂಟೆಯ ಬಳಿಕ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿಗೊಳಿಸಲಿದೆ. ಆದರೆ, ಕೊವಿಡ್ ನಿಯಮಗಳನ್ನು ಹೇಳುತ್ತಿರುವ ಆಡಳಿತ ಪಕ್ಷ ನಾಯಕರೇ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿರುವ ಘಟನೆಯ ವಿರುದ್ಧ ಆಕ್ರೋಶ ಕೇಳಿ ಬಂದಿದೆ.

ಹೌದು…! ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರಣಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಯಾವುದೇ ಬಿಜೆಪಿ ನಾಯಕರು ಮಾಸ್ಕ್ ಧರಿಸದೇ, ದೈಹಿಕ ಅಂತರ ಕಾಪಾಡದೇ ನಿರ್ಲಕ್ಷ್ಯವಹಿಸಿರುವ ಆರೋಪ ಕೇಳಿ ಬಂದಿದ್ದು, ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರು ಕೂಡ ಮಾಸ್ಕ್ ಧರಿದೇ ನಿರ್ಲಕ್ಷ್ಯವಹಿಸಿದ್ದಾರೆ.

ಸಭೆಯಲ್ಲಿ ಸುಮಾರು 300 ಜನರು ಭಾಗಿಯಾಗಿದ್ದು, ಕೊವಿಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ.  ರಾಜ್ಯದಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿಗೆ ಆದೇಶಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಮಾಸ್ಕ್ ಧರಿಸಿಲ್ಲ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.


Provided by

ಈಗಾಗಲೇ ಸಾರ್ವಜನಿಕರು ನೈಟ್ ಕರ್ಫ್ಯೂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೊಂದು ಅವೈಜ್ಞಾನಿಕ ಕ್ರಮವಾಗಿದೆ. ಬೆಳಗ್ಗಿನ ವೇಳೆ ಊರಿಡೀ ಸುತ್ತಬಹುದು ರಾತ್ರಿ 10ರ ಬಳಿಕ ಕರ್ಫ್ಯೂ ವಿಧಿಸಲಾಗಿದೆ. ರಾತ್ರಿ 10ರ ಬಳಿಕ ಮಾತ್ರವೇ ಕೊವಿಡ್ ಸೋಂಕು ಹರಡುವುದೇ ಎಂದು ಪ್ರಶ್ನಿಸುತ್ತಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ಆಡಳಿತ ಪಕ್ಷದಲ್ಲಿದ್ದು, ತಾವೇ ಕೊವಿಡ್ ನಿಯಮಗಳನ್ನು ನಿರ್ಲಕ್ಷಿಸಿ ರಾಜ್ಯದ ಜನರಿಗೆ ಕೊವಿಡ್ ಪಾಠ ಮಾಡುತ್ತಿರುವುದು ಎಷ್ಟು ಸರಿ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಂತ್ಯ ಸಂಸ್ಕಾರಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ಕಣ್ತೆರೆದು ಮಾತನಾಡಿದ ವೃದ್ಧ!

ಗ್ರಾಮದ ಮುಖ್ಯಸ್ಥೆಯ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆ

ನೈಟ್ ಕರ್ಫ್ಯೂಗೆ ಪದೇ ಪದೇ ವಿರೋಧ ಮಾಡೋದು ಸರಿಯಲ್ಲ: ಸಚಿವ ಕೆ.ಸುಧಾಕರ್

ಡ್ರಗ್ಸ್ ನೀಡಿ ನನ್ನ ಮಗಳಿಗೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ:  ಮಂಗಳೂರು ಕಮಿಷನರ್ ಗೆ ದೂರು ನೀಡಿದ ತಾಯಿ

ರಾಜ್ಯದಲ್ಲಿ ಆಯಾ ಶಾಲೆಗಳಲ್ಲಿಯೇ ಮಕ್ಕಳಿಗೆ ಕೋವಿಡ್‌ ಲಸಿಕೆ: ಸಿಎಂ ಬಸವರಾಜ ಬೊಮ್ಮಾಯಿ

ಇತ್ತೀಚಿನ ಸುದ್ದಿ