ಬಿಜೆಪಿಗೆ ವೋಟು ಹಾಕಿದರೆ 50 ರೂಪಾಯಿಗೆ ಮದ್ಯ ಕೊಡುತ್ತೇವೆ | ಬಿಜೆಪಿ ನಾಯಕ ಹೇಳಿಕೆ - Mahanayaka
5:43 AM Wednesday 11 - December 2024

ಬಿಜೆಪಿಗೆ ವೋಟು ಹಾಕಿದರೆ 50 ರೂಪಾಯಿಗೆ ಮದ್ಯ ಕೊಡುತ್ತೇವೆ | ಬಿಜೆಪಿ ನಾಯಕ ಹೇಳಿಕೆ

bjp
29/12/2021

ವಿಜಯವಾಡ:  ಬಿಜೆಪಿಗೆ ಮತ ಹಾಕಿದ್ರೆ, ಕೇವಲ 50 ರೂಪಾಯಿಗೆ ಎಣ್ಣೆ(ಮದ್ಯ) ಸಿಗೋ ಹಾಗೆ ಮಾಡ್ತೀವಿ ಎಂದು ಬಿಜೆಪಿ ಮುಖಂಡರೊಬ್ಬರು ಘೋಷಿಸಿದ್ದು, ಇದೀಗ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಬಿಜೆಪಿಗೆ ಒಂದು ಕೋಟಿ ಮತ ಹಾಕಿದರೆ ಕೇವಲ 70 ರೂಪಾಯಿಗೆ ಮದ್ಯ ಕೊಡಲಾಗುತ್ತದೆ. ಅದರಲ್ಲಿಯೂ ಲಾಭ ಬಂದರೆ, 50 ರೂಪಾಯಿಗೆ ಮದ್ಯ ಕೊಡುತ್ತೇವೆ ಎಂದು ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಹೇಳಿಕೆ ನೀಡಿದ್ದಾರೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದು, ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಸ್ಕೃತಿಗಳ ಬಗ್ಗೆ ಜನರಿಗೆ ಪಾಠ ಮಾಡುವ ಬಿಜೆಪಿ ನಾಯಕರು ಮತಕ್ಕಾಗಿ ಇಷ್ಟು ಕೆಳಮಟ್ಟಕ್ಕೆ ಇಳಿದು ಹೇಳಿಕೆ ನೀಡುತ್ತಾರಾ? ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಾರ್ವಜನಿಕರೆದುರೇ ಮಹಿಳೆಯನ್ನು ಕೊಚ್ಚಿ ಕೊಂದ ಮೂರನೇ ಪತಿ ಸಹಿತ ಇಬ್ಬರು ಅರೆಸ್ಟ್!

ಮನುಷ್ಯರನ್ನೇ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿರುವ ಈ ದೇವಿ ಯಾರು?

ಶಾಸಕನಿಗೆ ಪೊಲೀಸರ ‘ಪ್ಯಾಂಟ್ ಒದ್ದೆ’ ಮಾಡಿಸುವ ಶಕ್ತಿ ಇದೆ ಎಂದ ಕಾಂಗ್ರೆಸ್ ನಾಯಕ!

ಜನರಿಗೊಂದು ನ್ಯಾಯ, ನಾಯಕರಿಗೊಂದು ನ್ಯಾಯ: ಬಿಜೆಪಿ ಕಾರ್ಯಕರಣಿ ಸಭೆಯಲ್ಲಿ ಮಾಸ್ಕ್ ಧರಿಸದೇ ನಿರ್ಲಕ್ಷ್ಯ

ಇತ್ತೀಚಿನ ಸುದ್ದಿ