ಹೊತ್ತಿ ಉರಿದ ಮನೆ: ಒಂದೇ ಕುಟುಂಬದ ಐವರು ಮಕ್ಕಳ ದಾರುಣ ಸಾವು - Mahanayaka
1:11 AM Wednesday 11 - December 2024

ಹೊತ್ತಿ ಉರಿದ ಮನೆ: ಒಂದೇ ಕುಟುಂಬದ ಐವರು ಮಕ್ಕಳ ದಾರುಣ ಸಾವು

fire
29/12/2021

ಬಿಹಾರ:  ಮನೆಗೆ ಬೆಂಕಿ ಬಿದ್ದ ಪರಿಣಾಮ ಒಂದೇ ಮನೆಯ ಐವರು ಮಕ್ಕಳು ಸಜೀವ ದಹನವಾಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯ ರಾಜಾವರ್​ ಗ್ರಾಮದಲ್ಲಿ ನಡೆದಿದೆ.

ಈ ಗ್ರಾಮ ರಾಜೌನ್ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈ ಘಟನೆ ನಡೆದಿದೆ ಎಂದು  ಸ್ಥಳೀಯರು ಹೇಳಿದ್ದು, ಆದರೆ ಇದನ್ನು ಇನ್ನೂ ಪೊಲೀಸರು ಖಚಿತ ಪಡಿಸಿಲ್ಲ.

ಪುಟಾಣಿಗಳಾದ ಅಂಕುಶ್​ ಕುಮಾರ್​ (10), ಶಿವಾನಿ ಕುಮಾರಿ​ (9), ಸೋನಿ ಕುಮಾರಿ (8), ಸೀಮಾ ಕುಮಾರಿ (5) ಮತ್ತು ಅಂಶುಕುಮಾರಿ(10) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮನೆಗೆ ಬೆಂಕಿ ಬಿದ್ದಾಗ ಮಕ್ಕಳನ್ನು ರಕ್ಷಿಸಲು ಅಶೋಕ್​ ಪಸ್ವಾನ್​ ಎಂಬವರು ಯತ್ನಿಸಿದ್ದು, ಈ ವೇಳೆ ಅವರಿಗೆ ಕೂಡ ತೀವ್ರವಾಗಿ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಯು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ರೆಗ್ಯುಲೇಟರ್ ಮಾತ್ರವೇ ಸಿಕ್ಕಿದೆ ಎಂದು ಬಂಕಾ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್​ ಕುಮಾರ್ ಗುಪ್ತಾ ಎಂದು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಟಾಕಿಯ ಕಿಡಿ ಸೋಕಿ ಬೆಂಕಿ ಹತ್ತಿಕೊಂಡು ಹೊತ್ತಿ ಉರಿದ ದೇವರ ರಥ!

ಬಿಜೆಪಿಗೆ ವೋಟು ಹಾಕಿದರೆ 50 ರೂಪಾಯಿಗೆ ಮದ್ಯ ಕೊಡುತ್ತೇವೆ | ಬಿಜೆಪಿ ನಾಯಕ ಹೇಳಿಕೆ

ಸಾರ್ವಜನಿಕರೆದುರೇ ಮಹಿಳೆಯನ್ನು ಕೊಚ್ಚಿ ಕೊಂದ ಮೂರನೇ ಪತಿ ಸಹಿತ ಇಬ್ಬರು ಅರೆಸ್ಟ್!

ಮನುಷ್ಯರನ್ನೇ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ!

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿರುವ ಈ ದೇವಿ ಯಾರು?

ಶಾಸಕನಿಗೆ ಪೊಲೀಸರ ‘ಪ್ಯಾಂಟ್ ಒದ್ದೆ’ ಮಾಡಿಸುವ ಶಕ್ತಿ ಇದೆ ಎಂದ ಕಾಂಗ್ರೆಸ್ ನಾಯಕ!

ಇತ್ತೀಚಿನ ಸುದ್ದಿ