'ಲಸಿಕೆ ಹಾಕಿಸಲ್ಲ' ಎಂದು ಮರ ಏರಿ ಕುಳಿತ ಯುವಕ: ವಿಡಿಯೋ ವೈರಲ್ - Mahanayaka

‘ಲಸಿಕೆ ಹಾಕಿಸಲ್ಲ’ ಎಂದು ಮರ ಏರಿ ಕುಳಿತ ಯುವಕ: ವಿಡಿಯೋ ವೈರಲ್

pandichery
30/12/2021

ಪಾಂಡೀಚೆರಿ: ಕೊವಿಡ್ ವ್ಯಾಕ್ಸಿನ್ ಬಗ್ಗೆ ಜನರಲ್ಲಿ ಈಗಲೂ ಭಯಾತಂಕಗಳು ದೂರವಾಗಿಲ್ಲ. ಆರೋಗ್ಯ  ಸಿಬ್ಬಂದಿ ಕೊವಿಡ್ ಲಸಿಕೆ ಹಾಕಲು ನಿರಂತರವಾಗಿ ಶ್ರಮಿಸುತ್ತಿದ್ದರೆ, ಅವರಿಗೆ ಒಂದಲ್ಲ ಒಂದು ಸವಾಲುಗಳು ಎದುರಾಗುತ್ತಲೇ ಇರುತ್ತದೆ.

ಪಾಂಡೀಚೆರಿಯ ವಿಲ್ಲನೂರ್​ ಎನ್ನುವ ಗ್ರಾಮದಲ್ಲಿ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದ್ದು, ನೆಟ್ಟಿಗರಿಗೆ ಹಾಸ್ಯದ ವಸ್ತುವಾಗಿದೆ. ಆರೋಗ್ಯ ಸಿಬ್ಬಂದಿ ಲಸಿಕೆ ಹಾಕಲು ಬಂದ ವೇಳೆ ವ್ಯಕ್ತಿಯೋರ್ವ ಮರ ಏರಿ ಕುಳಿತ ಘಟನೆ  ನಡೆದಿದೆ.

ಪಾಂಡೀಚೇರಿ ಸರ್ಕಾರ 100 ರಷ್ಟು ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲು ನಿರ್ಧರಿಸಿದೆ. ಆದ್ದರಿಂದ ಮನೆ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತೆಯರು ಮೊದಲ ಡೋಸ್​ ಮತ್ತು ಎರಡನೇ ಡೋಸ್​ ಅನ್ನೂ ನೀಡುತ್ತಿದ್ದಾರೆ.

ಹಳ್ಳಿಗಳಲ್ಲಿ ಕೊವಿಡ್ ಲಸಿಕೆ ನೀಡಲು ಹೋಗುತ್ತಿರುವ ಆರೋಗ್ಯ  ಸಿಬ್ಬಂದಿಗೆ ನಾನಾ ರೀತಿಯ ಸವಾಲುಗಳ ಎದುರಾಗುತ್ತಿದೆ. ಲಸಿಕೆ ಬಗೆಗಿನ ಆತಂಕಗಳು ಶೇ.100 ರಷ್ಟು ಲಸಿಕೆ ಹಾಕುವ ಸರ್ಕಾರದ ಪ್ರಯತ್ನಕ್ಕೆ ಅಡ್ಡಿಯಾಗುತ್ತಿದೆ. ಆದರೂ ಆರೋಗ್ಯ ಸಿಬ್ಬಂದಿ ಜನರಲ್ಲಿ ಜಾಗೃತಿ ಮೂಡಿಸುತ್ತಲೇ, ಲಸಿಕೆ ಹಾಕಿಸುತ್ತಲೇ ಇದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೊರೊನಾ ಸ್ಫೋಟ: ಎಸ್ಟೇಟ್ ಗಳಲ್ಲಿ ಕೆಲಸ ಮಾಡುತ್ತಿರುವ 23 ಮಂದಿಗೆ ಕೊವಿಡ್ ದೃಢ

ಪಕ್ಷ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧ ಎಂದ ಈಶ್ವರಪ್ಪ!

ಮಂಗಳೂರು: ಧಾರ್ಮಿಕ ಕೇಂದ್ರಗಳ ಕಾಣಿಕೆ ಡಬ್ಬಿಗಳಿಗೆ ಕಾಂಡೋಮ್ ಹಾಕುತ್ತಿದ್ದ ವ್ಯಕ್ತಿ ಅರೆಸ್ಟ್

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಲೈನ್ ಮ್ಯಾನ್!

ಹೊತ್ತಿ ಉರಿದ ಮನೆ: ಒಂದೇ ಕುಟುಂಬದ ಐವರು ಮಕ್ಕಳ ದಾರುಣ ಸಾವು

ಇತ್ತೀಚಿನ ಸುದ್ದಿ