ಮತಾಂತರ ಆರೋಪ: ಶಾಲೆಯ ಮಾನ್ಯತೆ ರದ್ದುಪಡಿಸಲು ಬಿಜೆಪಿ, ಆರೆಸ್ಸೆಸ್ ಪ್ರತಿಭಟನೆ - Mahanayaka
10:04 AM Friday 20 - September 2024

ಮತಾಂತರ ಆರೋಪ: ಶಾಲೆಯ ಮಾನ್ಯತೆ ರದ್ದುಪಡಿಸಲು ಬಿಜೆಪಿ, ಆರೆಸ್ಸೆಸ್ ಪ್ರತಿಭಟನೆ

bjp rss
30/12/2021

ಇಳಕಲ್:  ಬಾಗಲಕೋಟೆ ಜಿಲ್ಲೆಯ ಇಳಕಲ್ ನ ಪಟ್ಟಣದ ಸೈಂಟ್ ಪಾಲ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಆರೆಸ್ಸೆಸ್ ಪ್ರಮುಖರು ಬುಧವಾರ ಪ್ರತಿಭಟನೆ ನಡೆಸಿದರು.

ಡಿಸೆಂಬರ್ 25ರಂದು ಸೈಂಟ್ ಪಾಲ್ ಕಾನ್ವೆಂಟ್ ಶಾಲೆಯಲ್ಲಿ ಕ್ರಿಸ್ ಆಚರಣೆ ನಡೆಸಿ, ಮಾಂಸದ ಊಟ ಬಡಿಸಿ, ಪ್ರಸಾದವೆಂದು ವೈನ್ ನೀಡಿ, ಸತ್ಯವೇದ ಎಂಬ ಪುಸ್ತಕ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದು, ಈ ಸಂಬಂಧ ಈವರೆಗೆ ಕ್ರಮಕೈಗೊಂಡಿಲ್ಲ  ಎಂದು ತಮ್ಮದೇ ಸರ್ಕಾರದ ವಿರುದ್ಧ ಬಿಜೆಪಿ ಮುಖಂಡರು ಆರೋಪಿಸಿದರು.

ಶಾಲೆಯ ಮುಖ್ಯಶಿಕ್ಷಕಿ ಸೆಲ್ವಿಯಾ ಡಿ.ಮಾರ್ಕ್ ಮತ್ತು ಆಡಳಿತ ಮಂಡಳಿ ಸದಸ್ಯ ಜಾನ್ಸನ್ ಡಿ.ಮಾರ್ಕ್ ಹಾಗೂ ಹರಪನಹಳ್ಳಿಯ ಉಮೇಶ ನಾಯಕ ಎಂಬ ಪಾದ್ರಿಯ ಜೊತೆಗೂಡಿ, ಆಮಿಷ ನೀಡಿ ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎಂದು ದೂರಿದ  ಪ್ರತಿಭಟನಾಕಾರರು ಶಾಲೆಯ ಮಾನ್ಯತೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.


Provided by

ಮತಾಂತರದ ಆರೋಪ ಕೇಳಿ ಬಂದಿರುವ ಶಾಲೆಯನ್ನು ಬಿಜೆಪಿ ಹಾಗೂ ಆರೆಸ್ಸೆಸ್ ಒತ್ತಡಕ್ಕೆ ಮಣಿದು ಬಿಇಒ ಅವರು ಡಿ.27ರಿಂದ ಮುಚ್ಚುವಂಯೆ ಸೂಚನೆ ನೀಡಿದ್ದಾರೆ. ಈ ಶಾಲೆಯಲ್ಲಿ 400 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮತಾಂತರ ತಡೆಯಲು ವಿಶೇಷ ಕಾರ್ಯಪಡೆ:  ಸಿಎಂ ಬೊಮ್ಮಾಯಿ

‘ಲಸಿಕೆ ಹಾಕಿಸಲ್ಲ’ ಎಂದು ಮರ ಏರಿ ಕುಳಿತ ಯುವಕ: ವಿಡಿಯೋ ವೈರಲ್

ಕೊರೊನಾ ಸ್ಫೋಟ: ಎಸ್ಟೇಟ್ ಗಳಲ್ಲಿ ಕೆಲಸ ಮಾಡುತ್ತಿರುವ 23 ಮಂದಿಗೆ ಕೊವಿಡ್ ದೃಢ

ಪಕ್ಷ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ಬದ್ಧ ಎಂದ ಈಶ್ವರಪ್ಪ!

ಮಂಗಳೂರು: ಧಾರ್ಮಿಕ ಕೇಂದ್ರಗಳ ಕಾಣಿಕೆ ಡಬ್ಬಿಗಳಿಗೆ ಕಾಂಡೋಮ್ ಹಾಕುತ್ತಿದ್ದ ವ್ಯಕ್ತಿ ಅರೆಸ್ಟ್

“ಡಿಸೆಂಬರ್ 31ರಂದು ಕರ್ನಾಟಕ ಬಂದ್ ಫಿಕ್ಸ್, ಬದಲಾವಣೆಯ ಮಾತೇ ಇಲ್ಲ”

ಇತ್ತೀಚಿನ ಸುದ್ದಿ