ಮತಾಂತರದ ಆರೋಪ: ಸೆಂಟ್ ಪೌಲ್ ಶಾಲೆ ಮುಚ್ಚಲು ನೀಡಿದ್ದ ಆದೇಶಕ್ಕೆ ತಡೆ
ಬಾಗಲಕೋಟೆ: ಕ್ರಿಸ್ ಮಸ್ ಆಚರಣೆ ವೇಳೆ ಶಾಲೆಯಲ್ಲಿ ಮಕ್ಕಳಿಗೆ ಮಾಂಸಾಹಾರದ ಊಟ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇಳಕಲ್ ತಾಲೂಕಿನ ಸೆಂಟ್ ಪೌಲ್ ಶಾಲೆಯನ್ನು ಮುಚ್ಚಲು ಕ್ಷೇತ್ರ ಶಿಕ್ಷಣಾಧಿಕಾರಿ ತೆಗೆದುಕೊಂಡಿದ್ದ ಏಕಪಕ್ಷೀಯ ನಿರ್ಧಾರಕ್ಕೆ ಶಿಕ್ಷಣ ಇಲಾಖೆ ತಡೆ ನೀಡಿದೆ.
ಕ್ರಿಸ್ಮಸ್ ಆಚರಣೆಯಂದು ನಿಮ್ಮ ಶಾಲೆಯಲ್ಲಿ ಮಕ್ಕಳಿಗೆ ಮಾಂಸಾಹಾರ ನೀಡಿರುವುದು ನಮ್ಮ ಗಮನಕ್ಕೆ ತರಲಾಗಿದೆ. ಈ ನಿಮ್ಮ ವರ್ತನೆ ನಮ್ಮ ಇಲಾಖೆ ಹಾಗೂ ಸಾರ್ವನಿಕರನ್ನು ಮುಜುಗರಕ್ಕೆ ದೂಡಿದೆ. ಮತ್ತೊಂದು ಆದೇಶ ಬರುವವರೆಗೂ ಶಾಲೆಯನ್ನು ತೆರೆಯುವಂತಿಲ್ಲ ಎಂದು ಪತ್ರದಲ್ಲಿ ಶಿಕ್ಷಣಾಧಿಕಾರಿ ಉಲ್ಲೇಖಿಸಿದ್ದರು ಎನ್ನಲಾಗಿದೆ.
ಈ ವಿಚಾರವನ್ನು ಶಿಕ್ಷಣ ಇಲಾಖೆಯ ಗಮನಕ್ಕೆ ತಂದಾಗ ಈ ಆದೇಶವನ್ನು ರದ್ದುಗೊಳಿಸಲಾಗಿದ್ದು, ಜಿಲ್ಲಾಧಿಕಾರಿ ಅಥವಾ ಶಿಕ್ಷಣ ಇಲಾಖೆಗೆ ಮಾಹಿತಿ ನೀಡದೆ ಸ್ಥಳೀಯ ಅಧಿಕಾರಿ ಶಾಲೆ ಮುಚ್ಚುವಂತೆ ಆದೇಶ ನೀಡಿರುವುದು ಬಯಲಾಗಿದ್ದು, ಮಾಂಸಾಹಾರಿ ಆಹಾರವನ್ನು ನೀಡಿದ್ದಾರೆಂದ ಮಾತ್ರಕ್ಕೆ ನಾವು ಶಾಲೆಯನ್ನು ಮುಚ್ಚಲು ಸಾಧ್ಯವಿಲ್ಲ. ಇದೀಗ ಆ ಆದೇಶವನ್ನು ಹಿಂಪಡೆಯಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಶುಕ್ರವಾರ ತಿಳಿಸಿದೆ.
ಇಳಕಲ್ ತಾಲೂಕಿನ ಸೆಂಟ್ ಪೌಲ್ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕ್ರಿಸ್ಮಸ್ ಆಚರಿಸಲಾಗಿತ್ತು. ಕ್ರಿಸ್ಮಸ್ ಮಾತ್ರವಲ್ಲದೇ ದೀಪಾವಳಿ ಹಬ್ಬವನ್ನು ಶಾಲೆಗಳಲ್ಲಿ ಆಚರಿಸಲಾಗುತ್ತಿದೆ. ಆದರೆ, ಕೆಲವು ರಾಜಕೀಯ ಪ್ರೇರಿತ ಬಲಂಥೀಯ ಗುಂಪುಗಳು ಶಾಲೆಯ ವಿರುದ್ಧ ಪ್ರತಿಭಟಿಸಿ ಮತಾಂತರದ ಆರೋಪ ಮಾಡಿದ್ದು, ಇವರ ಒತ್ತಡಕ್ಕೆ ಮಣಿದು ಕ್ಷೇತ್ರ ಶಿಕ್ಷಣಾಧಿಕಾರಿ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಗಮನಕ್ಕೂ ತರದೇ ಶಾಲೆಯನ್ನು ಮುಚ್ಚಲು ಆದೇಶ ನೀಡಿದ್ದಾರೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಹಿಜಾಬ್ ಧರಿಸಿದ್ದಕ್ಕಾಗಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿದ ಪ್ರಿನ್ಸಿಪಾಲ್
ಪುನೀತ್ ರಾಜ್ ಕುಮಾರ್ ಗೆ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಿದ ಕೆಎಂಎಫ್
ಕ್ರಿಸ್ಮಸ್ ಆಚರಣೆಗೆ ಅಡ್ಡಿ: ಬಜರಂಗದಳ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಮಹಿಳೆಯರು | ವಿಡಿಯೋ ವೈರಲ್