“ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯ ಬದಲು 5 ಕೆ.ಜಿ ಎಲ್ ಪಿಜಿ ಗ್ಯಾಸ್” - Mahanayaka
9:53 AM Thursday 14 - November 2024

“ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯ ಬದಲು 5 ಕೆ.ಜಿ ಎಲ್ ಪಿಜಿ ಗ್ಯಾಸ್”

lpg
01/01/2022

ಬೆಂಗಳೂರು:  ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯ ಬದಲು 5 ಕೆ.ಜಿ. ಎಲ್ ಪಿಜಿ ಗ್ಯಾಸ್ ನೀಡಬೇಕು ಎಂದು ಕರ್ನಾಟಕ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಬೇರೆ ರಾಜ್ಯಗಳಲ್ಲಿರುವಂತೆಯೇ ಪಡಿತರ ಆಹಾರ ಧಾನ್ಯದ ಜೊತೆಗೆ ಸಾರವರ್ಧಕ ಅಕ್ಕಿ ವಿತರಣೆ ಮತ್ತು ರೇಷನ್ ಕಾರ್ಡ್ ಗೆ 5 ಕೆ.ಜಿ. ಎಲ್ ಪಿಜಿ ನೀಡುವಂತೆ ಕರ್ನಾಟಕ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ರಾಜ್ಯಾಧ್ಯಕ್ಷ ಡಿ.ಜಿ. ಶಿವಾನಂದ ಒತ್ತಾಯಿಸಿದ್ದಾರೆ.

ಜನವರಿ 11 ರಂದು ಬೆಳಗಾವಿಯ ಕೊಂಡುಸ್ಕರ ಭವನದಲ್ಲಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ  ಶ್ರೀ ಕ್ಷೇತ್ರ ಯಡಿಯೂರು ಶ್ರೀಶೈಲಪೀಠದ ಡಾ. ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಆಹಾರ ಇಲಾಖೆ ಸಚಿವ ಉಮೇಶ್ ಕತ್ತಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ 5 ಕೆ.ಜಿ. ಎಲ್ ಪಿಜಿ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…




ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

50 ರೂಪಾಯಿ ಕದ್ದಿದ್ದಕ್ಕೆ ಮಗನನ್ನು ಥಳಿಸಿ ಕೊಂದ ತಂದೆ

ಭೀಮ ಕೋರೆಗಾಂವ್ ಕದನ- ಜಾತಿ ಸಂಕೋಲೆಯಿಂದ ಶಿಕ್ಷಣ ಬಿಡುಗಡೆಯಾದ ದಿನ

15-18ವರ್ಷದವರಿಗೆ ಕೊರೊನಾ ಲಸಿಕೆ  : ಇಂದಿನಿಂದಲೇ ನೋಂದಣಿ ಪ್ರಕ್ರಿಯೆ ಆರಂಭ

ಮತಾಂತರದ ಆರೋಪ: ಸೆಂಟ್​ ಪೌಲ್ ಶಾಲೆ ಮುಚ್ಚಲು ನೀಡಿದ್ದ ಆದೇಶಕ್ಕೆ ತಡೆ

ಹಿಜಾಬ್ ಧರಿಸಿದ್ದಕ್ಕಾಗಿ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರ ಹಾಕಿದ ಪ್ರಿನ್ಸಿಪಾಲ್

ಇತ್ತೀಚಿನ ಸುದ್ದಿ