ಉಡುಪಿ: ಸಾವಿತ್ರಿಭಾಯಿ ಫುಲೆ ಜಯಂತಿ, ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆ
ಉಡುಪಿ: ಸಾವಿತ್ರಿಭಾಯಿ ಫುಲೆ ಜಯಂತಿ ಮತ್ತು ಭೀಮಾ ಕೊರೆಗಾವ್ ವಿಜಯೋತ್ಸವವನ್ನು ಡಾ.ಬಿ.ಆರ್ ಅಂಬೇಡ್ಕರ್ ಭವನ ಆದಿ ಉಡುಪಿಯಲ್ಲಿ ಆಚರಿಸಲಾಯಿತು.
ಬುದ್ಧ ವಂದನೆಯ ನಂತರ ಸಭಾ ಕಾರ್ಯಕ್ರಮವನ್ನು ಜೀವನ್ ಕುಮಾರ್ ನಿರೀಕ್ಷಕರು, ಕಾರ್ಮಿಕ ಇಲಾಖೆ ಇವರು ಉದ್ಘಾಟಿಸಿದರು. ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರ ಜೀವನ ಮತ್ತು ಹೋರಾಟದ ವಿಷಯಗಳನ್ನು ಪ್ರದೀಪ್ ಹಾವಂಜೆ ಸವಿಸ್ತಾರವಾಗಿ ವಿವರಿಸಿದರು.
ಭೀಮಾ ಕೊರೆಗಾವ್ ವಿಜಯೋತ್ಸವದ ಐತಿಹಾಸಿಕ ವಿಶೇಷತೆಯನ್ನು ಮಂಜುನಾಥ್ ವಿ. ವಕೀಲರು ಉಡುಪಿ ಇವರು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಬುದ್ಧ ಟ್ರಸ್ಟ್ ನ ಟ್ರಸ್ಟಿ ಗೋಪಾಲಕೃಷ್ಣ ಕುಂದಾಪುರ ವಹಿಸಿದ್ದರು.
BSI ನ ಮಹಿಳಾ ಘಟಕದ ಉಪಾಧ್ಯಕ್ಷೆ ಕುಶಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಶೀಲ್ ಕುಮಾರ್ ಮಲ್ಪೆ ಸ್ವಾಗತಿಸಿದರು. ಅನುಶ್ರೀ ವಂದಿಸಿದರು, ಶಶಿ ಕಾರ್ಯಕ್ರಮವನ್ನು ನಿರ್ವಹಿಸಿದರು. ರವೀಂದ್ರ, ಗೀತಾ, ಮುರಳಿಧರ್, ಪ್ರಶಾಂತ್ ಬಿರ್ತಿ ಮುಂತಾದವರು ಕಾರ್ಯಕ್ರಮದ ವಿಶೇಷತೆಯನ್ನು ಸಾರುವ ಹಾಡುಗಳನ್ನು ಹಾಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಅಪಾರ್ಟ್ಮೆಂಟ್ ಫ್ಲಾಟ್ನಲ್ಲಿ ಯುವತಿಯ ಅನುಮಾನಾಸ್ಪದ ಸಾವು: ಟೆಕ್ಕಿ ಪೊಲೀಸ್ ವಶಕ್ಕೆ
ಕೊವಿಡ್ ಪ್ರಕರಣ ನಿಯಂತ್ರಣ ಮೀರಿದರೆ ಲಾಕ್ ಡೌನ್? | ವಾರಾಂತ್ಯದೊಳಗೆ ಅಂತಿಮ ನಿರ್ಧಾರ!
ಶಿಕ್ಷಣಾಧಿಕಾರಿಗೆ ಮೊದಲು ಹೂವಿನ ಹಾರ ಹಾಕಿದರು, ಆ ನಂತರ ಚಪ್ಪಲಿ ಹಾರ ಹಾಕಿದರು
ಗರ್ಭಿಣಿ ಸಂಜನಾ ಅವರ ಸಂತಸದ ಸಂದರ್ಭದಲ್ಲಿಯೂ ನೋಯಿಸಿದ ಆ ನ್ಯೂಸ್ ಚಾನೆಲ್!
ಏಕಾಏಕಿ ಆ್ಯಕ್ಟಿವ್ ಆದ ಸುಶಾಂತ್ ಸಿಂಗ್ ಫೇಸ್ ಬುಕ್ ಖಾತೆ | ಅಭಿಮಾನಿಗಳಿಗೆ ಶಾಕ್