ಆಸ್ತಿ ಸಿಕ್ಕಿದ ಬಳಿಕ ತಾಯಿ ಬೇಡವಾದಳು: ಮಕ್ಕಳಿಗೆ ತಕ್ಕ ಪಾಠ ಕಲಿಸಿದ ತಾಯಿ - Mahanayaka
12:23 PM Friday 20 - September 2024

ಆಸ್ತಿ ಸಿಕ್ಕಿದ ಬಳಿಕ ತಾಯಿ ಬೇಡವಾದಳು: ಮಕ್ಕಳಿಗೆ ತಕ್ಕ ಪಾಠ ಕಲಿಸಿದ ತಾಯಿ

premavva
07/01/2022

ಹಾವೇರಿ: ಆಸ್ತಿ ತಮ್ಮ ಹೆಸರಿಗೆ ಬರೆಸಿಕೊಂಡ ಮೇಲೆ ಹೆತ್ತ ತಾಯಿ ಮಕ್ಕಳಿಗೆ ಭಾರವಾಗಿ ಹೋದಳು. ಆಸ್ತಿ ಇಲ್ಲದ ತಾಯಿ ಯಾಕೆ ಎಂದು ಮಕ್ಕಳು ತಾಯಿಯನ್ನು ಮನೆಯಿಂದ ಹೊರಗೆ ಹಾಕಿ ಬಿಟ್ಟರು.  ಮಕ್ಕಳ ವರ್ತನೆಯಿಂದ ತೀವ್ರವಾಗಿ ನೊಂದ ತಾಯಿ ಇದೀಗ ಮಕ್ಕಳಿಗೆ ತಕ್ಕಪಾಠ ಕಲಿಸಿದ್ದಾರೆ.

ಈ ಘಟನೆ ನಡೆದಿರುವುದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ವೀರಾಪುರ ಗ್ರಾಮದಲ್ಲಿ.  76 ವರ್ಷ ವಯಸ್ಸಿನ ವೃದ್ಧೆ ಪ್ರೇಮವ್ವಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು.  ತಮ್ಮ ಪತಿ ಶ್ರೀಕಾಂತ ನಿಧನರಾದ ಬಳಿಕ ಪತಿಯ ಹೆಸರಿನಲ್ಲಿದ್ದ 3 ಎಕರೆ, 32 ಗುಂಟೆ ಜಮೀನನ್ನು ತಮ್ಮ ಇಬ್ಬರು ಮಕ್ಕಳಾದ ಧನಿಕುಮಾರ ಮತ್ತು ಸಂತೋಷ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಜೊತೆಗೆ ಗ್ರಾಮದಲ್ಲಿದ್ದ ಎರಡೂ ಮನೆಗಳನ್ನೂ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

ಆಸ್ತಿ ತಮ್ಮ ಹೆಸರಿಗೆ ಮಾಡಿಕೊಂಡ ತಕ್ಷಣವೇ ತಾಯಿಗೆ ಕಿರುಕುಳ ನೀಡಿ ತಾಯಿಯನ್ನು ಮನೆಯಿಂದ ಹೊರದಬ್ಬಿದ್ದಾರೆ ಎನ್ನಲಾಗಿದೆ.  ಇದರಿಂದಾಗಿ ಪ್ರೇಮವ್ವ ಹಾವೇರಿಯ ಈಡಾರಿ ಸಂಸ್ಥೆಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ವಾಸವಾಗಿದ್ದರು. ಬಳಿಕ ಸಾಂತ್ವನ ಕೇಂದ್ರದ ನೆರವಿನೊಂದಿಗೆ ಸವಣೂರು ಉಪ ವಿಭಾಗಾಧಿಕಾರಿಗಳಿಗೆ ಆಸ್ತಿ ಬಿಡಿಸಿಕೊಡುವಂತೆ ಪ್ರೇಮವ್ವ ಅರ್ಜಿ ಸಲ್ಲಿಸಿದರು. ಈ ಅರ್ಜಿಯ ಮೇರೆಗೆ ಇದೀಗ ಮಕ್ಕಳಿಂದ ತಾಯಿಗೆ ಆಸ್ತಿ ಜಮೀನು ಮತ್ತು ಮನೆಯನ್ನು ಬಿಡಿಸಿಕೊಟ್ಟಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂಗೆ ಸಚಿವರಿಂದಲೇ ವಿರೋಧ!

ಶಾಕಿಂಗ್ ನ್ಯೂಸ್:  ಫಿರಾನಾ ಮೀನಿನ ದಾಳಿಗೆ 4 ಮಂದಿ ಸಾವು | ಹಲವರು ನಾಪತ್ತೆ

ಕಳೆದ 24 ಗಂಟೆಗಳಲ್ಲಿ  91,೦೦೦ ಹೊಸ ಕೊರೊನಾ ಕೇಸ್ ದಾಖಲು!

ಕಾರಿನಲ್ಲಿಯೇ ಉದ್ಯಮಿಯನ್ನು ಕೊಚ್ಚಿ ಭೀಕರ ಹತ್ಯೆ

ಫುಡ್ ಡೆಲಿವರಿ ಬಾಯ್ ಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್: ವಿಡಿಯೋ ವೈರಲ್

ಇತ್ತೀಚಿನ ಸುದ್ದಿ