ನಟಿಗೆ ಕೊವಿಡ್ ಪಾಸಿಟಿವ್: ಸತ್ತು ಹೋಗಲು ಬೇಡಿದ ವಿಕೃತರು - Mahanayaka
6:04 AM Thursday 12 - December 2024

ನಟಿಗೆ ಕೊವಿಡ್ ಪಾಸಿಟಿವ್: ಸತ್ತು ಹೋಗಲು ಬೇಡಿದ ವಿಕೃತರು

swara baskar
08/01/2022

ನವದೆಹಲಿ: ನಟಿ ಸ್ವರಾ ಭಾಸ್ಕರ್ ಅವರಿಗೆ ಕೊವಿಡ್ ಪಾಸಿಟಿವ್ ದೃಢಗೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಗೆ ಕೆಲವು ವಿಕೃತ ಮನಸ್ಸಿನ ವ್ಯಕ್ತಿಗಳು ಅಸಹ್ಯ ಕಮೆಂಟ್ ಹಾಕಿದ್ದಾರೆ.

ಕೊವಿಡ್ ಹಿನ್ನೆಲೆಯಲ್ಲಿ ನಾನು ಕ್ವಾರಂಟೈನ್ ನಲ್ಲಿದ್ದೇನೆ ಎಂದು ಅವರು ಮಾಡಿರುವ ಪೋಸ್ಟ್ ಗೆ ಸಾಕಷ್ಟು ಜನರು ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದು ಕಮೆಂಟ್ ಮಾಡಿದ್ದಾರೆ. ಆದರೆ, ಇನ್ನು ಕೆಲವರು, ರೆಸ್ಟ್ ಇನ್ ಪೀಸ್, ಬೇಗ ಸತ್ತು ಹೋಗು ಎಂಬಂತಹ ಕಮೆಂಟ್ ಗಳನ್ನು ಹಾಕುವ ಮೂಲಕ ತಮ್ಮ ಸಂಸ್ಕೃತಿಯನ್ನು ತೋರಿಸಿದ್ದಾರೆ.

ಸ್ವರಾ ಭಾಸ್ಕರ್ ಅವರು ಸೌಹಾರ್ದ ಜೀವಿಯಾಗಿದ್ದು, ಈ ಹಿಂದೆ ಸೌಹಾರ್ದತೆಗೆ ಸಂಬಂಧಿಸಿದಂತೆ ಒಂದು ಪೋಸ್ಟ್ ಮಾಡಿದ್ದರು. ಇದರಲ್ಲಿ  ನಾನು 150 ದಿನ ಮುಸ್ಲಿಮ್, 100 ದಿನ ಕ್ರಿಶ್ಚಿಯನ್, 15 ದಿನ ಸಿಖ್ ಆಗಿರುತ್ತೇನೆ. 1 ದಿನ ಮಾತ್ರ ಹಿಂದೂವಾಗಿರುತ್ತೇನೆ ಎಂದು ಪೋಸ್ಟ್ ಮಾಡಿದ್ದರು. ಈ ವಿಚಾರವನ್ನೇ ಎತ್ತಿಕೊಂಡು ಬಲಪಂಥೀಯರೆನ್ನಲಾದ ಕೆಲವರು ವಿಕೃತ ಕಮೆಂಟ್ ಗಳನ್ನು ಹಾಕಿದ್ದಾರೆ.

ಇನ್ನೂ ಕಿಡಿಗೇಡಿಗಳ ಈ ಪೋಸ್ಟ್ ಗೆ ಸ್ನೇಹಿತರೇ, ದಯವಿಟ್ಟು ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಿ. ನನಗೆ ಏನಾದರೂ ಸಂಭವಿಸಿದರೆ,  ನೀವು ಜೀವನೋಪಾಯಕ್ಕೆ ಏನು ಮಾಡುತ್ತೀರಿ? ನಿಮ್ಮ ಮನೆಯನ್ನು ಹೇಗೆ ನಡೆಸುತ್ತೀರಿ? ಎಂದ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೊಬೈಲ್ ನುಂಗಿದ ಕೈದಿ: ಜೈಲು ಅಧಿಕಾರಿಗಳ ಕಣ್ತಪ್ಪಿಸಲು ಹೋಗಿ ಯಡವಟ್ಟು

ಕುಲ್ಕುಂದದ ಜಾತ್ರೆ / ಎರುಕನಡನ ಬೇಟಿ/ ಕಾರಿ ಕಬಿಲ ಜೋಡಿ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 13

6ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದಲೇ ಅತ್ಯಾಚಾರ

ಭೀಕರ ಅಪಘಾತ: ಅಯ್ಯಪ್ಪನ ದರ್ಶನ ಪಡೆದು ವಾಪಸ್ ಆಗುತ್ತಿದ್ದ ಇಬ್ಬರು ಸಾವು

‘ಹರೀಶ ವಯಸ್ಸು 36’ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಡಿದ  ಹಾಡು ಬಿಡುಗಡೆ

 

ಇತ್ತೀಚಿನ ಸುದ್ದಿ