ಸುವರ್ಣ ನ್ಯೂಸ್, ಕನ್ನಡ ಪ್ರಭಕ್ಕೆ ಲೀಗಲ್ ನೋಟಿಸ್ ಕಳಿಸಿದ ಬಿಟಿವಿ!
ಬೆಂಗಳೂರು: ಅಕ್ರಮ ಫಿಲ್ಟರ್ ಮರಳುದಂಧೆ ಬ್ಲ್ಯಾಕ್ ಮೇಲ್ ವಿಚಾರವಾಗಿ ಬಿಟಿವಿಯ ಉದ್ಯೋಗಿ ಎಂದು ಹೇಳಲಾಗಿದ್ದ ತೀರ್ಥಪ್ರಸಾದ್ ಎಂಬಾತನ ಬಂಧನದ ವಿಚಾರವಾಗಿ ಬಿಟಿವಿ ವಿರುದ್ಧ ವರದಿ ಮಾಡಿದ್ದ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ವಿರುದ್ಧ ಬಿಟಿವಿ ಲೀಗಲ್ ನೋಟಿಸ್ ಜಾರಿ ಮಾಡಿದೆ.
ಬಿಟಿವಿಯ ಎಕ್ಸಿಕ್ಯೂಟಿವ್ ಎಡಿಟರ್, ಹಿರಿಯ ವಕೀಲ ಎಸ್.ಬಾಲನ್ ಮೂಲಕ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭಕ್ಕೆ ಲೀಗಲ್ ನೋಟಿಸ್ ಜಾರಿ ಮಾಡಿ, ಒಂದು ಕೋಟಿ ರೂ. ಮಾನಹಾನಿ ಪರಿಹಾರ ಮತ್ತು ಬೇಷರತ್ ಕ್ಷಮೆ ಕೇಳಬೇಕು ಎಂದು ಸೂಚಿಸಿದ್ದಾರೆ. ತಪ್ಪಿದ್ದಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ ಎಂದು ಬಿಟಿವಿ ವರದಿ ಮಾಡಿದೆ.
ಅಕ್ರಮ ಫಿಲ್ಟರ್ ಮರಳುದಂಧೆಕೋರರಿಂದ ಹಣ ಪಡೆದುಕೊಂಡಿದ್ದ ತೀರ್ಥಪ್ರಸಾದ್ ಎಂಬಾತ ಬಿಟಿವಿಯ ಮಾಜಿ ಉದ್ಯೋಗಿಯಾಗಿದ್ದಾನೆ. ವಾಸ್ತವವಾಗಿ ಆರೋಪಿ ತೀರ್ಥಪ್ರಸಾದ ಎಂಬಾತ ಬಿಟಿವಿ ಉದ್ಯೋಗಿಯಲ್ಲ. ತೀರ್ಥಪ್ರಸಾದ್ ಬಿಟಿವಿ ಸುದ್ದಿ ವಾಹಿನಿಯಲ್ಲಿಸುದ್ದಿಯೇತರ ಸಿಬ್ಬಂದಿಯಾಗಿ ನವೆಂಬರ್ 01, 2020 ರಂದು ಕೆಲಸಕ್ಕೆ ಸೇರಿಕೊಂಡಿದ್ದು, ಸುದ್ದಿ ವಿಭಾಗಕ್ಕೆ ಸಂಬಂಧಪಟ್ಟಿಲ್ಲದ ವಿಡಿಯೋ ಎಡಿಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ತೀರ್ಥಪ್ರಸಾದನು 11.09.2021 ರಂದು ರಾಜೀನಾಮೆ ನೀಡಿದ್ದು, ಅದೇ ದಿನ ಅಂದರೆ 11.09.2021 ರಂದೇ ಆತನ ರಾಜೀನಾಮೆಯನ್ನು ಎಚ್ ಆರ್ ಮತ್ತು ಅಡ್ಮಿನ್ ಮುಖ್ಯಸ್ಥರು ತಮ್ಮ ಸಹಿ ಮತ್ತು ಅಧಿಕೃತ ಮುದ್ರೆಯೊಂದಿಗೆ ಅಂಗೀಕರಿಸಿದ್ದಾರೆ. 30.09.2021 ರಂದು ತೀರ್ಥಪ್ರಸಾದನನ್ನು ಬಿಟಿವಿ ನಿಯಮಗಳ ಪ್ರಕಾರ ಆತನನ್ನು ಕೆಲಸದಿಂದ ರಿಲೀವ್ ಮಾಡಲಾಗಿದೆ. ತೀರ್ಥಪ್ರಸಾದನು ರಾಜೀನಾಮೆ ನೀಡಿದ ಬಳಿಕ ಆತನ ಎಲ್ಲಾ ಸಂಬಳದ ಹಣವನ್ನು ಆತನ ಅಧಿಕೃತ ಸ್ಯಾಲರಿ ಅಕೌಂಟ್ ಮೂಲಕವೇ ಚುಕ್ತಾ ಮಾಡಲಾಗಿದೆ. ಭವಿಷ್ಯನಿಧಿ ಕಚೇರಿಯಲ್ಲೂ ಆತನ ರಾಜೀನಾಮೆಯ ದಿನಾಂಕ ನಮೂದಿಸಲಾಗಿದೆ ಎಂದು ಬಿಟಿವಿ ತಿಳಿಸಿದೆ.
ಅಕ್ರಮ ಫಿಲ್ಟರ್ ಮರಳುದಂಧೆಕೋರರಿಂದ ಹಣ ಪಡೆದುಕೊಂಡಿದ್ದ ಬಿಟಿವಿಯ ಮಾಜಿ ಉದ್ಯೋಗಿ ತೀರ್ಥಪ್ರಸಾದ್ ನನ್ನು ಬಿಟಿವಿ ಸಂಪಾದಕರ ದೂರಿನ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಹೆಣ್ಣೂರು ಪೊಲೀಸರು ತೀರ್ಥಪ್ರಸಾದನ ವಿರುದ್ಧ ದಾಖಲಿಸಿದ್ದ ಎಫ್ ೈ ಆರ್ ನಲ್ಲಿ ತೀರ್ಥಪ್ರಸಾದನ ಹೊರತು ಬೇರಾವುದೇ ಆರೋಪಿಗಳನ್ನು ಹೆಸರಿಲ್ಲ.ಆದರೆ ಆರೋಪಿಯ ಜೊತೆಗೆ ಬಿಟಿವಿಯ ಎಕ್ಸಿಕ್ಯೂಟಿವ್ ಎಡಿಟರ್ ಶಿವಸ್ವಾಮಿ ಮತ್ತಿತರರ ಹೆಸರು ಸೇರಿಸಿ ಸುಳ್ಳು ಸುದ್ದಿಯನ್ನು ಪ್ರಸಾರಿಸಲಾಗಿತ್ತು. ಸುವರ್ಣ ನ್ಯೂಸ್ ನ ರಾತ್ರಿಯ ಮುಖ್ಯ ಬುಲೆಟಿನಲ್ಲಿ “ಶಿವಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು” ಎಂದು ಫುಲ್ಪ್ಲೇಟ್ ಬ್ರೇಕಿಂಗ್ ಹಾಕಲಾಗಿತ್ತು. ನ್ಯಾಯಾಲಯಕ್ಕೆ ಸಂಬಂಧಪಟ್ಟ “ರಿಮ್ಯಾಂಡ್ ರಿಪೋರ್ಟ್” ಅನ್ನು ನಕಲಿ ಸೃಷ್ಟಿ ಮಾಡಿ ಅದರಲ್ಲಿ ಶಿವಸ್ವಾಮಿ ಹೆಸರು ಸೇರಿಸಿ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಶಿವಸ್ವಾಮಿ ಹೆಸರು ಇರುವಂತಹ ರಿಮ್ಯಾಂಡ್ ರಿಪೋರ್ಟ್ ಕೋರ್ಟ್ ಗೆ ಸಲ್ಲಿಕೆಯಾಗಲೇ ಇಲ್ಲ. ನ್ಯಾಯಾಲಯಕ್ಕೆ ಸೇರಬೇಕಿರುವ ರಹಸ್ಯ ದಾಖಲೆಯನ್ನು ತಿದ್ದಿ ನಕಲಿ ಮಾಡಿದ ಗಂಭೀರ ಅಪರಾಧ ಮಾಡಿದ್ದಲ್ಲದೆ, ಅದರಲ್ಲಿ ಶಿವಸ್ವಾಮಿ ಹೆಸರು ಸೇರಿಸಿ ಮಾನನಷ್ಟ ಮಾಡಲಾಗಿದೆ ಎಂದು ಬಿಟಿವಿ ಆರೋಪಿಸಿದೆ.
ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆ, ಔಟ್ಪುಟ್ ಚೀಫ್ ಎಂ.ಸಿ. ಶೋಭಾ, ಇನ್ಪುಟ್ ಚೀಫ್ ಅಭಿನಂದನ್, ರಿಪೋರ್ಟರ್ ಪ್ರದೀಪ್, ಕಂಟೆಂಟ್ ಎಡಿಟರ್ ಅವಿನಾಶ ಎಚ್.ಎಸ್., ಡಿಜಿಟಲ್ ಮೀಡಿಯಾ ಹೆಡ್ ವಿರುದ್ಧ ಬಾಲನ್ ಅ್ಯಂಡ್ ಅಸೋಶಿಯೇಟ್ ಲೀಗಲ್ ನೋಟಿಸ್ ಜಾರಿ ಮಾಡಿದೆ. 14 ದಿನದೊಳಗೆ ಒಂದು ಕೋಟಿ ರೂಗಳನ್ನು ಸುವರ್ಣ ನ್ಯೂಸ್ ಪಾವತಿಸಬೇಕು ಮತ್ತು ಟಿವಿಯಲ್ಲಿ ಕ್ಷಮೆ ಕೇಳುವುದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಇರುವ ಸುದ್ದಿಗಳನ್ನು ಡಿಲೀಟ್ ಮಾಡಬೇಕು ಎಂದು ಲೀಗಲ್ ನೋಟಿಸ್ ಹೇಳಲಾಗಿದೆ ಎಂದು ಬಿಟಿವಿ ವರದಿ ಮಾಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
“ಗಾಡಿ ಜೊತೆ ನನ್ ಹೆಂಡ್ತಿ ಮಕ್ಳನ್ನೂ ಸೀಝ್ ಮಾಡಿ…”
“ನಾಯಿಗಳಿಗೆ ವ್ಯಾಕ್ಸಿನ್ ಹಾಕಿಸ್ಬೇಕು ಹೋಗಲು ಬಿಡಿ ಸರ್…”
ಮಂಗಳೂರು: ದೈವ ನಿಂದನೆಯ ಮತ್ತೊಂದು ವಿಡಿಯೋ ವೈರಲ್!
ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿದ ಮಲ್ಲಿಕಾರ್ಜುನ ಖರ್ಗೆ