ಖ್ಯಾತ ಕ್ರಿಕೆಟಿಗ ನೇಣು ಬಿಗಿದು ಆತ್ಮಹತ್ಯೆ
17/11/2020
ಢಾಕಾ: ಬಾಂಗ್ಲಾದೇಶದ 19 ವರ್ಷದ ಖ್ಯಾತ ಕ್ರಿಕೆಟಿಗ ಅವಕಾಶ ವಂಚಿತರಾದ ಬಳಿಕ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದು, ತಮ್ಮ ನಿವಾಸದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೊಹಮ್ಮದ್ ಶಾಜಿಬ್ ಆತ್ಮಹತ್ಯೆಗೆ ಶರಣಾದ ಬಾಂಗ್ಲಾದೇಶದ ಕ್ರಿಕೆಟಿಗ ಟಿ-20 ಪಂದ್ಯದಲ್ಲಿ ಅವಕಾಶ ದೊರಕಲಿಲ್ಲ ಎಂಬ ಕೊರಗಿನಿಂದ ಇವರು ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಶಾಜಿಬ್ ದುರ್ಗಾಪುರದ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದುರ್ಗಾಪುರ ಪೊಲೀಸ್ ಠಾಣೆ ಉಸ್ತುವಾರಿ ಹಶ್ಮೋತ್ ಅಲಿ ತಿಳಿಸಿದ್ದಾರೆ.
2017 ರಲ್ಲಿ ಅಂಡರ್ 19 ಏಷ್ಯಾಕಪ್ ನಲ್ಲಿ ಬಾಂಗ್ಲಾದೇಶ ತಂಡವನ್ನು ಅವರು ಪ್ರತಿನಿಧಿಸಿದ್ದರು. 2018 ರಲ್ಲಿ ಅಂಡರ್ 19 ವಿಶ್ವಕಪ್ ನಲ್ಲಿ ಸ್ಟ್ಯಾಂಡ್ ಬೈ ಆಟಗಾರರಾಗಿದ್ದರು.