ಅಂಬೇಡ್ಕರ್ ಸಂಘ ಸ್ಥಾಪಿಸುವುದನ್ನು ವಿರೋಧಿಸಿ ದಲಿತರ ಮೇಲೆ ಹಲ್ಲೆ
ಸಕಲೇಶಪುರ: ಅಂಬೇಡ್ಕರ್ ಸಂಘ ಸ್ಥಾಪಿಸಿದ್ದನ್ನು ವಿರೋಧಿಸಿ ದಲಿತರ ಮೇಲೆ ಸುಮಾರು 40ಕ್ಕೂ ಅಧಿಕ ಮಂದಿ ಗುಂಪು ಕಟ್ಟಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದ್ದು, ದಲಿತ ಮಹಿಳೆಯರ ಮೇಲೆ ಕೂಡ ದೌರ್ಜನ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ದೇವಲಕೆರೆ ಗ್ರಾ.ಪಂ. ವ್ಯಾಪ್ತಿಯ ನೀಕನಹಳ್ಳಿ ಸಮೀಪದ ನಿರ್ಮಲ ನಗರದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಯ ಪರಿಣಾಮ ಅಣ್ಣಪ್ಪ, ರಾಜು, ಸುಂದರ ಎಂಬವರು ಗಾಯಗೊಂಡಿದ್ದು, ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಿ ಕರ್ನಾಟಕ ಪರಿಶಿಷ್ಟ ಜಾತಿ ಜನಾಂಗಕ್ಕೆ ಸೇರಿದ ಇವರು ಅಂಬೇಡ್ಕರ್ ಸಂಘವನ್ನು ಸ್ಥಾಪಿಸಬೇಕು ಎಂದು ಚರ್ಚೆ ನಡೆಸಿದ್ದು, ಇದನ್ನು ತಿಳಿದ ಗುಂಪೊಂದು, ಅಂಬೇಡ್ಕರ್ ಸಂಘ ಸ್ಥಾಪಿಸಬಾರದು ಎಂದು ದಲಿತ ಯುವಕರನ್ನು ಕರೆದು ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.
ಶನಿವಾರ ರಾತ್ರಿ ವೇಳೆ ಸುಮಾರು 40 ಜನರ ಗುಂಪು ಗ್ರಾಮಕ್ಕೆ ದಾಳಿ ನಡೆಸಿ ಅಣ್ಣಪ್ಪ, ರಾಜು, ಸುಂದರ ಅವರ ಮೇಲೆ ಮನ ಬಂದಂತೆ ಥಳಿಸಿದೆ ಎಂದು ದೂರಲಾಗಿದೆ.
ಘಟನೆ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಸುಮಾರು 20 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಕೊವಿಡ್ ದೃಢ
ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ಬ್ಲ್ಯಾಕ್ ಮೇಲ್: ಆರೋಪಿ ರಾಹುಲ್ ಭಟ್ ಸಿಸಿಬಿ ವಶಕ್ಕೆ