ಮನುಷ್ಯನಿಗೆ ಹಂದಿಯ ಹೃದಯ ಅಳವಡಿಕೆ ಯಶಸ್ವಿ: ವಿಜ್ಞಾನದಲ್ಲಿ ಮತ್ತೊಂದು ಸಾಧನೆ
ಲೆಕ್ಸಿಂಗ್ಟನ್: ಹಂದಿಯ ಹೃದಯವನ್ನು ಮನುಷ್ಯನಿಗೆ ಅಳವಡಿಸುವಲ್ಲಿ ಅಮೆರಿಕ ವೈದ್ಯರು ಯಶಸ್ವಿಯಾಗಿದ್ದು, ವಿಜ್ಞಾನದಲ್ಲಿ ಹೊಸತೊಂದು ಸಾಧನೆಯನ್ನು ಮಾಡಲಾಗಿದೆ.
ಮನುಷ್ಯನಿಗೆ ಹಂದಿಯ ಹೃದಯವನ್ನು ಕೂಡ ಅಳವಡಿಸಬಹುದು. ಆ ಮೂಲಕ ಮನುಷ್ಯನ ಪ್ರಾಣ ಉಳಿಸಬಹುದು ಎನ್ನುವುದನ್ನು ವೈದ್ಯರು ಆವಿಷ್ಕರಿಸಿದ್ದು, ಈ ಮೂಲಕ ಮನುಷ್ಯನ ಪ್ರಾಣ ಉಳಿಸಲು ಇನ್ನಷ್ಟು ಅವಕಾಶ ಸಿಕ್ಕಂತಾಗಿದೆ.
ಶಸ್ತ್ರಚಿಕಿತ್ಸೆಯ ಮೂರು ದಿನಗಳ ನಂತರ ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯರು ತಿಳಿಸಿದ್ದಾರೆ.
57 ವರ್ಷ ವಯಸ್ಸಿನ ಡೇವಿಡ್ ಬೆನೆಟ್ ತೀವ್ರವಾದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಾಗಿ ಶುಕ್ರವಾರ ಅವರಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿ ಹಂದಿ ಹೃದಯವನ್ನು ಯಶಸ್ವಿಯಾಗಿ ಜೋಡನೆ ಮಾಡಿ ಬದುಕಿಸಲಾಗಿದೆ.
ಈ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮಾನವನ ದೇಹದಲ್ಲಿ ಪ್ರಾಣಿಗಳ ಹೃದಯವು ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ದೃಢೀಕರಿಸಲಾಗಿದೆ. ಶಸ್ತ್ರಚಿಕಿತ್ಸೆಗಳಿಗೆ ಬೇಕಾದ ಮಾನವ ಅಂಗಾಂಗಗಳ ಕೊರತೆಯಿರುವ ಈ ಸಂದರ್ಭದಲ್ಲಿ ಪ್ರಾಣಿಗಳ ಅಂಗಗಳನ್ನು ಹೇಗೆ ಬಳಸುವುದು ಎಂಬುದನ್ನು ತಿಳಿಯಲು ಅನ್ವೇಷಣೆಗಳು ನಡೆಯುತ್ತಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಟೆಲಿಗ್ರಾಮ್ ಗ್ರೂಪ್ ಮೂಲಕ ಹಣ, ಲೈಂಗಿಕತೆಗಾಗಿ ಪತ್ನಿಯರ ವಿನಿಮಯ | ವಿಲಕ್ಷಣ ಘಟನೆ
ಅಂಬೇಡ್ಕರ್ ಸಂಘ ಸ್ಥಾಪಿಸುವುದನ್ನು ವಿರೋಧಿಸಿ ದಲಿತರ ಮೇಲೆ ಹಲ್ಲೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಕೊವಿಡ್ ದೃಢ
ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ಬ್ಲ್ಯಾಕ್ ಮೇಲ್: ಆರೋಪಿ ರಾಹುಲ್ ಭಟ್ ಸಿಸಿಬಿ ವಶಕ್ಕೆ