77ರ ವೃದ್ಧ ಸೇರಿದಂತೆ 8 ಮಂದಿಯಿಂದ ಬಾಲಕಿಯ ಮೇಲೆ ಅತ್ಯಾಚಾರ
ಚೆನ್ನೈ: 77 ವರ್ಷದ ವೃದ್ಧ ಸೇರಿದಂತೆ 8 ಮಂದಿ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿರುವ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಗಿಂಗಿ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.
11ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದು, ಹೀಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈ ವೇಳೆ ಬಾಲಕಿ 6 ತಿಂಗಳ ಗರ್ಭಿಣಿ ಎನ್ನುವುದು ತಿಳಿದು ಬಂದಿದೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ 77 ವರ್ಷ ವಯಸ್ಸಿನ ವೃದ್ಧನ ಸಹಿತ ಬಾಲಕಿಯ ಸಹೋದರ ಸಂಬಂಧಿಗಳು ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ತನ್ನ ತಾಯಿ ತೀರಿಕೊಂಡ ಬಳಿಕ ಚಿಕ್ಕಮ್ಮನೊಂದಿಗೆ ಗಿಂಗಿ ಬಳಿಯ ಹಳ್ಳಿಯೊಂದರಲ್ಲಿ ವಾಸವಾಗಿದ್ದಳು. ಬಾಲಕಿ ತಂದೆ ಬೇರೆಡೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆಯಲ್ಲಿ ಆಕೆಯ ಮೇಲೆ ನೆರೆಹೊರೆಯ ಸಂಬಂಧಿಕರೇ ಅತ್ಯಾಚಾರ ನಡೆಸಿರುವುದಾಗಿ ಬಾಲಕಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾಳೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಶಿವರಾಜ್ ಕುಮಾರ್ ಪಾದಯಾತ್ರೆಗೆ ಹೋಗದಿರುವುದು ನನಗೆ ತುಂಬಾ ಸಂತೋಷವಾಗಿದೆ | ಸಚಿವ ಈಶ್ವರಪ್ಪ
ಗಾಯಕಿ ಲತಾ ಮಂಗೇಶ್ಕರ್ ಅನಾರೋಗ್ಯ: ಐಸಿಯುನಲ್ಲಿ ಚಿಕಿತ್ಸೆ
ಮನುಷ್ಯನಿಗೆ ಹಂದಿಯ ಹೃದಯ ಅಳವಡಿಕೆ ಯಶಸ್ವಿ: ವಿಜ್ಞಾನದಲ್ಲಿ ಮತ್ತೊಂದು ಸಾಧನೆ
ಟೆಲಿಗ್ರಾಮ್ ಗ್ರೂಪ್ ಮೂಲಕ ಹಣ, ಲೈಂಗಿಕತೆಗಾಗಿ ಪತ್ನಿಯರ ವಿನಿಮಯ | ವಿಲಕ್ಷಣ ಘಟನೆ